AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishwakarma puja 2024: ವಿಶ್ವಕರ್ಮ ಜಯಂತಿಯನ್ನು ಸೂರ್ಯ ಸಂಕ್ರಾಂತಿ ದಿನವೇ ಆಚರಿಸಲಾಗುತ್ತದೆ ಏಕೆ? ಪೂಜಾ ವಿಧಾನ, ಮಹತ್ವದ ವಿವರ ಇಲ್ಲಿದೆ

Vishwakarma puja 2024: ವಿಶ್ವಕರ್ಮನ ವಿಗ್ರಹ ಅಥವಾ ಚಿತ್ರವನ್ನು ಹಳದಿ ಬಟ್ಟೆ ಹೊದಿಸಿದ ಪೀಠದ ಮೇಲೆ ಉಪಕರಣಗಳು ಮತ್ತು ಯಂತ್ರಗಳ ಮಧ್ಯೆ ಸ್ಥಾಪಿಸಿ. ಬಳಿಕ ವಿಶ್ವಕರ್ಮ ಚಿತ್ರ ಮತ್ತು ಯಂತ್ರಗಳಿಗೆ ಅರಿಶಿಣ, ಕುಂಕುಮ, ಗಂಧ ಹಚ್ಚಿ. ಹೂವುಗಳಿಂದ ಅಲಂಕರಿಸಿ. ಐದು ವಿಧದ ಹಣ್ಣುಗಳು, ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಿ. ಇದಾದ ನಂತರ ಭಗವಾನ್ ವಿಶ್ವಕರ್ಮರ ಕಥೆಯನ್ನು ಓದಿ.

Vishwakarma puja 2024: ವಿಶ್ವಕರ್ಮ ಜಯಂತಿಯನ್ನು ಸೂರ್ಯ ಸಂಕ್ರಾಂತಿ ದಿನವೇ ಆಚರಿಸಲಾಗುತ್ತದೆ ಏಕೆ? ಪೂಜಾ ವಿಧಾನ, ಮಹತ್ವದ ವಿವರ ಇಲ್ಲಿದೆ
ಸೆಪ್ಟೆಂಬರ್ 17 ರಂದೇ ವಿಶ್ವಕರ್ಮ ಪೂಜೆಯನ್ನು ಏಕೆ ಆಚರಿಸಬೇಕು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 13, 2024 | 9:46 AM

Share

ಹಿಂದೂ ಧರ್ಮದಲ್ಲಿ ವಿಶ್ವಕರ್ಮ ಮಹಾನ್ ವಾಸ್ತುಶಿಲ್ಪಿ. ಹೇಳುವುದಾದರೆ ಆತ ಮೊದಲ ಇಂಜಿನಿಯರ್. ವಿಶ್ವಕರ್ಮ ಜಯಂತಿಯನ್ನು ಅವರು ಜನಿಸಿದ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ವಿಶ್ವಕರ್ಮರ ಜನ್ಮದಿನವು ಸೆಪ್ಟೆಂಬರ್ 17 ರಂದು ಬಂದಿದೆ. ವಿಶ್ವಕರ್ಮ ಜಯಂತಿಯ ದಿನದಂದು ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಎಲ್ಲಾ ರೀತಿಯ ಯಂತ್ರಗಳನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಉಪವಾಸ ಮತ್ತು ಹಬ್ಬಗಳ ದಿನಾಂಕಗಳಲ್ಲಿ ಯಾವಾಗಲೂ ಮಾರ್ಪಾಡು ಆಗುತ್ತಿರುತ್ತದೆ. ವಿಶ್ವಕರ್ಮ ಪೂಜೆ ಹಬ್ಬವನ್ನು ಪ್ರತಿ ವರ್ಷ ಇದೇ ದಿನಾಂಕದಂದು ಆಚರಿಸಲಾಗುತ್ತದೆ. ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆಯನ್ನು ಆಚರಿಸುವ ಬಗ್ಗೆ ಅನೇಕ ನಂಬಿಕೆಗಳಿವೆ.

