Ayodhya Ram Mandir: ಒಂದೂವರೆ ವರ್ಷದಲ್ಲಿ 5.5 ಕೋಟಿ ಭಕ್ತರಿಂದ ಅಯೋಧ್ಯೆ ರಾಮನ ದರ್ಶನ

ಅಯೋಧ್ಯೆಯ ರಾಮ ಮಂದಿರವು ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲ, ಜಾಗತಿಕ ಪ್ರವಾಸಿ ತಾಣವಾಗಿಯೂ ಬೆಳೆಯುತ್ತಿದೆ. ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಕೇವಲ ಒಂದೂವರೆ ವರ್ಷದಲ್ಲಿ 5.5 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತಿದ್ದು, ಇದರ ಜೊತೆಗೆ ಸರ್ಕಾರವು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿಐಪಿಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಹೊಸ ಅತಿಥಿ ಗೃಹ ನಿರ್ಮಾಣವಾಗುತ್ತಿದೆ.

Ayodhya Ram Mandir: ಒಂದೂವರೆ ವರ್ಷದಲ್ಲಿ 5.5 ಕೋಟಿ ಭಕ್ತರಿಂದ ಅಯೋಧ್ಯೆ ರಾಮನ ದರ್ಶನ
Ayodhya Ram Mandir

Updated on: Jun 29, 2025 | 11:28 AM

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ, ಇದು ಧಾರ್ಮಿಕ ಸ್ಥಳವಾಗಿ ಮಾತ್ರವಲ್ಲದೆ ಜಾಗತಿಕ ಪ್ರವಾಸಿ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ. 2024 ರ ಜನವರಿ 22 ರಂದು ರಾಮಲಲ್ಲಾ ವಿರಾಜಮಾನರಾದ ನಂತರ ಈವರೆಗೆ ಅಂದರೆ ಒಂದೂವರೆ ವರ್ಷದಲ್ಲಿ ಸುಮಾರು ಐದೂವರೆ ಕೋಟಿ ಭಕ್ತರು ಅಯೋಧ್ಯೆಗೆ ಆಗಮಿಸಿ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಭಕ್ತರ ಗುಂಪಿನಲ್ಲಿ ಸಾಮಾನ್ಯ ಜನರು ಮಾತ್ರವಲ್ಲದೆ 4.5 ಲಕ್ಷಕ್ಕೂ ಹೆಚ್ಚು ವಿಐಪಿಗಳು ಸೇರಿದ್ದಾರೆ. ಇವರಲ್ಲಿ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಮನರಂಜನೆ, ವ್ಯವಹಾರ ಮತ್ತು ಕ್ರೀಡಾ ಜಗತ್ತಿನ ಪ್ರಮುಖ ವ್ಯಕ್ತಿಗಳೂ ಇದ್ದಾರೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತಿದೆ. ರಸ್ತೆ, ರೈಲು ಮತ್ತು ವಾಯು ಸಂಪರ್ಕವನ್ನು ಸುಧಾರಿಸುವುದು ಸೇರಿದಂತೆ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಅಯೋಧ್ಯೆಯನ್ನು ಸಜ್ಜುಗೊಳಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.

ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಶ್ರೀರಾಮ ಜನ್ಮ ಭೂಮಿ ಖ್ಯಾತಿಯನ್ನು ಗಳಿಸಿದ್ದು, ಇತ್ತೀಚಿಗಷ್ಟೇ ಟೆಕ್ ಬಿಲೇನಿಯರ್ ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಕೂಡ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದರು. ಇದೀಗ ಅಯೋಧ್ಯೆಯಲ್ಲಿ ವಿಐಪಿಗಳ ಹೆಚ್ಚುತ್ತಿರುವ ಸಂಖ್ಯೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಯೋಗಿ ಸರ್ಕಾರ ಇಲ್ಲಿ ಅತ್ಯಾಧುನಿಕ ವಿಐಪಿ ಅತಿಥಿ ಗೃಹವನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಗಣೇಶನ ಪೂಜೆಯ ವೇಳೆ ತಪ್ಪಾಗಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ!

ಅಯೋಧ್ಯಾ ರಾಮ ಮಂದಿರಕ್ಕೆ ಭೇಟಿ ನೀಡುವುದು ಪ್ರತಿಯೊಬ್ಬ ಹಿಂದೂವಿನ ಕನಸು. ಕೇವಲ 17 ತಿಂಗಳಲ್ಲಿ ಐದುವರೆ ಕೋಟಿ ಭಕ್ತರ ದರ್ಶನ ಸಾಮಾನ್ಯ ವಿಷಯವಲ್ಲ. ಪ್ರತಿದಿನ ಒಂದು ಲಕ್ಷ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೂ, ಎಲ್ಲಿಯೂ ಯಾವುದೇ ಸಮಸ್ಯೆಗಳಾಗದಂತೆ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಭಕ್ತರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ದೇವಾಲಯದ ಟ್ರಸ್ಟ್ ಖಚಿತಪಡಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Sun, 29 June 25