ಸ್ಟ್ರೇಟ್ ಕೂದಲು ಮಾಡಿಕೊಳ್ಳಲು ಪಾರ್ಲರಿಗೇ ಹೋಗ್ಬೇಕಿಲ್ಲ, ಬಳಸೀ ನೈಸರ್ಗಿಕ ಮಾರ್ಗ!

ಸ್ಟ್ರೇಟ್ ಕೂದಲು ಮಾಡಿಕೊಳ್ಳಲು ಪಾರ್ಲರಿಗೇ ಹೋಗ್ಬೇಕಿಲ್ಲ, ಬಳಸೀ ನೈಸರ್ಗಿಕ ಮಾರ್ಗ!

ಸ್ಟ್ರೇಟ್​ ಕೂದಲು ಅಂದ್ರೆ ಈಗಿನವರಿಗೆ ಒಂದು ಟ್ರೆಂಡ್. ಹಾಗಾಗಿ ಅದೆಷ್ಟೋ ಮಂದಿ ಪಾರ್ಲರ್​ಗಳ ಮೊರೆ ಹೋಗಿ ಕೂದಲನ್ನು ಸ್ಟ್ರೇಟ್ ಮಾಡಿಸಿಕೊಳ್ತಾರೆ. ಅಷ್ಟೇ ಅಲ್ಲ, ಸಾಕಷ್ಟು ಪ್ರೊಡಕ್ಟ್ ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಅವುಗಳು ನಿಮ್ಮ ಕೂದಲಿನ ಸ್ವರೂಪದ ಬದಲಾವಣೆಯನ್ನು ಭಾರೀ ಮಟ್ಟದಲ್ಲಿ ಮಾಡುತ್ತವೆ ಎಂದು ಹೇಳಲಾಗುತ್ತೆ

ಯಾರು ನೈಸರ್ಗಿಕವಾಗಿ ನೇರ ಕೂದಲನ್ನು ಪಡೆದಿರುವುದಿಲ್ಲವೋ ಅಂತವರಲ್ಲಿ ಹೆಚ್ಚಿನವರು ತಮ್ಮ ಗುಂಗುರು ಕೂದಲನ್ನು ಹೋಗಲಾಡಿಸಿಕೊಂಡು, ನೇರ ಕೂದಲನ್ನು ಪಡೆಯುವ ನಿಟ್ಟಿನಲ್ಲಿ ಕೆಮಿಕಲ್ ಮಯ ಟ್ರೀಟ್ ಮೆಂಟ್ ಗಳ ಮೊರೆ ಹೋಗುತ್ತಾರೆ. ಹಾಗಾಗಿ ಸಾಕಷ್ಟು ಬ್ಯೂಟಿ ಪಾರ್ಲರ್ ಗಳೂ ಕೂಡ ಇಂತಹ ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗಳನ್ನು ನೀಡಿ ಕ್ಷಣಮಾತ್ರದಲ್ಲಿ ನಿಮ್ಮ ಕೂದಲನ್ನು ನೇರವಾಗಿಸಿ ಬಿಡುತ್ತಾರೆ. ಆದರೆ ಇವು ಶಾಶ್ವತ ಅಲ್ಲ ಅಂದರೆ ಹೆಚ್ಚು ದಿನ ಇರುವುದಿಲ್ಲ.

ಇಂತಹ ಪ್ರೊಡಕ್ಟ್ ಗಳ ಒಂದು ದೊಡ್ಡ ಸಮಸ್ಯೆಯೆಂದರೆ ಅವುಗಳಲ್ಲಿ ಅತಿಯಾಗಿ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿದ್ದು ಅವು ನಿಮ್ಮ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಕೆಲವೇ ದಿನದಲ್ಲಿ ನೀವು ಸಲೂನ್​ನಲ್ಲಿ ಸ್ಟ್ರೈಟ್ ಮಾಡಿಸಿಕೊಂಡ ಕೂದಲು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗೆ ಕೂದಲನ್ನು ನೇರವಾಗಿಸಲು ಕೆಲವು ರಾಸಾಯನಿಕ ರಹಿತ ಕೆಲವು ನೈಸರ್ಗಿಕ ಮಾರ್ಗಗಳಿವೆ ಅವುಗಳೆಂದರೆ

ಕೂದಲು ಗಂಟಾಗದಂತೆ ನೋಡಿಕೊಳ್ಳುತ್ತೆ ಹಾಲು: ಹಾಲು ಕೂದಲನ್ನು ಮೃದುವಾಗಿ ಮತ್ತು ಗಂಟಾಗದಂತೆ ನೋಡಿಕೊಳ್ಳುತ್ತೆ. ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿರುತ್ತೆ. ಇದು ನಿಮ್ಮ ಕರ್ಲಿ ಹೇರನ್ನು ಸ್ಟ್ರೇಟಾಗಿಸಲು ಸಹಾಯ ಮಾಡುತ್ತೆ.