ಸೆಪ್ಟೆಂಬರ್ 17 ರಂದೇ ವಿಶ್ವಕರ್ಮ ಪೂಜೆಯನ್ನು ಏಕೆ ಆಚರಿಸಬೇಕು? ವಿಶ್ವಕರ್ಮರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಭಗವಾನ್ ವಿಶ್ವಕರ್ಮನು ಆಶ್ವಯುಜ ಮಾಸದ ಪ್ರತಿಪದ ತಿಥಿಯಂದು ಕೃಷ್ಣ ಪಕ್ಷದಲ್ಲಿ ಜನ್ಮ ವೆತ್ತಿದರು ಎಂದು ಹೇಳಲಾಗುತ್ತದೆ. ಆದರೆ ಭಾದ್ರಪದದ ಕೊನೆಯ ತಿಥಿ ವಿಶ್ವಕರ್ಮನನ್ನು ಪೂಜಿಸಲು ಸೂಕ್ತವೆಂದು ಕೆಲವರು ನಂಬುತ್ತಾರೆ. ವಿಶ್ವಕರ್ಮ ಪೂಜೆಯನ್ನು ಜನ್ಮ ದಿನಾಂಕಕ್ಕಿಂತ ಸೂರ್ಯನ ಚಲನೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಎಂಬ ನಂಬಿಕೆ ಹುಟ್ಟಿಕೊಂಡಿತು. ನಂತರ ಈ ದಿನವನ್ನು ಸೂರ್ಯ ಸಂಕ್ರಾಂತಿ ಎಂದು ಆಚರಿಸಲು ಆರಂಭಿಸಿದರು. ಇದು ಬಹುತೇಕ ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಬರುತ್ತದೆ. ಅದಕ್ಕಾಗಿಯೇ ಅವರು ಈ ದಿನ ವಿಶ್ವಕರ್ಮ ಜಯಂತಿಯನ್ನು ಪೂಜಿಸಲು ಪ್ರಾರಂಭಿಸಿದರು.

ವಿಶ್ವಕರ್ಮ ಪೂಜೆಯ ಶುಭ ಸಮಯ ಹಿಂದೂ ವೈದಿಕ ಕ್ಯಾಲೆಂಡರ್ ಪ್ರಕಾರ ಈ ವರ್ಷ ವಿಶ್ವಕರ್ಮ ಪೂಜೆಯ ಶುಭ ಸಮಯವು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 6.07 ರಿಂದ 11.43 ರವರೆಗೆ ಇರುತ್ತದೆ. ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ದೇವರಿಂದ ವಿಶೇಷ ಅನುಗ್ರಹ ದೊರೆಯುತ್ತದೆ.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ವಿಶ್ವಕರ್ಮ ಪೂಜೆಯ ಕರ್ತವ್ಯ ವಿಶ್ವಕರ್ಮ ಪೂಜೆಯ ದಿನದಂದು ಬೆಳಿಗ್ಗೆ ಎದ್ದ ನಂತರ ಯಂತ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ದಿನ ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ವಾಹನಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಪೂಜೆ ಮಾಡಬೇಕು. ವಿಶ್ವಕರ್ಮನನ್ನು ಪೂಜಿಸಲು, ಮೊದಲು ವಿಶ್ವಕರ್ಮನ ವಿಗ್ರಹ ಅಥವಾ ಚಿತ್ರವನ್ನು ಹಳದಿ ಬಟ್ಟೆ ಹೊದಿಸಿದ ಪೀಠದ ಮೇಲೆ ಉಪಕರಣಗಳು ಮತ್ತು ಯಂತ್ರಗಳ ಮಧ್ಯೆ ಸ್ಥಾಪಿಸಿ. ಬಳಿಕ ವಿಶ್ವಕರ್ಮ ಚಿತ್ರ ಮತ್ತು ಯಂತ್ರಗಳಿಗೆ ಅರಿಶಿಣ, ಕುಂಕುಮ, ಗಂಧ ಹಚ್ಚಿ. ಹೂವುಗಳಿಂದ ಅಲಂಕರಿಸಿದ ನಂತರ ಐದು ವಿಧದ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ. ಇದಾದ ನಂತರ ಭಗವಾನ್ ವಿಶ್ವಕರ್ಮರ ಕಥೆಯನ್ನು ಓದಿ. ಪೂಜೆ ಮುಗಿದ ನಂತರ ಕರ್ಪೂರವನ್ನು ಬೆಳಗಿಸಿ, ಆರತಿ ಎತ್ತಿ. ಭಕ್ತರಿಗೆ ಪ್ರಸಾದ ಹಂಚಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 9:34 am, Fri, 13 September 24

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