ಹಿಂದೂ ಧರ್ಮದಲ್ಲಿ ಅನಂತ ಚತುರ್ದಶಿಗೆ (Anant Chaturdashi) ಹೆಚ್ಚಿನ ಮಹತ್ವವಿದೆ. ಈ ದಿನವನ್ನು ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದ್ದು ಬ್ರಹ್ಮಾಂಡದ ಸಂರಕ್ಷಕನಾದ ವಿಷ್ಣುವನ್ನು ಈ ದಿನ ಪೂಜಿಸಲಾಗುತ್ತದೆ. ದ್ರಿಕ್ ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ಅನಂತ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ, ಅನಂತ ಚತುರ್ದಶಿ ಸೆಪ್ಟೆಂಬರ್ 28 ರಂದು ಆಚರಣೆ ಮಾಡಲಾಗುತ್ತದೆ. ಅನಂತ ಚತುರ್ದಶಿಯ ಪೂಜಾ ಮುಹೂರ್ತ ಬೆಳಿಗ್ಗೆ 05:37 ಕ್ಕೆ ಆರಂಭವಾಗಿ ಸಂಜೆ 06: 49 ಕ್ಕೆ ಕೊನೆಗೊಳ್ಳಲಿದೆ.
ಅನಂತ ಚತುರ್ದಶಿ ಹಿಂದೂಗಳಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಅಂದು ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿಯೂ ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುವ ಒಂದು ಮಹತ್ವದ ಹಿಂದೂ ಹಬ್ಬವಾಗಿದೆ. ಈ ಶುಭ ದಿನವನ್ನು ವಿಷ್ಣುವನ್ನು ಪೂಜಿಸಲು ಅರ್ಪಿಸಲಾಗುತ್ತದೆ. ಭಗವಾನ್ ವಿಷ್ಣುವನ್ನು ಅನಂತ ಎಂದೂ ಕರೆಯುತ್ತಾರೆ, ಅಂದರೆ ಅಂತ್ಯವಿಲ್ಲ ಎಂಬ ಅರ್ಥ ನೀಡುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣು, ಅನಂತನ ರೂಪದಲ್ಲಿ ಸರ್ಪದ ಮೇಲೆ ಮಲಗುತ್ತಾನೆ ಮತ್ತು ಕ್ಷೀರ ಸಾಗರದಲ್ಲಿ (ಕ್ಷೀರ ಸಾಗರ) ನಿದ್ರೆಯಲ್ಲಿದ್ದಾಗ, ಅನಂತ ಎಂಬ ಸರ್ಪವು ಸುಮಂತ್ ಎಂಬ ಬ್ರಾಹ್ಮಣನಿಗೆ ವಿಷ್ಣುವಿನ ಕಥೆಯನ್ನು ವಿವರಿಸಲು ಪ್ರಾರಂಭಿಸಿತು ಎಂದು ನಂಬಲಾಗಿದೆ. ನಂತರ ವಿಷ್ಣುವಿನ ಕಥೆಗೆ “ಅನಂತ” ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.
ಇದನ್ನೂ ಓದಿ: ಅನಂತ ಚತುರ್ದಶಿ ದಿನಾಂಕ, ಪೂಜಾ ವಿಧಾನ, ಮಹತ್ವದ ಕುರಿತು ಮಾಹಿತಿ ಇಲ್ಲಿದೆ
ಈ ಶುಭ ದಿನದಂದು, ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅನಂತನನ್ನು ಹೆಚ್ಚಿನ ಭಕ್ತಿ ಮತ್ತು ಸಮರ್ಪಣೆಯಿಂದ ಪೂಜಿಸುತ್ತಾರೆ. ಅಲ್ಲದೆ ಕಾಲ ಸರ್ಪ ದೋಷದಿಂದ ಬಳಲುತ್ತಿರುವ ಜನರು, ಸರ್ಪ ದೇವರನ್ನು ಮತ್ತು ವಿಷ್ಣುವನ್ನು ಪೂಜಿಸಬೇಕು ಮತ್ತು ಅದನ್ನು ತೊಡೆದು ಹಾಕಲು ಅವರ ಆಶೀರ್ವಾದವನ್ನು ಪಡೆಯಬೇಕು ಎಂದು ನಂಬಲಾಗಿದೆ. ಜೊತೆಗೆ ಅನಂತ ಚತುರ್ದಶಿಯಂದು, ಗಣೇಶ ವಿಸರ್ಜನೆಯನ್ನು ಬಹಳ ಆಡಂಬರದಿಂದ ಆಚರಿಸಲಾಗುತ್ತದೆ ಮತ್ತು ಗಣಪತಿಯನ್ನು ಭಕ್ತಿಯಿಂದ ಮುಳುಗಿಸಲಾಗುತ್ತದೆ. 10 ದಿನಗಳ ಕಾಲ ಗಣೇಶನನ್ನು ಪೂಜಿಸಿದ ನಂತರ, 11 ನೇ ದಿನ ಮುಂದಿನ ವರ್ಷ ಮತ್ತೆ ಬಾ ಎಂದು ಪ್ರೀತಿಯಿಂದ ಹೇಳುವ ಮೂಲಕ ಗಣೇಶನಿಗೆ ವಿದಾಯ ಹೇಳಲಾಗುತ್ತದೆ.
1. ಓಂ ನಮೋ ಭಗವತೇ ವಾಸುದೇವಾಯ
2. ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ್ ನಾರಾಯಣ್ ವಾಸುದೇವ
ಈ ಮಂತ್ರವನ್ನು ಅನಂತ ಚತುರ್ದಶಿಯಂದು ಪಠಣೆ ಮಾಡುವುದರಿಂದ ವಿಷ್ಣುವಿನ ಅನುಗ್ರಹವಾಗುತ್ತದೆ. ಜೊತೆಗೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