ವಿಧಾನ-1: ಒಂದು ಕಪ್ ಹಾಲು ಮತ್ತು ನೀರನ್ನು ಮಿಕ್ಸ್ ಮಾಡಿಕೊಳ್ಳಿ. ಒಂದು ಸ್ಪ್ರೇ ಬಾಟಲ್ ನಲ್ಲಿ ಅದನ್ನು ಸ್ಟೋರ್ ಮಾಡಿ. ಇದನ್ನು ಅಪ್ಲೈ ಮಾಡಿಕೊಳ್ಳುವ ಮುನ್ನ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ ಮತ್ತು ಸಿಕ್ಕುಗಳಿದ್ದಲ್ಲಿ ಬಿಡಿಸಿಕೊಳ್ಳಿ. ನಂತರ ನಿಮ್ಮ ಕೂದಲಿಗೆ ಅಪ್ಲೈ ಮಾಡಿ ಮತ್ತೆ ಕೂದಲನ್ನು ಬಾಚಿಕೊಳ್ಳಿ. ಇದನ್ನು 30 ನಿಮಿಷ ಹಾಗೆಯೇ ಬಿಡಿ. ಹಾಲನ್ನು ನಿಮ್ಮ ಕೂದಲು ಹೀರಿಕೊಳ್ಳಲಿ. ನಂತರ ಕೂದಲನ್ನು ಶಾಂಪೂ ಮತ್ತು ಕಂಡೀಷನರ್ ಬಳಸಿ ವಾಷ್ ಮಾಡಿಕೊಳ್ಳಿ.

ವಿಧಾನ-2: ಒಂದು ಕಪ್ ನಷ್ಟು ಹಾಲಿಗೆ 3 ಟೇಬಲ್ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ 2 ರಿಂದ 3 ಟೇಬಲ್ ಸ್ಪೂನ್ ಬಾಳೆಹಣ್ಣನ್ನು ಸೇರಿಸಿ ಮತ್ತಷ್ಟು ಗಟ್ಟಿ ಪೇಸ್ಟ್ ತಯಾರಿಸಿ. ಬಾಳೆಹಣ್ಣು ಕೂದಲಿಗೆ ಉತ್ತಮ ಮಾಯ್ಚಿರೈಸರ್ ಆಗಬಲ್ಲದು. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಇಲ್ಲವೇ ಅದಕ್ಕಿಂತ ಹೆಚ್ಚು ಸಮಯ ಕೂದಲಿನಲ್ಲೇ ಬಿಡಿ. ಸರಿಯಾಗಿ ಒಣಗುವ ವರೆಗೆ ಕಾಯಿರಿ. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

ಆಲಿವ್ ಆಯಿಲ್ ಮತ್ತು ಮೊಟ್ಟೆ: ಆಲಿವ್ ಆಯಿಲ್ ಕೂದಲನ್ನು ಮಾಯ್ಚಿರೈಸ್ ಆಗಿರುವಂತೆ ನೋಡಿಕೊಳ್ಳುತ್ತೆ ಮತ್ತು ಮೊಟ್ಟೆಯು ನಿಮ್ಮ ಕೂದಲನ್ನು ಸ್ಟ್ರಾಂಗಾಗಿ ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತೆ.

