ಫಿಟ್ನೆಸ್​ಗಾಗಿ ಸಿಂಧು ವರ್ಕೌಟ್, ಡೆಡಿಕೇಷನ್ ನೋಡಿದ್ರೆ ಶಹಬ್ಬಾಸ್​ ಅನ್ನಲೇಬೇಕು!

ಫಿಟ್ನೆಸ್​ಗಾಗಿ ಸಿಂಧು ವರ್ಕೌಟ್, ಡೆಡಿಕೇಷನ್ ನೋಡಿದ್ರೆ ಶಹಬ್ಬಾಸ್​ ಅನ್ನಲೇಬೇಕು!

ಅಂದು ಸ್ವಿಟ್ಜರ್​ಲ್ಯಾಂಡ್​ ಬಾಸೆಲ್ ನಗರದಿಂದಲೇ ಭಾರತೀಯರ ಮನದಲ್ಲಿ ಸಂಭ್ರಮ ಮನೆಮಾಡಿತ್ತು. ಈ ಸಂಭ್ರಮ, ಖುಷಿಯನ್ನು ಭಾರತೀಯರಿಗೆ ತಂದುಕೊಟ್ಟಿದ್ದು ಬೇರಾರೂ ಅಲ್ಲ. ಆಕ್ರಮಣಕಾರಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು. ಹೌದು ವಿಶ್ವಚಾಂಪಿಯನ್ ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾದ ಕ್ರೀಡಾ ತಾರೆ.

ಪುಸರ್ಲಾ ವೆಂಕಟ ಸಿಂಧು ತಮ್ಮ ಬಹುದಿನದ ಕನಸನ್ನು ಈಗಾಗ್ಲೇ ನನಸು ಮಾಡಿದ್ದಾರೆ. ಕಂಚಿ ಮತ್ತು ಬೆಳ್ಳಿಯ ಪದಕವನ್ನು ಬಾಚುತ್ತಿದ್ದ ಸಿಂಧು ಅವರಿಗೆ ಹಲವು ವರ್ಷಗಳಿಂದ ಪದಕದ ಬಣ್ಣವನ್ನು ಬದಲಾಯಿಸಬೇಕೆಂಬ ಮಹದಾಸೆ ಇತ್ತು. ಹೌದು ಇದು ಸಿಂಧು ಅವರ ಒಬ್ಬರ ಕನಸಾಗಿರಲಿಲ್ಲ, ಬದಲಾಗಿ ಇಡೀ ಭಾರತೀಯರ ಕನಸಾಗಿತ್ತು. ಅದಕ್ಕಾಗಿಯೇ 2019ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸಿಂಧು ಚಿನ್ನ ಬೇಟೆಯನ್ನಾಡುವ ಮೂಲಕ ಬ್ಯಾಡ್ಮಿಂಟನ್​ ಪ್ರಿಯರಲ್ಲಿ ಆನಂದಭಾಷ್ಪವನ್ನೇ ಸುರಿಸಿದ್ದರು.

6ರಿಂದ 8ಗಂಟೆಗಳ ಕಾಲ ವರ್ಕೌಟ್​:
ಸಿಂಧು ಅವರ ಡೆಡಿಕೇಷನ್ ನೋಡಿ ಶಹಬ್ಬಾಶ್ ಎನ್ನಲೇಬೇಕು
. ಬ್ಯಾಡ್ಮಿಂಟನ್​ ತಾರೆ ತಮ್ಮ ದಿನವನ್ನು ಮುಂಜಾನೆ 3:30 ರಿಂದ ಪ್ರಾರಂಭಿಸುತ್ತಾರಂತೆ. ಫಿಟ್ನೆಸ್ ಮೇಲೆ ಇವ್ರ ಪರಿಶ್ರಮ ಎಷ್ಟಿದೆ ಅಂದ್ರೆ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಫಿಟ್ ಆಗಲು ಪ್ರತಿದಿನ ವರ್ಕೌಟ್ ರುಟಿನ್ ಪಾಲಿಸ್ತೀನಿ ಅಂತಾರೆ ಸಿಂಧು. ಇವರ ನಿತ್ಯದ ವರ್ಕೌಟ್ ನಲ್ಲಿ ಎರಡರಿಂದ ಮೂರು ಸೆಟ್ ಗಳಂತೆ 400 ಮೀಟರ್ ಓಟ ಜೊತೆಗೆ ಪರ್ಯಾಯವಾಗಿ ಎರಡೂವರೆ ಕಿಲೋ ಮೀಟರ್ ಓಟ ಕೂಡ ಒಳಗೊಂಡಿರುತ್ತಂತೆ.

