Anant Chaturdashi 2024: ಅನಂತ ಚತುರ್ದಶಿ ಯಾವಾಗ, ಗಣೇಶನ ವಿಸರ್ಜನೆ ಯಾವಾಗ? ಶುಭ ಮುಹೂರ್ತ ಯಾವಾಗ?

|

Updated on: Sep 14, 2024 | 10:18 AM

Ganesh Chaturthi 2024: ಗಣೇಶೋತ್ಸವದ ಅಂತ್ಯಕಾಲ ಸಮೀಪಿಸುತ್ತಿದೆ. ಮೂರು ದಿನಗಳ ಕಾಲ ಪೂಜೆಗಳನ್ನು ಸ್ವೀಕರಿಸಿ ಅನಂತ ಚತುರ್ದಶಿಯ ದಿನ ಗಣಪತಿ ವಿಸರ್ಜನೆಗೊಂಡು ತಾಯಿ ಗಂಗಾ ಒಡಲು ಸೇರುತ್ತಾನೆ ನಮ್ಮೆಲ್ಲರ ಮುದ್ದಿನ ವಿನಾಯಕ. ಅನಂತ ಚತುರ್ದಶಿಯ ದಿನ ಜನರು ಗಣಪತಿ ವಿಗ್ರಹವನ್ನು ಬಹಳ ವೈಭವದಿಂದ ಸಂಗೀತ ವಾದ್ಯಗಳೊಂದಿಗೆ ತೆಗೆದುಕೊಂಡು ಹೋಗಿ ನೀರಿನಲ್ಲಿ ನಿಮಜ್ಜನ ಮಾಡುತ್ತಾರೆ.

Anant Chaturdashi 2024: ಅನಂತ ಚತುರ್ದಶಿ ಯಾವಾಗ, ಗಣೇಶನ ವಿಸರ್ಜನೆ ಯಾವಾಗ? ಶುಭ ಮುಹೂರ್ತ ಯಾವಾಗ?
ಅನಂತ ಚತುರ್ದಶಿ ಶುಭ ಮುಹೂರ್ತ ಯಾವಾಗ?
Follow us on

ಗಣೇಶೋತ್ಸವದ ಅಂತ್ಯಕಾಲ ಸಮೀಪಿಸುತ್ತಿದೆ. ಮೂರು ದಿನಗಳ ಕಾಲ ಪೂಜೆಗಳನ್ನು ಸ್ವೀಕರಿಸಿ ಅನಂತ ಚತುರ್ದಶಿಯ ದಿನ ಗಣಪತಿ ವಿಸರ್ಜನೆಗೊಂಡು ತಾಯಿ ಗಂಗಾ ಒಡಲು ಸೇರುತ್ತಾನೆ ನಮ್ಮೆಲ್ಲರ ಮುದ್ದಿನ ವಿನಾಯಕ. ಅನಂತ ಚತುರ್ದಶಿಯ ದಿನ ಜನರು ಗಣಪತಿ ವಿಗ್ರಹವನ್ನು ಬಹಳ ವೈಭವದಿಂದ ಸಂಗೀತ ವಾದ್ಯಗಳೊಂದಿಗೆ ತೆಗೆದುಕೊಂಡು ಹೋಗಿ ನೀರಿನಲ್ಲಿ ನಿಮಜ್ಜನ ಮಾಡುತ್ತಾರೆ. ಮುಂದಿನ ವರ್ಷ ಮತ್ತೆ ತಮ್ಮ ಮನೆಗೆ ಬರುವಂತೆ ಗಣಪನನ್ನು ಪ್ರಾರ್ಥಿಸುತ್ತಾರೆ. ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿಯ 3ನೇ ದಿನದಂದು ಗಣೇಶ ಹಬ್ಬ ಪ್ರಾರಂಭವಾಗುತ್ತದೆ. ಈ ಹಬ್ಬವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ವರೆಗೆ ಮುಂದುವರಿಯುತ್ತದೆ. ಈ 10 ದಿನಗಳಲ್ಲಿ ಪೂಜಾ ಮಂದಿರದಲ್ಲಿ ವಿನಾಯಕನಿಗೆ ಭಕ್ತರು ಪೂಜೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಅನಂತ ಚತುರ್ದಶಿ ಪೂಜೆಯ ದಿನಾಂಕ ಮತ್ತು ಶುಭ ಸಮಯ
ವೈದಿಕ ಕ್ಯಾಲೆಂಡರ್ ಪ್ರಕಾರ ಅನಂತ ಚತುರ್ದಶಿ ತಿಥಿ 16 ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 03:10 ಕ್ಕೆ ಪ್ರಾರಂಭವಾಗುತ್ತದೆ. ಚತುರ್ದಶಿ ತಿಥಿ 17 ಸೆಪ್ಟೆಂಬರ್ 2024 ರಂದು ರಾತ್ರಿ 11:44 ಕ್ಕೆ ಕೊನೆಗೊಳ್ಳುತ್ತದೆ. ಅನಂತ ಚತುರ್ದಶಿಯ ದಿನದಂದು ಬೆಳಿಗ್ಗೆ 6.20 ರಿಂದ 11.44 ರವರೆಗೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಗಣೇಶ ನಿಮಜ್ಜನಕ್ಕೆ ಶುಭ ಸಮಯ
ಹಿಂದೂ ವೈದಿಕ ಕ್ಯಾಲೆಂಡರ್ ಪ್ರಕಾರ ಗಣಪತಿ ವಿಗ್ರಹವನ್ನು ಮುಳುಗಿಸಲು ಶುಭ ಸಮಯ ಬೆಳಿಗ್ಗೆ 9.23 ರಿಂದ ರಾತ್ರಿ 9.28 ರವರೆಗೆ. ಈ ಶುಭ ಸಮಯದಲ್ಲಿ ಗಣೇಶನ ವಿಗ್ರಹವನ್ನು ಮುಳುಗಿಸಿದರೆ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: Vishwakarma puja 2024 – ವಿಶ್ವಕರ್ಮ ಜಯಂತಿಯನ್ನು ಸೂರ್ಯ ಸಂಕ್ರಾಂತಿ ದಿನವೇ ಆಚರಿಸಲಾಗುತ್ತದೆ ಏಕೆ? ಪೂಜಾ ವಿಧಾನ, ಮಹತ್ವದ ವಿವರ ಇಲ್ಲಿದೆ