ವಿಧಾನ: ಎರಡು ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ ಅದನ್ನು 4 ಟೇಬಲ್ ಸ್ಪೂನ್ ಆಲಿವ್ ಆಯಿಲ್ ನೊಂದಿಗೆ ಮಿಕ್ಸ್ ಮಾಡಿ. ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ, ನಂತರ ನಿಮ್ಮ ಕೂದಲನ್ನು ಬಾಚಿಕೊಳ್ಳಿ ನಂತರ ಶವರ್ ಕ್ಯಾಪ್ ಧರಿಸಿ. ಸುಮಾರು 30 ರಿಂದ 45 ನಿಮಿಷ ಹಾಗೆಯೇ ಇರಲಿ. ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ತೊಳೆಯಿರಿ

ಮುಲ್ತಾನಿ ಮಿಟ್ಟಿ ಡ್ಯಾಮೇಜ್ ಕಂಟ್ರೋಲ್  ಸಹ ಮಾಡುತ್ತೆ: ಮುಲ್ತಾನಿ ಮಿಟ್ಟಿಯನ್ನು ಬೆಸ್ಟ್ ಕ್ಲೆನ್ಸಿಂಗ್ ಏಜೆಂಟ್ ಎಂದು ಪರಿಗಣಿಸಲಾಗುತ್ತೆ. ಕೂದಲನ್ನು ಸ್ಟ್ರೈಟ್ ಮಾಡುವುದರ ಜೊತೆಗೆ ಇದು ಡ್ಯಾಮೇಜ್ ಕಂಟ್ರೋಲ್ ನಂತೆ ವರ್ತಿಸುತ್ತೆ. ಬೇಕಾಗುವ ಸಾಮಗ್ರಿಗಳು ಒಂದು ಕಪ್ ಮುಲ್ತಾನಿ ಮಿಟ್ಟಿ 1 ಮೊಟ್ಟೆಯ ಬಿಳಿಯ ಭಾಗ 2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು

ಮಾಡುವ ವಿಧಾನ: ಒಂದು ಕಪ್ ಮುಲ್ತಾನಿ ಮಿಟ್ಟಿ,ಒಂದು ಮೊಟ್ಟೆಯ ಬಿಳಿಭಾಗ ಮತ್ತು ಎರಡು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗಟ್ಟಿ ಪೇಸ್ಟ್ ನಂತಾಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ.

ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ನಂತರ ದಪ್ಪ ಹಲ್ಲಿನ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ. ಒಂದು ಗಂಟೆ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯರಿ. ನಂತರ ಹಾಲನ್ನು ನಿಮ್ಮ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. 15 ನಿಮಿಷ ಹಾಗೆಯೇ ಬಿಟ್ಟು ನಂತರ ಶಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ.

ಹಾಟ್ ಆಯಿಲ್ ಮಸಾಜ್ ಉಪಯೋಗಿಸುವ ವಿಧಾನ: ಸ್ವಲ್ಪ ಹದ ಬೆಚ್ಚಗಿರುವ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನೀವು ಯಾವುದೇ ನಿಮ್ಮ ಇಚ್ಛೆಯ ಎಣ್ಣೆಯನ್ನು ಆಯ್ದುಕೊಳ್ಳಬಹುದು.ಎಣ್ಣೆಯು ಪ್ರತಿ ಕೂದಲಿನ ಬುಡಕ್ಕೂ ಸಮನಾಗಿ ಹಂಚಿಕೆಯಾಗಬೇಕು ಎಂದರೆ ನೀವು ದಪ್ಪ ಹಲ್ಲಿನ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿಕೊಳ್ಳಬೇಕು.

ಇದು ನೀವು ಕೂದಲು ತೊಳೆಯುವಾಗ ಆಗುವ ಬ್ರೇಕೇಜನ್ನು ಕೂಡ ನಿವಾರಿಸುತ್ತೆ. ನಂತ್ರ ಬಿಸಿಯಾದ, ಮತ್ತು ಒದ್ದೆಯಾದ ಟವೆಲ್ ನಿಂದ 30 ರಿಂದ 40 ನಿಮಿಷ ನಿಮ್ಮ ಕೂದಲನ್ನು ಸುತ್ತಿಕೊಳ್ಳಿ 40 ನಿಮಿಷದ ನಂತರ ಕೂದಲನ್ನು ಮೃದುವಾದ ಶಾಂಪೂ ಬಳಸಿ ವಾಷ್ ಮಾಡಿ. ನಂತರ ನಿಮ್ಮ ಕೂದಲನ್ನು ಒದ್ದೆ ಇರುವಾಗಲೇ ಬಾಚಿಕೊಳ್ಳಿ.ನಂತರ ಡ್ರೈ ಆಗಲು ಬಿಡಿ.

Published On - 11:00 pm, Thu, 14 November 19

Click on your DTH Provider to Add TV9 Kannada