 ವರ್ಕೌಟ್ ವಿಷಯದಲ್ಲಿ ಸಿಂಧು ಅವರನ್ನು ನೀವು ಟ್ರಸ್ಟ್ ಮಾಡಲೇಬೇಕು. ಯಾಕಂದ್ರೆ ದಿನದಲ್ಲಿ ಸುಮಾರು 10 ಕಿಲೋ ಮೀಟರ್​ಗಳಷ್ಟು ರನ್ನಿಂಗ್ ಮಾಡ್ತಾರಂತೆ. ಇಷ್ಟು ಮಾತ್ರವಲ್ಲದೇ ಸಿಂಧು ರೆಗ್ಯುಲರ್ ಆಗಿ 100 ಪುಷ್ ಅಪ್ ಮತ್ತು 200 ಸಿಟ್ ಅಪ್ಸ್​ ಎಕ್ಸ್​ಸೈಜ್ ಮಾಡ್ತಾರೆ. ಸರಿಯಾಗಿ ಲೆಕ್ಕ ಹಾಕಿದ್ರೆ ವಾರದಲ್ಲಿ ಒಟ್ಟು 600 ಪುಷ್ ಅಪ್​ಗಳು ಮತ್ತು 2400 ಕಿಬ್ಬೊಟ್ಟೆಯ ವ್ಯಾಯಾಮ ಮಾಡ್ತಾರಂತೆ. ಇದು ಕೋರ್ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡಿ ಫಿಟ್ ಆಗಿದ್ದಾರೆ.

ಸಾಮಾನ್ಯವಾಗಿ ಕ್ರೀಡಾಪಟುಗಳು ಔಟ್ ಡೋರ್ ಎಕ್ಸ್ ಸೈಜ್ ಕಡೆ ಹೆಚ್ಚು ಗಮನ ಹರಿಸ್ತಾರಂತ ಕೇಳಲ್ಪಟ್ಟಿರ್ತೀವಿ. ಆದ್ರೆ ಸಿಂಧು ಅವರ ವಿಷಯಕ್ಕೆ ಬಂದ್ರೆ ಅದು ಸುಳ್ಳಾಗಿರುತ್ತೆ. ಯಾಕಂದ್ರೆ ಇವರ ವರ್ಕೌಟ್ ನಲ್ಲಿ ಯೋಗ, ಪ್ರಾಣಾಯಾಮ, ಕಪಾಲಭಾತಿ, ಮತ್ತು ಈಜುವಿಕೆ ಕೂಡಾ ಒಳಗೊಂಡಿದೆ. ಉತ್ತುಂಗಕ್ಕೆ ಏರಬೇಕಾದ್ರೆ ಒಂದು ನಮ್ಮ ಪರಿಶ್ರಮ, ಜೊತೆಗೆ ಕೆಲವೊಂದು ತರಬೇತಿ ಕೂಡ ಬೇಕಾಗಿರುತ್ತೆ. ಹಾಗಾಗಿ ತರಬೇತಿಯ ಮೊದಲ ಸೆಸ್ಶನ್ ಬೆಳಗ್ಗೆ 4: 30ಕ್ಕೆ ಪ್ರಾರಂಭವಾಗುತ್ತಂತೆ. ಮತ್ತು ಇದು ಬೆಳಗ್ಗೆ 7 ಗಂಟೆಯವರೆಗೂ ಮುಂದುವರೆಯುತ್ತೆ. ಇಲ್ಲಿ ಸಿಂಧು ಅವರ ಚಿನ್ನದ ಪದಕದ ಹಿಂದೆ ತರಬೇತುದಾರರ ಪಾತ್ರವೂ ಶ್ಲಾಘನೀಯವಾಗಿದೆ

https://www.instagram.com/p/BjHHVR6FVik/?utm_source=ig_web_copy_link

 

Click on your DTH Provider to Add TV9 Kannada