ದೇವರನ್ನು ಒಲಿಸಿಕೊಳ್ಳೋಕೆ ಏನು ಮಾಡಬೇಕು?

ಹಿಂದೂ ಸಂಪ್ರದಾಯದ ಪ್ರಕಾರ, ಭಗವಂತನನ್ನು ಪೂಜಿಸೋಕೆ ಅದರದ್ದೇ ಆದ ಕೆಲ ನಿಯಮಗಳು ಹಾಗೂ ವಿಶೇಷತೆಗಳಿವೆ. ಅದನ್ನು ಬಿಟ್ಟು ಕೇವಲ ದೇವರನ್ನು ಪೂಜಿಸಿದ ಮಾತ್ರಕ್ಕೆ ಆತನ ಕೃಪೆ ಪ್ರಾಪ್ತಿಯಾಗುತ್ತೆ ಅನ್ನೋದು ತಪ್ಪು ಅಭಿಪ್ರಾಯ ಎನ್ನಲಾಗುತ್ತೆ. ಧರ್ಮಗ್ರಂಥಗಳ ಪ್ರಕಾರ, ಭಗವಂತನ ಮೇಲೆ ಶ್ರದ್ಧೆ, ಭಕ್ತಿ, ಭಯ, ಗೌರವ, ಪ್ರೀತಿ ಹಾಗೂ ನಂಬಿಕೆ ಎಲ್ಲವೂ ಇರಬೇಕು. ಬದಲಾಗಿ ಇತರರಿಗೆ ಅನ್ಯಾಯ, ಅಪಕಾರ, ಕೆಟ್ಟದ್ದನ್ನು ಮಾಡುತ್ತಾ, ಭಗವಂತನನ್ನು ವಿಧ ವಿಧವಾಗಿ ಪೂಜಿಸಿದ್ರೆ ಯಾವುದೇ ಕಾರಣಕ್ಕೂ ಪೂಜೆಯ ಫಲ ದೊರೆಯುವುದಿಲ್ಲ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. […]

ದೇವರನ್ನು ಒಲಿಸಿಕೊಳ್ಳೋಕೆ ಏನು ಮಾಡಬೇಕು?
Follow us
ಸಾಧು ಶ್ರೀನಾಥ್​
|

Updated on: Feb 16, 2020 | 3:11 PM

ಹಿಂದೂ ಸಂಪ್ರದಾಯದ ಪ್ರಕಾರ, ಭಗವಂತನನ್ನು ಪೂಜಿಸೋಕೆ ಅದರದ್ದೇ ಆದ ಕೆಲ ನಿಯಮಗಳು ಹಾಗೂ ವಿಶೇಷತೆಗಳಿವೆ. ಅದನ್ನು ಬಿಟ್ಟು ಕೇವಲ ದೇವರನ್ನು ಪೂಜಿಸಿದ ಮಾತ್ರಕ್ಕೆ ಆತನ ಕೃಪೆ ಪ್ರಾಪ್ತಿಯಾಗುತ್ತೆ ಅನ್ನೋದು ತಪ್ಪು ಅಭಿಪ್ರಾಯ ಎನ್ನಲಾಗುತ್ತೆ. ಧರ್ಮಗ್ರಂಥಗಳ ಪ್ರಕಾರ, ಭಗವಂತನ ಮೇಲೆ ಶ್ರದ್ಧೆ, ಭಕ್ತಿ, ಭಯ, ಗೌರವ, ಪ್ರೀತಿ ಹಾಗೂ ನಂಬಿಕೆ ಎಲ್ಲವೂ ಇರಬೇಕು.

ಬದಲಾಗಿ ಇತರರಿಗೆ ಅನ್ಯಾಯ, ಅಪಕಾರ, ಕೆಟ್ಟದ್ದನ್ನು ಮಾಡುತ್ತಾ, ಭಗವಂತನನ್ನು ವಿಧ ವಿಧವಾಗಿ ಪೂಜಿಸಿದ್ರೆ ಯಾವುದೇ ಕಾರಣಕ್ಕೂ ಪೂಜೆಯ ಫಲ ದೊರೆಯುವುದಿಲ್ಲ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವರವರ ಕರ್ಮಗಳಿಗನುಸಾರವಾಗಿ ವಿವಿಧ ರೀತಿಯಲ್ಲಿ ಭಗವಂತ ಕಷ್ಟಗಳನ್ನು ನೀಡಿ ಶಿಕ್ಷಿಸ್ತಾನೆ ಎನ್ನಲಾಗುತ್ತೆ.

