ಸಾವಿರಾರು ವರ್ಷ ಹಳೆಯ ತೇಗದ ಮರದಿಂದ ಕೆತ್ತಿದ ಮಹಾವಿಷ್ಣುವಿನ ಶಿಲ್ಪ ನೋಡಲು ಸಾಲುಗಟ್ಟಿ ನಿಂತ ಪ್ರವಾಸಿಗರು, ಎಲ್ಲಿ?

|

Updated on: Jul 24, 2023 | 11:05 AM

ಹೈದರಾಬಾದ್: ಸಾವಿರ ವರ್ಷಗಳಷ್ಟು ಹಳೆಯದಾದ ತೇಗದ ಮರದ ದಿಮ್ಮಿಯಿಂದ ಕೆತ್ತಿದ ಶ್ರೀ ಮಹಾವಿಷ್ಣುವಿನ ಅಪರೂಪದ ಶಿಲ್ಪವನ್ನು ನೋಡಲು ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದಾರೆ.

ಸಾವಿರಾರು ವರ್ಷ ಹಳೆಯ ತೇಗದ ಮರದಿಂದ ಕೆತ್ತಿದ ಮಹಾವಿಷ್ಣುವಿನ ಶಿಲ್ಪ ನೋಡಲು ಸಾಲುಗಟ್ಟಿ ನಿಂತ ಪ್ರವಾಸಿಗರು, ಎಲ್ಲಿ?
ಅಪರೂಪದ ತೇಗದ ಮರದಿಂದ ಕೆತ್ತಿದ ಮಹಾವಿಷ್ಣುವಿನ ಶಿಲ್ಪ
Follow us on

ಹೈದರಾಬಾದ್: ಪುರಾತನ ವಸ್ತುಗಳು, ವಿಗ್ರಹಗಳು ಬಾಹ್ಯ ಪ್ರಪಂಚಕ್ಕೆ ಕಂಡುಬಂದರೆ ಅದು ಎಲ್ಲರಿಗೂ ಪವಾಡದಂತೆ ಕಾಣುತ್ತದೆ. ಇದೀಗ ಹೈದರಾಬಾದಿನಲ್ಲಿ (Hyderabad) ಪುರಾತನ ತೇಗದ ಮರದ ದಿಮ್ಮಿಯಿಂದ (1000 Year Old Teak wood) ವಿಶ್ವದಲ್ಲೇ ಅತಿ ದೊಡ್ಡದು ಎನ್ನಲಾದ ಅನಂತ ಶೇಷಶಯನ ಶ್ರೀ ಮಹಾ ವಿಷ್ಣುವಿನ (Lord Vishnu) ಶಿಲ್ಪ ವಿಶೇಷ ಆಕರ್ಷಣೆಯಾಗಿದೆ. ಈ ಮೇರುಕೃತಿಯನ್ನು ನೋಡಲು ಅನೇಕ ಪ್ರವಾಸಿಗರು, ಕಲಾಭಿಮಾನಿಗಳು ಮತ್ತು ಭಕ್ತರು ಜಮಾಯಿಸುತ್ತಿದ್ದಾರೆ. ಅತ್ಯಂತ ಅಪರೂಪದ ತೇಗದ ಮರದ ದಿಮ್ಮಿಯಿಂದ ಕೆತ್ತಿದ ಶಿಲ್ಪವನ್ನು ನೋಡಿ ಜನ ಭಾವಪರವಶರಾಗಿದ್ದಾರೆ. ಈ ಶಿಲ್ಪ ಕೆತ್ತನೆಯ ಜವಾಬ್ದಾರಿಯನ್ನು ನೂರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಕಂಪನಿಗೆ ವಹಿಸಿರುವುದು ಗಮನಾರ್ಹ.

ಈ ಕಂಪನಿಯು ಪ್ರಸಿದ್ಧ ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಅಭಿವೃದ್ಧಿಗೂ ಕೊಡುಗೆ ನೀಡಿದೆ. ದೇವಾಲಯದ ಮುಖ್ಯ ದ್ವಾರಗಳನ್ನು ಮಾಡುವುದರ ಜೊತೆಗೆ ಇತರೆ ಮರಗೆಲಸವನ್ನು ಒದಗಿಸುವಲ್ಲಿ ಸಹಾಯ ಮಾಡಿದೆ. ಹೊಸದಾಗಿ ನಿರ್ಮಾಣಗೊಂಡ ಭಾರತದ ಸಂಸತ್ತಿನ ನಿರ್ಮಾಣಕ್ಕೂ ಕಂಪನಿಯು ಗಣನೀಯ ಕೊಡುಗೆ ನೀಡಿದೆ. ಇದಲ್ಲದೆ, ಈ ಪ್ರತಿಷ್ಠಿತ ಕಂಪನಿಯು ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದ ಕಾಮಗಾರಿಗಳಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಸಹ ನೀಡುತ್ತಿದೆ.

ಆಧ್ಯಾತ್ಮ ಕುರಿತಾದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