ಕಿವಿ ಹಿಂಡುವುದರಿಂದ ಸಿಗಲಿವೆ ಹಲವು ಉಪಯೋಗಗಳು!

|

Updated on: Jan 14, 2020 | 12:09 PM

ಸಾಮಾನ್ಯವಾಗಿ ಭಾರತೀಯ ಶಾಲೆಗಳಲ್ಲಿ ಈ ಹಿಂದೆ ಶಿಕ್ಷಕರು ಮಕ್ಕಳಿಗೆ ಕಿವಿ ಹಿಂಡುವ ಶಿಕ್ಷೆ ಕೊಡೋದನ್ನು ನೀವು ಗಮನಿಸಿದ್ದೀರಿ. ಅದ್ರ ಹಿಂದೆ ಒಂದೊಳ್ಳೆ ಉದ್ದೇಶ ಇದೆ ಅನ್ನೋದಾದ್ರೂ, ಅದು ಮಕ್ಕಳಿಗೆ ಬುದ್ಧಿ ಕಲಿಸೋ ಉದ್ದೇಶ ಅಂತ ತಿಳ್ಕೊಂಡಿರ್ತೇವೆ. ಆದ್ರೆ ವಿಷಯ ಅಂದ್ರೆ ಕಿವಿ ಹಿಂಡಿಸಿಕೊಳ್ಳೋದ್ರಿಂದ ಬಹಳ ಬೆನಿಫಿಟ್ ಇದೆ. ಇದ್ರ ಜೊತೆ ಜೊತೆಗೆ ತಮ್ಮ ಕಿವಿಯನ್ನು ತಾವೇ ಹಿಡಿದು ಬಸ್ಕಿ ಹೊಡೆಯೋದು ಕೂಡಾ ಬಹಳ ಹಳೆ ಶಿಕ್ಷೆಯೇ! ಈ ಶಿಕ್ಷೆ ಪಡೆದುಕೊಂಡವರಿಗೆ ಮಾತ್ರ ಅದ್ರ ಅನುಭವ ಗೊತ್ತಿರೋದು. ಬಲಕೈಯಿಂದ […]

ಕಿವಿ ಹಿಂಡುವುದರಿಂದ ಸಿಗಲಿವೆ ಹಲವು ಉಪಯೋಗಗಳು!
Follow us on

ಸಾಮಾನ್ಯವಾಗಿ ಭಾರತೀಯ ಶಾಲೆಗಳಲ್ಲಿ ಈ ಹಿಂದೆ ಶಿಕ್ಷಕರು ಮಕ್ಕಳಿಗೆ ಕಿವಿ ಹಿಂಡುವ ಶಿಕ್ಷೆ ಕೊಡೋದನ್ನು ನೀವು ಗಮನಿಸಿದ್ದೀರಿ. ಅದ್ರ ಹಿಂದೆ ಒಂದೊಳ್ಳೆ ಉದ್ದೇಶ ಇದೆ ಅನ್ನೋದಾದ್ರೂ, ಅದು ಮಕ್ಕಳಿಗೆ ಬುದ್ಧಿ ಕಲಿಸೋ ಉದ್ದೇಶ ಅಂತ ತಿಳ್ಕೊಂಡಿರ್ತೇವೆ. ಆದ್ರೆ ವಿಷಯ ಅಂದ್ರೆ ಕಿವಿ ಹಿಂಡಿಸಿಕೊಳ್ಳೋದ್ರಿಂದ ಬಹಳ ಬೆನಿಫಿಟ್ ಇದೆ.

ಇದ್ರ ಜೊತೆ ಜೊತೆಗೆ ತಮ್ಮ ಕಿವಿಯನ್ನು ತಾವೇ ಹಿಡಿದು ಬಸ್ಕಿ ಹೊಡೆಯೋದು ಕೂಡಾ ಬಹಳ ಹಳೆ ಶಿಕ್ಷೆಯೇ! ಈ ಶಿಕ್ಷೆ ಪಡೆದುಕೊಂಡವರಿಗೆ ಮಾತ್ರ ಅದ್ರ ಅನುಭವ ಗೊತ್ತಿರೋದು. ಬಲಕೈಯಿಂದ ಎಡಕಿವಿ ಹಿಡಿದು ಎಡಕಿವಿಯಿಂದ ಬಲಕಿವಿ ಹಿಡಿದು ಬಸ್ಕಿ ಹೊಡೆಯೋದು ಕೂಡಾ ಆರೋಗ್ಯದ ದೃಷ್ಟಿಯಿಂದ ಯೋಗ್ಯವಂತೆ. ಇದನ್ನು ಪೂಜೆಯ ಸಂದರ್ಭದಲ್ಲೂ ಮಾಡ್ತಾರೆ.

ಕಿವಿ ಹಿಂಡುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ:
ನೀವು ಭಕ್ತಿಯಿಂದ ಕಿವಿ ಹಿಡಿದು ಬಸ್ಕಿ ಹೊಡೀತೀರೋ, ಇಲ್ಲ ಶಿಕ್ಷಕರು ನಿಮಗೆ ಶಿಕ್ಷೆಯ ರೂಪದಲ್ಲಿ ಈ ದಂಡನೆ ನೀಡ್ತಾರೋ ಒಟ್ಟಿನಲ್ಲಿ ಏನೇ ಮಾಡಿದ್ರೂ ನಿಮ್ಮ ಒಳ್ಳೆಯದಕ್ಕೆ ಅನ್ನೋದು ನೆನಪಿರಲಿ. ಕಿವಿ ಹಿಂಡುವ ಅಥವಾ ಹಿಂಡಿಸಿಕೊಳ್ಳುವ ಪ್ರಕ್ರಿಯೆಯ ಹಿಂದೆ ಬಲವಾದ ಕಾರಣವಿದೆ ಅನ್ನೋದನ್ನು ಹಿರಿಯರು ಕೂಡಾ ಮನವರಿಕೆ ಮಾಡಿದ್ದರು. ಆದ್ರೆ, ಅದೇನು ಅನ್ನೋದನ್ನು ವಿಮರ್ಶಿಸೋದಿದ್ರೆ, ಕಿವಿ ಹಿಂಡೋದ್ರಿಂದ ಮಿದುಳು ಸಕ್ರಿಯವಾಗುತ್ತಂತೆ.

