ಹಿಂದೂ ಧರ್ಮದಲ್ಲಿ ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮಂಗಳಕರ ಸಮಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಪರಿಗಣಿಸಲಾಗಿದೆ. ಈ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ತಕ್ಷಣ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಈ ವರ್ಷ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬಳಿಕ 2025ರಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಈ ವರ್ಷ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ಬಳಿಕ ಮತ್ತೆ ಮದುವೆ ಸೇರಿದಂತೆ ಎಲ್ಲ ಶುಭ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. 2025 ರಲ್ಲಿ ಮದುವೆಗೆ 76 ಮಂಗಳಕರ ಸಮಯಗಳಿವೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇದನ್ನೂ ಓದಿ: ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
2025 ರಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯಾವುದೇ ಶುಭ ಮಹೂರ್ತವಿಲ್ಲ. ಆದ್ದರಿಂದ ಈ ನಾಲ್ಕು ತಿಂಗಳಲ್ಲಿ ಮದುವೆಯ ಸಂಭ್ರಮ ಇರುವುದಿಲ್ಲ. ಏಕೆಂದರೆ ಜುಲೈ 6 ರಂದು ಶ್ರೀ ಹರಿವಿಷ್ಣು ಯೋಗ ನಿದ್ರಿಸಲಿದ್ದಾನೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಚಾತುರ್ಮಾಸದಲ್ಲಿ ಭಗವಾನ್ ಶಿವನ ಕುಟುಂಬವನ್ನು ಹೊರತುಪಡಿಸಿ, ವಿಷ್ಣು ಸೇರಿದಂತೆ ಎಲ್ಲ ದೇವರುಗಳು ಮತ್ತು ದೇವತೆಗಳು ಯೋಗ-ನಿದ್ರೆಗೆ ಹೋಗುತ್ತಾರೆ. ಶ್ರೀ ವಿಷ್ಣುವು ಅಕ್ಟೋಬರ್ 31 ರವರೆಗೆ ಯೋಗ ನಿದ್ರೆ ಇರುತ್ತಾನೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳಿಗೆ ನಿಷೇಧವಿರುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:56 am, Tue, 7 January 25