ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿದರೆ ಇಡೀ ದಿನ ಪ್ರತಿ ಹಂತದಲ್ಲೂ ಯಶಸ್ಸು ಕಾಣುತ್ತೀರಿ!

| Updated By: ಸಾಧು ಶ್ರೀನಾಥ್​

Updated on: Jun 04, 2024 | 12:12 PM

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದಿನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಬೇಕೆಂದು ಬಯಸುತ್ತಾನೆ. ಅಂತಹವರು ತಮ್ಮ ಕೆಲಸದಲ್ಲಿ ಯಶಸ್ವಿಯಾಗಲಿ ಮತ್ತು ಒಳ್ಳೆಯ ದಿನವನ್ನು ಹೊಂದಲಿ ಎಂದು ಗುರುಡ ಪುರಾಣದಲ್ಲಿ ಇಂತಹ ಅನೇಕ ವಿಷಯಗಳ ಉಲ್ಲೇಖವಿದೆ. ಇದನ್ನು ಪ್ರತಿದಿನ ಬೆಳಿಗ್ಗೆ ಮಾಡಿದರೆ ದಿನವಿಡೀ ಅಂತಃಶಕ್ತಿಯನ್ನು ಹೊಂದುತ್ತಾರೆ. ಮತ್ತು ಪ್ರತಿ ಕಾರ್ಯದಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ.

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿದರೆ ಇಡೀ ದಿನ ಪ್ರತಿ ಹಂತದಲ್ಲೂ ಯಶಸ್ಸು ಕಾಣುತ್ತೀರಿ!
ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸಗಳ ಮಾಡಿದರೆ ಇಡೀ ದಿನ ಯಶಸ್ಸು ಕಾಣುತ್ತೀರಿ!
Follow us on

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದಿನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಬೇಕೆಂದು ಬಯಸುತ್ತಾನೆ. ಅಂತಹವರು ತಮ್ಮ ಕೆಲಸದಲ್ಲಿ ಯಶಸ್ವಿಯಾಗಲಿ ಮತ್ತು ಒಳ್ಳೆಯ ದಿನವನ್ನು ಹೊಂದಲಿ ಎಂದು ಗುರುಡ ಪುರಾಣದಲ್ಲಿ (garuda purana) ಇಂತಹ ಅನೇಕ ವಿಷಯಗಳ ಉಲ್ಲೇಖವಿದೆ. ಇದನ್ನು ಪ್ರತಿದಿನ ಬೆಳಿಗ್ಗೆ ಮಾಡಿದರೆ, ವ್ಯಕ್ತಿಯ ಜೀವನದಲ್ಲಿ (life) ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ವ್ಯಕ್ತಿಯ ಮನಸ್ಸು ಸಂತೋಷದಿಂದ ಅರಳುತ್ತದೆ. ಅವರು ದಿನವಿಡೀ ಅಂತಃಶಕ್ತಿಯನ್ನು (positivity) ಹೊಂದುತ್ತಾರೆ. ಮತ್ತು ಪ್ರತಿ ಕಾರ್ಯದಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ. ಗರುಡ ಪುರಾಣದ ಈ ವಿಷಯಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ಆ ವಿಷಯಗಳು ಯಾವುವು ಎಂದು ಈಗ ತಿಳಿಯೋಣಾ… (spiritual)

ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದ ನಂತರ ಮಾಡಬೇಕಾದ ಮೊದಲ ಕೆಲಸವೆಂದರೆ ಸ್ನಾನ ಮಾಡುವುದು. ಬೆಳಿಗ್ಗೆ ಸ್ನಾನ ಮಾಡುವುದರಿಂದ ದೈಹಿಕ ಮಾತ್ರವಲ್ಲ ಮಾನಸಿಕ ಅಸ್ವಸ್ಥತೆಗಳೂ ದೂರವಾಗುತ್ತವೆ.

ಗರುಡ ಪುರಾಣದ ಪ್ರಕಾರ ಸ್ನಾನ ಮಾಡಿದ ನಂತರ ಯಾವುದೇ ವ್ಯಕ್ತಿ ತನ್ನ ಇಷ್ಟದ ದೇವರನ್ನು ಧ್ಯಾನಿಸಬೇಕು. ಬೆಳಗ್ಗೆ ಪೂಜೆ ಮಾಡುವುದರಿಂದ ಇಡೀ ದಿನ ಧನಾತ್ಮಕ ಶಕ್ತಿ ತುಂಬುತ್ತದೆ. ಇದರೊಂದಿಗೆ, ಪೂರ್ವಜರ ಬಗ್ಗೆಯೂ ಧ್ಯಾನಿಸಬೇಕು, ಇದು ಅವರ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಾಗೆಗಳಿಗೆ ಪಿಂಡ ಇಡುವುದೇಕೆ? ಈ ಸಂಪ್ರದಾಯಕ್ಕೂ ಶ್ರೀರಾಮನಿಗೂ ಇದೆ ಸಂಬಂಧ!

ಗರುಡ ಪುರಾಣದ ಪ್ರಕಾರ ನೀವು ಬೆಳಿಗ್ಗೆ ಧ್ಯಾನದಲ್ಲಿ ಸ್ವಲ್ಪ ಸಮಯವನ್ನು ಕಳೆಯಬೇಕು. ಬೆಳಿಗ್ಗೆ ಸ್ವಲ್ಪ ಸಮಯವನ್ನು ಧ್ಯಾನದಲ್ಲಿ ಕಳೆಯುವ ಜನರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ತಮ್ಮ ಗಮನವನ್ನು ಕೇಂದ್ರೀಕರಿಸುವಲ್ಲಿ ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

ಗರುಡ ಪುರಾಣದ ಪ್ರಕಾರ, ಬೆಳಿಗ್ಗೆ ಹಸು ಅಥವಾ ನಾಯಿಗೆ ಆಹಾರ ಕೊಡುವುದು ಶ್ರೇಯಸ್ಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಪಕ್ಷಿಗಳಿಗೆ ಆಹಾರವನ್ನು ನೀಡಬೇಕು. ಈ ರೀತಿ ಮಾಡುವುದರಿಂದ ದೇವರು ಮತ್ತು ಪೂರ್ವಜರ ಆಶೀರ್ವಾದವನ್ನು ಪಡೆಯುತ್ತಾರೆ.

ಇದನ್ನೂ ಓದಿ: June 2024 Festival Calendar – ಜೂನ್ 2024  ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಗರುಡ ಪುರಾಣದ ಪ್ರಕಾರ, ಬೆಳಿಗ್ಗೆ ಮಂತ್ರಗಳನ್ನು ಪಠಿಸುವುದು ಕೂಡ ಮಂಗಳಕರವಾಗಿದೆ. ನೀವು ಗಾಯತ್ರಿ ಮಂತ್ರ ಅಥವಾ ‘ಓಂ’ ಅನ್ನು ಪಠಿಸಬಹುದು. ಮಂತ್ರಗಳನ್ನು ದಿನವೂ ಒಂದೇ ಸಮಯದಲ್ಲಿ ಮತ್ತು ಒಂದೇ ಪ್ರಮಾಣದಲ್ಲಿ ಪಠಿಸುವುದನ್ನು ನೆನಪಿನಲ್ಲಿಡಿ. ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ನಿಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