World Bamboo Day 2022: ವಿಶ್ವ ಬಿದಿರು ದಿನ 2022: ಬಿದಿರು ಉದ್ಯಮದ ಜಾಗೃತಿ ಮೂಡಿಸುವುದೇ ಈ ದಿನ ವಿಶೇಷ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2022 | 7:00 AM

ವಿಶ್ವ ಬಿದಿರು ದಿನವನ್ನು ಮೊದಲ ಬಾರಿಗೆ ಸೆಪ್ಟೆಂಬರ್ 18, 2009 ರಂದು ಆಚರಿಸಲಾಯಿತು. ಜಾಗತಿಕವಾಗಿ ಬಿದಿರಿನ ಜಾಗೃತಿಯನ್ನು ಹೆಚ್ಚಿಸಲು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ.

World Bamboo Day 2022: ವಿಶ್ವ ಬಿದಿರು ದಿನ 2022: ಬಿದಿರು ಉದ್ಯಮದ ಜಾಗೃತಿ ಮೂಡಿಸುವುದೇ ಈ ದಿನ ವಿಶೇಷ
World Bamboo Day 2022 (ಸಂಗ್ರಹ ಚಿತ್ರ)
Follow us on

ಪ್ರತಿ ವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನ (World Bamboo Day) ವನ್ನು ಆಚರಿಸಲಾಗುತ್ತದೆ. ಬಿದಿರು ಕಾಡುಗಳ ಸಂರಕ್ಷಣೆ ಮತ್ತು ಬಿದಿರು ಉದ್ಯಮದ ಉತ್ತೇಜನದ ಬಗ್ಗೆ ಜಾಗೃತಿ ಮೂಡಿಸುವುದೇ ವಿಶ್ವ ಬಿದಿರು ದಿನವನ್ನು ಆಚರಿಸುವ ಹಿಂದಿನ ಮೂಲ ಉದ್ದೇಶವಾಗಿದೆ. ಬಿದಿರು ಯಾವುದೇ ಆರೈಕೆಯಿಲ್ಲದೆ ನಾನಾಗಿಯೇ ಬೆಳೆಯುತ್ತದೆ, ಅದರಿಂದ ನೂರಾರು ಉಪಯೋಗಗಳಿವೆ. ಆದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಮಾರ್ಗವನ್ನು ನಾವು ಕಂಡುಕೊಂಡಿಲ್ಲ. ಆರ್ಥಿಕವಾಗಿ, ಪರಿಸರಕ್ಕೆ ಪೂರಕವಾಗಿರುವ ಬಿದಿರನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ದಕ್ಷಿಣ ಏಷ್ಯಾ ಬ್ಯಾಂಬೂ ಫೌಂಡೇಶನ್ ಜಾಗೃತಿ ಮೂಡಿಸುತ್ತಿದೆ. ಈ ದಿನವನ್ನು ಆಚರಿಸುವುದರ ಹಿಂದಿನ ಪ್ರಮುಖ ಗುರಿ ಎಂದರೆ ಬಿದಿರಿನ ಸುಸ್ಥಿರ ಬಳಕೆಯನ್ನು ಉತ್ತೇಜಿಸುವುದಾಗಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಬಿದಿರಿನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ. ಚೀನಾ, ಭಾರತ ಮತ್ತು ವಿಯೆಟ್ನಾಂ ವಿಶ್ವದಲ್ಲಿ ಬಿದಿರಿನ ಅತಿದೊಡ್ಡ ಪೂರೈಕೆದಾರರನ್ನು ಹೊಂದಿದೆ. ಚೀನಾದ ನಂತರ, ಇಡೀ ವಿಶ್ವದಲ್ಲಿ ಭಾರತವು ಬಿದಿರು ಕೃಷಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ವಿಶ್ವ ಬಿದಿರು ದಿನದ ಹಿಂದಿನ ಇತಿಹಾಸ:

ವಿಶ್ವ ಬಿದಿರು ದಿನವನ್ನು ವಿಶ್ವ ಬಿದಿರು ಸಂಘಟನೆಯ ಅಂದಿನ ಅಧ್ಯಕ್ಷ ಕಮಲೇಶ್ ಸಲಾಂ ಅವರು ಪ್ರಪಂಚದಾದ್ಯಂತ ತಮ್ಮ ಪ್ರತಿನಿಧಿಗಳೊಂದಿಗೆ ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ವಿಶ್ವ ಬಿದಿರು ದಿನವನ್ನು ಮೊದಲ ಬಾರಿಗೆ ಸೆಪ್ಟೆಂಬರ್ 18, 2009 ರಂದು ಆಚರಿಸಲಾಯಿತು. ಜಾಗತಿಕವಾಗಿ ಬಿದಿರಿನ ಜಾಗೃತಿಯನ್ನು ಹೆಚ್ಚಿಸಲು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಬಿದಿರು ಸಂಸ್ಥೆ (WBO) ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರವನ್ನು ರಕ್ಷಿಸಲು, ಬಿದಿರಿನ ಸುಸ್ಥಿರ ಬಳಕೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಪ್ರಪಂಚದಾದ್ಯಂತ ಪ್ರದೇಶಗಳಲ್ಲಿ ಹೊಸ ಕೈಗಾರಿಕೆಗಳಿಗಾಗಿ ಬಿದಿರಿನ ಹೊಸ ಕೃಷಿಯನ್ನು ಉತ್ತೇಜಿಸಲು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ, ಜೊತೆಗೆ ಸಮುದಾಯ ಆರ್ಥಿಕ ಅಭಿವೃದ್ಧಿಗಾಗಿ ಸ್ಥಳೀಯವಾಗಿ ಸಾಂಪ್ರದಾಯಿಕ ಬಳಕೆಗಳನ್ನು ಉತ್ತೇಜಿಸುತ್ತದೆ.

ವಿಶ್ವ ಬಿದಿರು ದಿನದ ಮಹತ್ವ:

ಬಿದಿರು ಪ್ರಪಂಚದಲ್ಲಿ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಒಂದಾಗಿದೆ. ಪ್ರಪಂಚದ ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಭಾಗಗಳಲ್ಲಿ ಬಿದಿರಿನ ಬಳಕೆ ಬಹಳ ಮಹತ್ವದ್ದಾಗಿದೆ. ವಿಶ್ವ ಬಿದಿರು ದಿನವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಬಿದಿರಿನ ಸಸ್ಯಗಳ ಬಳಕೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತದೆ ಮತ್ತು ಇದು ಸಮರ್ಥನೀಯ ಬಳಕೆಯಾಗಿದೆ. ಜಗತ್ತಿನಲ್ಲಿ 850 ಬಿದಿರು ಪ್ರಭೇದಗಳಿದ್ದು, ಭಾರತದಲ್ಲಿ 126 ಜಾತಿಯ ಬಿದಿರುಗಳನ್ನು ಪತ್ತೆ ಮಾಡಲಾಗಿದೆ. ಆದರೆ ನಮಗೆ 40 ಬಗೆಯ ಬಿದಿರುಗಳ ಮಾತ್ರ ಹೆಚ್ಚಾಗಿ ಕಾಣಸಿಗುತ್ತವೆ. ಅಸ್ಸಾಂ, ಮಣಿಪುರ, ಮೇಘಾಲಯ ಸರ್ಕಾರಗಳು ಬಿದಿರಿನ ಉತ್ಪನ್ನಗಳ ತಯಾರಿಕೆ, ಮಾರಾಟ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ವಿಶ್ವ ಬಿದಿರು ದಿನದ ಥೀಮ್ 2022:

ವಿಶ್ವ ಬಿದಿರು ದಿನ 2022ರ ಥೀಮ್​​ನ್ನು ವಿಶ್ವ ಬಿದಿರು ಸಂಸ್ಥೆ (WBO) ಇನ್ನೂ ಘೋಷಿಸಿಲ್ಲ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.