ಇನ್ನೂ ಭಗವಂತನನ್ನು ಸಂಪೂರ್ಣವಾಗಿ ನಂಬಿದ್ರೆ, ಬೇರೆಯವರಿಗೆ ಅಪಕಾರ ಮಾಡುವ ಬುದ್ಧಿ ಎಳ್ಳಷ್ಟೂ ಇರುವುದಿಲ್ಲ ಎನ್ನಲಾಗುತ್ತೆ. ಯಾರಿಗಾದರೂ ಅಪಕಾರ ಮಾಡಿದ್ರೆ, ಅದು ಭಗವಂತನ ಮೇಲಿಟ್ಟಿರುವ ಕಪಟ ಭಕ್ತಿಯನ್ನು ಸೂಚಿಸುತ್ತೆ. ಇನ್ನು ಮಹಾವಿಷ್ಣುವಿನ ಪೂಜೆಯನ್ನು ಮನೆಯ ಕುಟುಂಬ ಸದಸ್ಯರೆಲ್ಲಾ ಸೇರಿ ಮಾಡಿದ್ರೆ, ಎಲ್ಲರ ಶ್ರೇಯೋಭಿವೃದ್ಧಿಯಾಗುತ್ತೆ.

ಮಹಾವಿಷ್ಣುವಿನ ಪೂಜೆಗೆ ಬೇಕಾದ ವಸ್ತುಗಳನ್ನು ಮೊದಲು ತಂದಿಟ್ಟುಕೊಂಡು ನಂತರ ನಿಯಮಾನುಸಾರವಾಗಿ ಪೂಜೆ ಮಾಡಬೇಕು. ಈ ಪೂಜೆ ಮಾಡುವಾಗ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳ್ಳಬೇಕು. ಅಷ್ಟಕ್ಕೂ ಮಹಾವಿಷ್ಣುವಿನ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳಾವುವು?

ಮಹಾವಿಷ್ಣುವಿನ ಪೂಜಾ ನಿಯಮಗಳು: 1.ಮೊದಲು ಶುಚಿರ್ಭೂತರಾಗಬೇಕು 2.ಮಡಿ ಬಟ್ಟೆಯನ್ನು ಧರಿಸಬೇಕು 3.ಉಪವಾಸವಿದ್ದು, ಪೂಜೆ ಮಾಡಿದ್ರೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ 4.ಉಪವಾಸ ಇರಲಾಗದವರು ಹಾಲು ಅಥವಾ ಹಣ್ಣುಗಳನ್ನು ಸೇವಿಸಿ ಪೂಜಿಸಬಹುದು 5.ನಿಮ್ಮ ಕೈಲಾಗುವಷ್ಟು ಹೂವು, ಎಲೆ, ಹಣ್ಣುಗಳನ್ನು ತಂದು ಪೂಜಿಸಬೇಕು 6.ಪೂಜೆ ಪ್ರಾರಂಭಿಸೋಕೂ ಮೊದಲು ಮಡಿಯಿಂದ ನೈವೇದ್ಯ ತಯಾರಿಸಬೇಕು 7.ನೈವೇದ್ಯಕ್ಕೆ ತುಪ್ಪವನ್ನು ಬಳಸಬೇಕು 8.ಪೂಜೆ ಪ್ರಾರಂಭಿಸಿದ ನಂತರ ಶ್ರದ್ಧಾ ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಬೇಕು 9.ದೀಪ ಬೆಳಗಿ, ಮಂಗಳಾರತಿ ಮಾಡಿ, ನೈವೇದ್ಯ ಅರ್ಪಿಸಬೇಕು