Vishwakarma puja 2024: ವಿಶ್ವಕರ್ಮ ಜಯಂತಿಯನ್ನು ಸೂರ್ಯ ಸಂಕ್ರಾಂತಿ ದಿನವೇ ಆಚರಿಸಲಾಗುತ್ತದೆ ಏಕೆ? ಪೂಜಾ ವಿಧಾನ, ಮಹತ್ವದ ವಿವರ ಇಲ್ಲಿದೆ

|

Updated on: Sep 13, 2024 | 9:46 AM

Vishwakarma puja 2024: ವಿಶ್ವಕರ್ಮನ ವಿಗ್ರಹ ಅಥವಾ ಚಿತ್ರವನ್ನು ಹಳದಿ ಬಟ್ಟೆ ಹೊದಿಸಿದ ಪೀಠದ ಮೇಲೆ ಉಪಕರಣಗಳು ಮತ್ತು ಯಂತ್ರಗಳ ಮಧ್ಯೆ ಸ್ಥಾಪಿಸಿ. ಬಳಿಕ ವಿಶ್ವಕರ್ಮ ಚಿತ್ರ ಮತ್ತು ಯಂತ್ರಗಳಿಗೆ ಅರಿಶಿಣ, ಕುಂಕುಮ, ಗಂಧ ಹಚ್ಚಿ. ಹೂವುಗಳಿಂದ ಅಲಂಕರಿಸಿ. ಐದು ವಿಧದ ಹಣ್ಣುಗಳು, ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಿ. ಇದಾದ ನಂತರ ಭಗವಾನ್ ವಿಶ್ವಕರ್ಮರ ಕಥೆಯನ್ನು ಓದಿ.

Vishwakarma puja 2024: ವಿಶ್ವಕರ್ಮ ಜಯಂತಿಯನ್ನು ಸೂರ್ಯ ಸಂಕ್ರಾಂತಿ ದಿನವೇ ಆಚರಿಸಲಾಗುತ್ತದೆ ಏಕೆ? ಪೂಜಾ ವಿಧಾನ, ಮಹತ್ವದ ವಿವರ ಇಲ್ಲಿದೆ
ಸೆಪ್ಟೆಂಬರ್ 17 ರಂದೇ ವಿಶ್ವಕರ್ಮ ಪೂಜೆಯನ್ನು ಏಕೆ ಆಚರಿಸಬೇಕು?
Follow us on

ಹಿಂದೂ ಧರ್ಮದಲ್ಲಿ ವಿಶ್ವಕರ್ಮ ಮಹಾನ್ ವಾಸ್ತುಶಿಲ್ಪಿ. ಹೇಳುವುದಾದರೆ ಆತ ಮೊದಲ ಇಂಜಿನಿಯರ್. ವಿಶ್ವಕರ್ಮ ಜಯಂತಿಯನ್ನು ಅವರು ಜನಿಸಿದ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ವಿಶ್ವಕರ್ಮರ ಜನ್ಮದಿನವು ಸೆಪ್ಟೆಂಬರ್ 17 ರಂದು ಬಂದಿದೆ. ವಿಶ್ವಕರ್ಮ ಜಯಂತಿಯ ದಿನದಂದು ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಎಲ್ಲಾ ರೀತಿಯ ಯಂತ್ರಗಳನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಉಪವಾಸ ಮತ್ತು ಹಬ್ಬಗಳ ದಿನಾಂಕಗಳಲ್ಲಿ ಯಾವಾಗಲೂ ಮಾರ್ಪಾಡು ಆಗುತ್ತಿರುತ್ತದೆ. ವಿಶ್ವಕರ್ಮ ಪೂಜೆ ಹಬ್ಬವನ್ನು ಪ್ರತಿ ವರ್ಷ ಇದೇ ದಿನಾಂಕದಂದು ಆಚರಿಸಲಾಗುತ್ತದೆ. ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆಯನ್ನು ಆಚರಿಸುವ ಬಗ್ಗೆ ಅನೇಕ ನಂಬಿಕೆಗಳಿವೆ.

