ಮನೆಯಲ್ಲಿ ಸೌಭಾಗ್ಯ, ಸಮೃದ್ಧಿ ಹಾಗೂ ಕುಟುಂಬ ಸದಸ್ಯರಲ್ಲಿ ಸೌಹಾರ್ದತೆ ಮೂಡಲು ವಾಸ್ತು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಆದರೆ ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಂತಹ ಒಂದು ವಿಷಯವೆಂದರೆ ಮನೆಯ ಮೇಲ್ಛಾವಣಿಯಲ್ಲಿರುವ (Terrace) ವಸ್ತುಗಳು. ವಾಸ್ತು ಶಾಸ್ತ್ರದ (Vastu Tips) ಪ್ರಕಾರ, ವಾಸ್ತು ಪಂಡಿತರು ಯಾವುದೇ ಸಂದರ್ಭದಲ್ಲೂ ಕೆಲವು ರೀತಿಯ ವಸ್ತುಗಳನ್ನು ಅಲ್ಲಿ ಇಡಬಾರದು ಎಂದು ಹೇಳುತ್ತಾರೆ. ಆ ವಸ್ತುಗಳು ಯಾವುವು ಎಂಬುದನ್ನು ಈಗ ತಿಳಿದುಕೊಳ್ಳೋಣ (Spiritual).
* ನಮ್ಮಲ್ಲಿ ಹೆಚ್ಚಿನವರು ನಿರುಪಯುಕ್ತ ಮತ್ತು ಒಡೆದ ಪೀಠೋಪಕರಣಗಳು, ಕುರ್ಚಿಗಳು ಮತ್ತು ಟೇಬಲ್‌ಗಳನ್ನು ಮೇಲಿನ ಮಹಡಿಯಲ್ಲಿ ಇಡುತ್ತೇವೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಒಡೆದ ಪೀಠೋಪಕರಣಗಳನ್ನು ಮಹಡಿಯ ಮೇಲೆ ಇಟ್ಟರೆ ಆರ್ಥಿಕ ಸಮಸ್ಯೆಗಳು ಬರುತ್ತವೆ ಎನ್ನುತ್ತಾರೆ.
* ಮನೆ ಕಟ್ಟುವಾಗ ಬಳಸುವ ಕಂಬಗಳನ್ನೂ/ ಬಿದಿರನ್ನು ಮಹಡಿಯ ಮೇಲೆ ಎಸೆಯುತ್ತಾರೆ. ವಾಸ್ತು ಪ್ರಕಾರ ಮನೆಯ ಮೇಲ್ಛಾವಣಿಯಲ್ಲಿ ಬಿದಿರಿನ ಬೊಂಬುಗಳು ಇರಬಾರದು. ಇದರಿಂದ ಮನೆಯಲ್ಲಿ ಕಲಹ ಉಂಟಾಗಿ ಕುಟುಂಬಸ್ಥರ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತದೆ ಎನ್ನಲಾಗಿದೆ.
* ಒಡೆದ ಮಡಿಕೆಗಳು ಮಹಡಿಯ ಮೇಲೆ ಕಂಡುಬರುವ ಸಾಮಾನ್ಯ ವಸ್ತುಗಳಲ್ಲಿ ಒಂದಾಗಿದೆ. ಆದರೆ ಯಾವುದೇ ಸಂದರ್ಭದಲ್ಲೂ ಒಡೆದ ಮಡಕೆಗಳನ್ನು ಮಹಡಿ ಮೇಲೆ ಹಾಕಬಾರದು ಎನ್ನುತ್ತಾರೆ ತಜ್ಞರು. ಹೀಗೆ ಮಾಡುವುದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
* ನೆಲವನ್ನು ಸ್ವಚ್ಛಗೊಳಿಸಲು ಬಳಸುವ ಪೊರಕೆಯನ್ನು ಮಹಡಿಯಲ್ಲಿ ಇಡಲಾಗುತ್ತದೆ. ಆದರೆ ಹೀಗೆ ಮಾಡಿದರೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Also Read: 2024 July Festivals ಜುಲೈ 2024 – ಭಾರತದ ಪ್ರಸಿದ್ಧ ಹಬ್ಬಗಳ ಸಂಕ್ಷಿಪ್ತ ವಿವರ ಇಲ್ಲಿದೆ
* ಮನೆಯಲ್ಲಿ ಹಾಳಾದ ಕಬ್ಬಿಣದ ವಸ್ತುಗಳು, ತಂತಿಗಳು, ಉಪಕರಣಗಳು ಇತ್ಯಾದಿಗಳನ್ನು ಮಹಡಿಯ ಮೇಲೆ ಇಡಲಾಗುತ್ತದೆ. ಆದರೆ ತಜ್ಞರ ಪ್ರಕಾರ ಇದು ಕೂಡ ಒಳ್ಳೆಯದಲ್ಲ. ಇಂತಹ ವಸ್ತುಗಳಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ ಎನ್ನುತ್ತಾರೆ.
* ತಾರಸಿಯ ಮೇಲೆ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದು ಸಾಮಾನ್ಯ ಅಭ್ಯಾಸ. ಈ ಕುಂಡಗಳಲ್ಲಿ ಯಾವುದೇ ಸಂದರ್ಭದಲ್ಲೂ ಮುಳ್ಳಿನ ಗಿಡಗಳನ್ನು ಬೆಳೆಸಬಾರದು ಎನ್ನುತ್ತಾರೆ ತಜ್ಞರು. ಇದರಿಂದ ಆರೋಗ್ಯ ಸಮಸ್ಯೆಗಳಲ್ಲದೆ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)