ಆಚಾರ್ಯ ಚಾಣಕ್ಯ (Acharya Chanakya) ನೀತಿಶಾಸ್ತ್ರ ಪುಸ್ತಕದಲ್ಲಿ ಜೀವನಕ್ಕೆ ಸಂಬಂಧಪಟ್ಟ ಎಷ್ಟೋ ವಿಷಯಗಳನ್ನು ಉಲ್ಲೇಖಿಸಿ, ತಿಳಿಯ ಹೇಳಿದ್ದಾನೆ. ಜೀವನದಲ್ಲಿ ಉತ್ತಮ ಸ್ಥಾನಮಾನ, ಸನ್ಮಾನ ಗಳಿಸುವ ನಿಟ್ಟಿನಲ್ಲಿ ಏನು ಮಾಡಬಾರದು ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯ ಹೇಳಿದ್ದು, ಅಂತಹ ಗುಣಗಳನ್ನು ಬಿಟ್ಟುಬಿಡುವುದೇ ಒಳಿತು. ಇನ್ನು ಮನುಷ್ಯರಾದವರು ಕೆಲವು ದುರ್ಗುಣಗಳನ್ನು ಬೆಳೆಸಿಕೊಂಡರೆ ಅಂತಹವರ ಜೀವನ ಪೂರ್ತಿಯಾಗಿ ಹಾಳಾಗಿಬಿಡುತ್ತದೆ. ಏನು ಆ ಹವ್ಯಾಸಗಳು, ಖಯಾಲಿಗಳು ತಿಳಿಯೋಣ ಬನ್ನೀ…
ಇಂದಿಗೂ ಚಾಣಕ್ಯ ಬರೆದ ಜೀವನ ನೀತಿ, ರೀತಿ ರಿವಾಜುಗಳನ್ನು ಆದ್ಯಂತವಾಗಿ ಪರಿಪಾಲಿಸುತ್ತಾರೆ. ಆಚಾರ್ಯ ಚಾಣಕ್ಯ ಸಹ ತನ್ನ ಜೀವನಾನುಭವದಿಂದ ಆ ಮಹತ್ವದ, ಅಮೂಲ್ಯ ವಿಷಯಗಳನ್ನು ಶ್ಲೋಕಗಳ ರೂಪದಲ್ಲಿ ಹೇಳಿರುವುದು ಗಮನಾರ್ಹ. ಈ ಗ್ರಂಥಗಳಲ್ಲಿನ ಸಂಗತಿಗಳನ್ನು ಮನುಷ್ಯರು ಅರಿತು, ಜೀವನ ನಡೆಸಿದರೆ ಅವರ ಜೀವನ ಶಾಂತಿಮಯವಾಗಿ, ಸಮೃದ್ಧಿಯಿಂದ ಇರುತ್ತದೆ.
ಆಚಾರ್ಯ ಚಾಣಕ್ಯ ಉತ್ತಮ ರಾಜನೀತಿಜ್ಞ, ಕೂಟನೀತಿಕಾರ, ಮಹಾನ್ ವಿದ್ವಾನ್ ಎಂಬುದರಲ್ಲಿ ಎರಡು ಮಾತಿಲ್ಲ. ಆತನ ಜೀವನ ತ್ಯಾಗ, ಧೃಡತೆ, ಶಕ್ತಿಯುತ, ಸಾಹಸಮಯ ಮತ್ತು ಪುರುಷಾರ್ಥದ ಪ್ರತೀಕ ಎನ್ನಬಹುದು.
1. ಆಚಾರ್ಯ ಚಾಣಕ್ಯ ತನ್ನ ಗ್ರಂಥಗಳಲ್ಲಿ ತಿಳಿಯ ಹೇಳುವಂತೆ ವಿಶ್ವಾಸಘಾತುಕ ವ್ಯಕ್ತಿಯಿಂದ ಧನರಾಶಿ ಸಂಪಾದಿಸಿದ್ದೇ ಆದರೆ ಆ ಹಣ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಇಂತಹ ಜನರು ತಾಪತ್ರಯಗಳಿಗೆ ಸಿಲುಕಿ, ಹಣ ನಾಶವಾಗಿ ಜೀವನವನ್ನೂ ನಾಶ ಮಾಡಿಕೊಳ್ಳುತ್ತಾರೆ.
2. ಮನೆಯಲ್ಲಿ ನಮ್ಮ ಹಿರಿಯರು ಹೇಳುತ್ತಿರುತ್ತಾರೆ… ಹೆಚ್ಚು ಸಮಯ ನಿದ್ದೆ ಮಾಡಬಾರದು. ಇನ್ನು ಚಾಣಕ್ಯನ ಪ್ರಕಾರ ಬೆಳಗ್ಗೆಯಿಂದ ಸಂಜೆಯವರೆಗೂ ನಿದ್ದೆಯನ್ನೆ ಮಾಡುತ್ತಿದ್ದರೆ ಅಂತಹವರ ಮೇಲೆ ಲಕ್ಷ್ಮಿಯ ಕೃಪಾಕಟಾಕ್ಷ ಎಂದಿಗೂ ಬೀರುವುದಿಲ್ಲ. ಬೆಳಗ್ಗೆ ವೇಳೆಯೂ ಹೆಚ್ಚು ಕಾಲ ಮಲಗುವುದರಿಂದ ಮನೆಯಲ್ಲಿ ದರಿದ್ರ ಆವರಿಕೊಳ್ಳುತ್ತದೆ.
3. ಮನುಷ್ಯ ತನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು. ಇದರಿಂದ ದರಿದ್ರ ಆವರಿಸಿಬಿಡುತ್ತದೆ. ಇದರ ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಜನ ಹೆಚ್ಚು ತಿನ್ನುವುದನ್ನು ಬಿಡಬೇಕು.
4. ಜನ ತಮ್ಮ ಮಾತಿನ ಮೇಲೆ ನಿಗಾ ಇಡಬೇಕು. ಸವಿ ಸವಿಯಾಗಿ ಮಾತನಾಡಬೇಕು. ಯಾವ ಮನುಷ್ಯನ ಮಾತಿನಲ್ಲಿ ಮಧುರತೆ ಇರುವುದಿಲ್ಲವೋ ಅಂತಹವರ ಬಳಿ ಲಕ್ಷ್ಮಿ ಎಂದಿಗೂ ವಾಸಿಸಲು ಇಚ್ಛಿಸುವುದಿಲ್ಲ. ಆಚಾರ್ಯ ಚಾಣಕ್ಯನ ಪ್ರಕಾರ ಯಾರು ಬೇರೊಬ್ಬರ ಮನಸ್ಸಿಗೆ ಘಾಸಿ ಬರುವ ಜಾಗೆ ಮಾತನಾಡುತ್ತಾರೋ ಅವರ ಬಳಿ ಲಕ್ಷ್ಮಿ ಬರುವುದು ನಿಲ್ಲಿಸಿಬಿಡುತ್ತಾಳೆ. ಅಂತಹವರು ಜೀವನದಲ್ಲಿ ಬಡವರಾಗುತ್ತಾರೆ.
(According to chanakya niti these mistakes of man can ruin their life)
Published On - 8:19 am, Wed, 29 September 21