
ನೀವು ಅಕ್ಷಯ ತೃತೀಯವನ್ನು (Akshaya Tritiya) ಆಚರಿಸಲು ತಯಾರಿ ನಡೆಸುತ್ತಿದ್ದರೆ, ಕೆಲವು ನಿಯಮಗಳನ್ನು ತಿಳಿದಿರುವುದು ಉತ್ತಮ. ಏಕೆಂದರೆ ಈ ದಿನ ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜಿಸುವ ಸಮಯವಾಗಿದ್ದು ಪೂಜೆಗೆ ಯಾವುದೇ ರೀತಿಯ ಅಡೆತಡೆ ಬರಬಾರದು. ಆದ್ದರಿಂದ, ಈ ಹಬ್ಬದ ಮೊದಲು ನೀವು ಮನೆಯಿಂದ ಕೆಲವು ವಸ್ತುಗಳನ್ನು ತೆಗೆದುಹಾಕಬೇಕು. ಇಲ್ಲವಾದಲ್ಲಿ ಇದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಿಂದೂ ಧರ್ಮದಲ್ಲಿ, ಯಾವುದೇ ರೀತಿಯ ಹಬ್ಬ, ವ್ರತಗಳು ಬರುವ ಮೊದಲು ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ಸಮಯದಲ್ಲಿ, ನಕಾರಾತ್ಮಕ ಶಕ್ತಿಯನ್ನು ಸೆಳೆಯುವ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯಬೇಕು. ಅದೇ ರೀತಿ ಅಕ್ಷಯ ತೃತೀಯದ ಮೊದಲು, ವಾಸ್ತು ದೋಷಗಳಿಗೆ ಕಾರಣವಾಗುವ ವಸ್ತುಗಳನ್ನು ಎಸೆಯಬೇಕು. ಆಗ ಮಾತ್ರ ನೀವು ಮಾಡಿದ ಪೂಜೆಯ ಲಾಭವನ್ನು ಪಡೆಯಬಹುದು. ಈ ವರ್ಷ ಅಕ್ಷಯ ತೃತೀಯವನ್ನು ಮೇ 10 ರಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಹಾಗಾಗಿ ಲಕ್ಷ್ಮೀ ದೇವಿಯ ಸ್ಥಳದ ಶುಚಿತ್ವದ ಬಗ್ಗೆ ಕಾಳಜಿ ವಹಿಸಿ.
ಮುರಿದ ಪೊರಕೆಯನ್ನು ಮನೆಯಲ್ಲಿ ಎಂದಿಗೂ ಇಡಬಾರದು. ಇಲ್ಲವಾದಲ್ಲಿ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಲಕ್ಷ್ಮೀ ಮತ್ತು ಕುಬೇರನ ಆರಾಧನೆ ಮಾಡುವವರು ಮುರಿದ ಪೊರಕೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸಬಾರದು. ಜೊತೆಗೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
ಮನೆಯಲ್ಲಿ ಸಸ್ಯಗಳನ್ನು ಬೆಳೆಸುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಸಸ್ಯಗಳು ಒಣಗಿದ್ದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಒಣ ಸಸ್ಯಗಳನ್ನು ಮನೆಯಲ್ಲಿ ಇಡುವುದು ವಾಸ್ತು ಪ್ರಕಾರ ಒಳ್ಳೆಯದಲ್ಲ. ಇದು ವಾಸ್ತು ದೋಷಗಳಿಗೆ ಕಾರಣವಾಗಬಹುದು ಜೊತೆಗೆ ಮನೆಯಲ್ಲಿ ಹಣದ ಕೊರತೆಯನ್ನು ಎದುರಿಸಬೇಕಾಗಬಹುದು.
ಯಾವುದೇ ರೀತಿಯ ಹರಿದ ಬೂಟುಗಳು, ಚಪ್ಪಲಿಗಳನ್ನು ಮನೆಯಲ್ಲಿ ಧರಿಸಬಾರದು ಅಥವಾ ಇಟ್ಟುಕೊಳ್ಳಬಾರದು. ಈ ರೀತಿ ಮಾಡುವುದರಿಂದ ಹಣದ ಕೊರತೆ ಉಂಟಾಗುತ್ತದೆ. ಅಕ್ಷಯ ತೃತೀಯದ ಮೊದಲು ಇದನ್ನು ಮನೆಯಿಂದ ಬಿಸಾಡಿ.
ಇದನ್ನೂ ಓದಿ: ಅಕ್ಷಯ ತೃತೀಯದಂದು ಇರುವ ಶುಭ ಸಮಯ, ದಿನದ ಮಹತ್ವ, ಇತಿಹಾಸದ ಇಲ್ಲಿದೆ
ಅಕ್ಷಯ ತೃತೀಯದ ಮೊದಲು, ಮನೆಯಿಂದ ಕೊಳಕು ಮತ್ತು ಹರಿದ ಬಟ್ಟೆಗಳನ್ನು ಬಿಸಾಡಿ. ಕೊಳಕು ಬಟ್ಟೆಗಳನ್ನು ಧರಿಸುವುದು ಜೀವನದಲ್ಲಿ ದುರಾದೃಷ್ಟವನ್ನು ಮನೆಗೆ ತಂದಂತೆ ಎಂದು ನಂಬಲಾಗಿದೆ. ಆದ್ದರಿಂದ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
ಮನೆಯಲ್ಲಿ ಮುರಿದ ಗಡಿಯಾರವನ್ನು ಇಡಬಾರದು ಅಥವಾ ಕೈ ಗಡಿಯಾರವನ್ನು ಧರಿಸಬಾರದು. ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ದುರಾದೃಷ್ಟ ತರುತ್ತದೆ. ಹಾಗಾಗಿ ಅಕ್ಷಯ ತೃತೀಯದ ಮೊದಲು ಇದನ್ನು ಮನೆಯಿಂದ ಬಿಸಾಡಿ. ಸರಿಯಾಗಿರುವ ಗಡಿಯಾರವನ್ನು ಬಳಸಿ. ಇದು ನಿಮ್ಮ ಸಮಯವನ್ನು ಉತ್ತಮವಾಗಿ ಸಾಗುವಂತೆ ಮಾಡುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