ಸೆಪ್ಟೆಂಬರ್ 17 ರಂದೇ ವಿಶ್ವಕರ್ಮ ಪೂಜೆಯನ್ನು ಏಕೆ ಆಚರಿಸಬೇಕು?
ವಿಶ್ವಕರ್ಮರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಭಗವಾನ್ ವಿಶ್ವಕರ್ಮನು ಆಶ್ವಯುಜ ಮಾಸದ ಪ್ರತಿಪದ ತಿಥಿಯಂದು ಕೃಷ್ಣ ಪಕ್ಷದಲ್ಲಿ ಜನ್ಮ ವೆತ್ತಿದರು ಎಂದು ಹೇಳಲಾಗುತ್ತದೆ. ಆದರೆ ಭಾದ್ರಪದದ ಕೊನೆಯ ತಿಥಿ ವಿಶ್ವಕರ್ಮನನ್ನು ಪೂಜಿಸಲು ಸೂಕ್ತವೆಂದು ಕೆಲವರು ನಂಬುತ್ತಾರೆ. ವಿಶ್ವಕರ್ಮ ಪೂಜೆಯನ್ನು ಜನ್ಮ ದಿನಾಂಕಕ್ಕಿಂತ ಸೂರ್ಯನ ಚಲನೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಎಂಬ ನಂಬಿಕೆ ಹುಟ್ಟಿಕೊಂಡಿತು. ನಂತರ ಈ ದಿನವನ್ನು ಸೂರ್ಯ ಸಂಕ್ರಾಂತಿ ಎಂದು ಆಚರಿಸಲು ಆರಂಭಿಸಿದರು. ಇದು ಬಹುತೇಕ ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಬರುತ್ತದೆ. ಅದಕ್ಕಾಗಿಯೇ ಅವರು ಈ ದಿನ ವಿಶ್ವಕರ್ಮ ಜಯಂತಿಯನ್ನು ಪೂಜಿಸಲು ಪ್ರಾರಂಭಿಸಿದರು.

ವಿಶ್ವಕರ್ಮ ಪೂಜೆಯ ಶುಭ ಸಮಯ
ಹಿಂದೂ ವೈದಿಕ ಕ್ಯಾಲೆಂಡರ್ ಪ್ರಕಾರ ಈ ವರ್ಷ ವಿಶ್ವಕರ್ಮ ಪೂಜೆಯ ಶುಭ ಸಮಯವು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 6.07 ರಿಂದ 11.43 ರವರೆಗೆ ಇರುತ್ತದೆ. ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ದೇವರಿಂದ ವಿಶೇಷ ಅನುಗ್ರಹ ದೊರೆಯುತ್ತದೆ.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ವಿಶ್ವಕರ್ಮ ಪೂಜೆಯ ಕರ್ತವ್ಯ
ವಿಶ್ವಕರ್ಮ ಪೂಜೆಯ ದಿನದಂದು ಬೆಳಿಗ್ಗೆ ಎದ್ದ ನಂತರ ಯಂತ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ದಿನ ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ವಾಹನಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಪೂಜೆ ಮಾಡಬೇಕು. ವಿಶ್ವಕರ್ಮನನ್ನು ಪೂಜಿಸಲು, ಮೊದಲು ವಿಶ್ವಕರ್ಮನ ವಿಗ್ರಹ ಅಥವಾ ಚಿತ್ರವನ್ನು ಹಳದಿ ಬಟ್ಟೆ ಹೊದಿಸಿದ ಪೀಠದ ಮೇಲೆ ಉಪಕರಣಗಳು ಮತ್ತು ಯಂತ್ರಗಳ ಮಧ್ಯೆ ಸ್ಥಾಪಿಸಿ. ಬಳಿಕ ವಿಶ್ವಕರ್ಮ ಚಿತ್ರ ಮತ್ತು ಯಂತ್ರಗಳಿಗೆ ಅರಿಶಿಣ, ಕುಂಕುಮ, ಗಂಧ ಹಚ್ಚಿ. ಹೂವುಗಳಿಂದ ಅಲಂಕರಿಸಿದ ನಂತರ ಐದು ವಿಧದ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ. ಇದಾದ ನಂತರ ಭಗವಾನ್ ವಿಶ್ವಕರ್ಮರ ಕಥೆಯನ್ನು ಓದಿ. ಪೂಜೆ ಮುಗಿದ ನಂತರ ಕರ್ಪೂರವನ್ನು ಬೆಳಗಿಸಿ, ಆರತಿ ಎತ್ತಿ. ಭಕ್ತರಿಗೆ ಪ್ರಸಾದ ಹಂಚಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 9:34 am, Fri, 13 September 24