ಅದು ಏಕಾಗ್ರತೆ ಸಾಧಿಸೋಕೆ ಕಾರಣವಾಗುತ್ತೆ. ಆ ಬಳಿಕ ಕಿವಿ ಹಿಂಡೋ ಬಗ್ಗೆ ನಡೆದ ಅನೇಕ ಅಧ್ಯಯನಗಳು ಅದನ್ನು ಸಾಬೀತುಪಡಿಸುತ್ತೆ. ಆ ಪ್ರಕಾರ ಜಸ್ಟ್ ಒಂದೇ ಒಂದು ನಿಮಿಷ ಕಿವಿ ಹಿಂಡುವುದರಿಂದ ಆ ಕೂಡಲೇ ಆಲ್ಫಾ ವೇವ್​ಗಳು ಆಕ್ಟಿವೇಟ್ ಆಗುತ್ತೆ. ಕಿವಿ ಹಾಳೆಯನ್ನು ಹಿಂಡುವುದು ಅಂದ್ರೆ ಅಕ್ಯುಪ್ರೆಷರ್ ಅಲ್ಲದೇ ಬೇರೇನಲ್ಲ. ಅದರಂತೆ, ಎಡಕಿವಿಯನ್ನು ಹಿಂಡಿದ್ರೆ ಬಲ ಮಿದುಳು ಸಕ್ರಿಯವಾಗುತ್ತೆ. ಬಲಕಿವಿ ಹಿಂಡಿದ್ರೆ ಎಡ ಮಿದುಳು ಸಕ್ರಿಯವಾಗುತ್ತೆ. ಇದರಿಂದ ಪಿಟ್ಯೂಟರಿ ಮೊದಲಾದ ಗ್ರಂಥಿಗಳು ಆಕ್ಟೀವ್ ಆಗುತ್ತಂತೆ.

ಇದನ್ನೇ ಸೂಪರ್ ಬ್ರೈನ್ ಯೋಗ ಅಂತಾರೆ:
ಕಿವಿ ಹಿಂಡುವ ಕ್ರಿಯೆಯನ್ನು ಮುಂದುವರೆದ ದೇಶಗಳಲ್ಲಿ ಒಂದು ಪದ್ಧತಿ ಎಂಬಂತೆ ಸ್ವೀಕರಿಸಲಾಗಿದೆ. ಈ ಬಗ್ಗೆ ಬಲ್ಲವರು ಅದನ್ನು ಸೂಪರ್ ಬ್ರೈನ್ ಯೋಗ ಎಂದೇ ಕರೀತಾರೆ ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ. ಇತರರಿಗೂ ಅದನ್ನು ಪಾಲಿಸುವಂತೆ ಸಲಹೆ ನೀಡ್ತಾರೆ. ಕಿವಿ ಹಿಡಿದು ಬಸ್ಕಿ ಹೊಡೆಯುವ ಪ್ರಕ್ರಿಯೆಯನ್ನು ಒಳಗೊಂಡಂತೆ ಈ ಬಗ್ಗೆ ಅಮೆರಿಕದಲ್ಲಿ ಸಾಕಷ್ಟು ವರ್ಕ್ ಶಾಪ್​ಗಳು ನಡೀತಾ ಇವೆಯಂತೆ.

ದೇಶ ವಿದೇಶಗಳಲ್ಲಿ ಇದೆ ಇದರ ಕಂಪು:
ದೇಸಿ ಶಾಲೆಗಳಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಶುರುವಾದ ಕಿವಿ ಹಿಂಡುವ ಪ್ರಕ್ರಿಯೆ ಇಂದು ಅಮೆರಿಕದಂಥ ಮುಂದುವರೆದ ದೇಶಗಳಲ್ಲಿ ಬಹಳ ಸದ್ದು ಮಾಡ್ತಾ ಇದೆ. ಇವತ್ತಾದ್ರೂ ನಾವು ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಅದೇನೆಂದರೆ, ನಮ್ಮ ದೇಶದಲ್ಲಿ ಯಾಯುದೇ ವಿಧಿ ವಿಧಾನವಿರಲಿ, ಜೀವನಕ್ರಮವಿರಿಲಿ ಅದು ಸುಮ್ ಸುಮ್ಮನೆ ಬಂದಿದ್ದಲ್ಲ. ಅದ್ರ ಹಿಂದೆ ನಿಜವಾಗ ಕಾರಣವಿರುತ್ತೆ. ವೈಜ್ಞಾನಿಕ ಹಿನ್ನೆಲೆಯಿರುತ್ತೆ. ಅದನ್ನು ಕಂಡುಕೊಳ್ಳುವ ಒಳಗಣ್ಣ ನಮಗಿರಬೇಕಾಗುತ್ತೆ ಅಷ್ಟೆ.