ಮುಳುಗಿಸುವ ವಿಧಾನ
ಗಣೇಶನನ್ನು ಮುಳುಗಿಸುವ ಮೊದಲು, ಮರದ ಪೀಠಾಸನವನ್ನು ತಯಾರಿಸಿ. ಅದರ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕಿ ಗಂಗಾಜಲದಿಂದ ಶುದ್ಧೀಕರಿಸಿ. ಹಳದಿ ಬಣ್ಣದ ಬಟ್ಟೆಯನ್ನು ಹರಡಿ ಅದರ ಮೇಲೆ ವಿನಾಯಕ ಮೂರ್ತಿಯನ್ನು ಇರಿಸಿ.. ಹಳದಿ ಬಣ್ಣದ ಹೊಸ ವಸ್ತ್ರ ತೊಡಿಸಿ. ಇದಾದ ನಂತರ ಆಸನದ ಮೇಲೆ ಅಕ್ಷತೆ ಹಾಕಿ ಗಣಪತಿ ಮೂರ್ತಿಗೆ ಹೂವು, ಹಣ್ಣು, ಸಿಹಿತಿಂಡಿ ಇತ್ಯಾದಿಗಳನ್ನು ಅರ್ಪಿಸಿ.

ಗಣಪ್ಪನ ವಿಗ್ರಹವನ್ನು ಮುಳುಗಿಸುವ ಮೊದಲು, ಅದನ್ನು ಸಂಪೂರ್ಣ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಪೂಜಿಸಿ. ಮತ್ತೊಮ್ಮೆ ತಮ್ಮ ಮನೆಗೆ ಮರಳುವಂತೆ ಗಣೇಶನನ್ನು ಪ್ರಾರ್ಥಿಸಿ. ಬಳಿಕ ಕುಟುಂಬದಲ್ಲಿ ಹೆಣ್ಣುಮಕ್ಕಳು ಗಣಪ್ಪನಿಗೆ ಆರತಿ ಎತ್ತಿ. ಬಳಿಕ ಶಾಸ್ತ್ರೋಕ್ತವಾಗಿ ಗಣೇಶ ಮೂರ್ತಿಯನ್ನು ನಿಮಜ್ಜನ ಮಾಡಿ. ಪೂಜಾ ಕಾರ್ಯಕ್ರಮಗಳಲ್ಲಿ ತಪ್ಪುಗಳಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 4:07 am, Sat, 14 September 24