ನವರಾತ್ರಿ ಏಳನೇ ದಿನ ಕಾಲರಾತ್ರಿ ದೇವಿಯನ್ನ ಹೇಗೆ ಆರಾಧಿಸಬೇಕು?

|

Updated on: Oct 05, 2019 | 8:08 AM

ನವದುರ್ಗೆಯರಲ್ಲಿ ಕಾಲರಾತ್ರಿಯದ್ದು ಏಳನೇ ರೂಪ. ದುಷ್ಟರ ವಿನಾಶ ಮಾಡುವ ಈ ದೇವಿಯದ್ದು ಅತ್ಯಂತ ಭಯಂಕರ ರೂಪ. ಇವಳ ವಾಹನ ಕತ್ತೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು […]

ನವರಾತ್ರಿ ಏಳನೇ ದಿನ ಕಾಲರಾತ್ರಿ ದೇವಿಯನ್ನ ಹೇಗೆ ಆರಾಧಿಸಬೇಕು?
Follow us on

ನವದುರ್ಗೆಯರಲ್ಲಿ ಕಾಲರಾತ್ರಿಯದ್ದು ಏಳನೇ ರೂಪ. ದುಷ್ಟರ ವಿನಾಶ ಮಾಡುವ ಈ ದೇವಿಯದ್ದು ಅತ್ಯಂತ ಭಯಂಕರ ರೂಪ. ಇವಳ ವಾಹನ ಕತ್ತೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು ಕಬ್ಬಿಣದ ಮುಳ್ಳಿನ ಅಸ್ತ್ರವಿದೆ. ನವರಾತ್ರಿಯಲ್ಲಿ ಈ ದೇವಿ ಆರಾಧನೆ ಮಾಡೋಕೆ ಒಂದು ಮಂತ್ರವಿದೆ. ಆ ಮಂತ್ರದ ಮೂಲಕ ದೇವಿ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ

ಕಾಲರಾತ್ರಿ ಮಂತ್ರ
ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ
ವಾಮಪಾದೋಲ್ಲ ಸಲ್ಲೋಹಲತಾ ಕಂಟಕಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ

ಈ ದೇವಿ ನೋಡೋಕೆ ಎಷ್ಟು ಭಯಂಕರವಾಗಿದ್ದಾಳೋ, ಅಷ್ಟೇ ಶುಭಫಲಗಳನ್ನು ಕೊಡುವವಳು. ಹೀಗಾಗೇ ಇವಳಿಗೆ ಶುಭಂಕರೀ ಎಂಬ ಹೆಸರೂ ಇದೆ. ಕಾಲರಾತ್ರಿ ದೇವಿ ದುಷ್ಟರಿಗೆ ಮೃತ್ಯುದೇವತೆಯಾದ್ರೆ, ಶಿಷ್ಟರಿಗೆ ರಕ್ಷಾಕವಚ. ಈಕೆ ಧರ್ಮವನ್ನು ರಕ್ಷಣೆ ಮಾಡಿ ಪಾಪ ನಾಶ ಮಾಡುತ್ತಾಳೆ. ನವರಾತ್ರಿಯಲ್ಲಿ ಇವಳ ಉಪಾಸನೆ ಅತ್ಯಂತ ಫಲದಾಯಕ. ಹಾಗಾದ್ರೆ ಈ ದೇವಿ ಆರಾಧನೆಯಿಂದ ಸಿಗುವ ಫಲಗಳೇನು?

ಕಾಲರಾತ್ರಿ ಪೂಜಾ ಫಲಗಳು

* ಈ ದೇವಿಯನ್ನು ಆರಾಧಿಸಿದ್ರೆ ವಿಘ್ನಗಳು ದೂರಾಗುತ್ತವೆ
*
ಪುಣ್ಯಪ್ರಾಪ್ತಿಯಾಗುತ್ತೆ
*
ದುಷ್ಟಶಕ್ತಿಗಳ ಕಾಟ ದೂರಾಗುತ್ತೆ
*
ಗ್ರಹ ಬಾಧೆಗಳು ದೂರಾಗುತ್ತೆ
*
ಶತ್ರುಭಯ ನಿವಾರಣೆಯಾಗುತ್ತೆ
*
ಸಮಸ್ತ ಪಾಪ ನಾಶ ಮಾಡ್ತಾಳೆ

Published On - 8:07 am, Sat, 5 October 19