ಕೃತಕ ಬುದ್ಧಿಮತ್ತೆಗೆ ಮಾನವೀಯ ಮೌಲ್ಯಗಳ ಪಾಠ: ಸನ್ಯಾಸಿಯ ಸಲಹೆ ಪಡೆದ ಜಾಗತಿಕ AI ಸಂಸ್ಥೆ
ಕ್ಲೌಡ್ AI ತಯಾರಕ ಆಂಥ್ರೋಪಿಕ್, AI ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಕುರಿತು ಚರ್ಚಿಸಲು ತನ್ನ ಅಮೆರಿಕದ ಕಚೇರಿಗೆ ಸ್ವಾಮಿ ಸರ್ವಪ್ರಿಯಾನಂದರನ್ನು ಆಹ್ವಾನಿಸಿತ್ತು. ಅವರ ಭಾಷಣದ ವೀಡಿಯೊ ವೈರಲ್ ಆಗಿದ್ದು, ಇಲ್ಲಿ ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮ್ಮಿಲನವನ್ನು ಕಾಣಬಹುದು . ಸಭೆಯಲ್ಲಿ ವಿವಿಧ ಧರ್ಮಗಳ ಚಿಂತಕರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ AI ತಂತ್ರಜ್ಞಾನವು ಮನುಷ್ಯರಂತೆ ಯೋಚಿಸಲು ಅಥವಾ ಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯವೇ? AI ಅನ್ನು ಸಮಾಜಕ್ಕೆ ಒಳ್ಳೆಯ ರೀತಿಯಲ್ಲಿ ಹೇಗೆ ಬಳಸುವುದು? ಎಂಬ ವಿಷಯಗಳ ಕುರಿತು ಅಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.

ಪ್ರಸಿದ್ಧ ಕ್ಲೌಡ್ ಎಐ (Claude AI)ಯನ್ನು ತಯಾರಿಸಿದ ಆಂಥ್ರೋಪಿಕ್ ಎಂಬ ಕಂಪನಿಯು, ತಂತ್ರಜ್ಞಾನದಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಚರ್ಚಿಸಲು ಹಿಂದೂ ಸನ್ಯಾಸಿ ಸ್ವಾಮಿ ಸರ್ವಪ್ರಿಯಾನಂದ ಅವರನ್ನು ತನ್ನ ಅಮೆರಿಕದ ಕಚೇರಿಗೆ ಆಹ್ವಾನಿಸಿತ್ತು. 2026 ರ ಜೂನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿ ಈ ವಿಷಯದ ಬಗ್ಗೆ ಮಾತನಾಡಿದ್ದು, ಆ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆನ್‌ಲೈನ್ ನೆಪದಲ್ಲಿ ಶುರುವಾಗಿ ನೇರ ಭೇಟಿಯಾದ ಪಯಣ:
ಆಂಥ್ರೋಪಿಕ್ ಕಂಪನಿಯು ಮೊದಲು ಸ್ವಾಮೀಜಿಯವರನ್ನು ಆನ್‌ಲೈನ್ ಮೂಲಕ ಸಂದರ್ಶನ ಮಾಡಿತು. ಆ ನಂತರ ಅವರ ಆಲೋಚನೆಗಳು ಇಷ್ಟವಾಗಿ, ಸಾನ್ ಫ್ರಾನ್ಸಿಸ್ಕೋದಲ್ಲಿರುವ ತಮ್ಮ ಮುಖ್ಯ ಕಚೇರಿಗೆ ನೇರವಾಗಿ ಭೇಟಿ ನೀಡುವಂತೆ ಆಹ್ವಾನಿಸಿತು. ಈ ಸಭೆಯಲ್ಲಿ ಕೇವಲ ಹಿಂದೂ ಧರ್ಮದವರು ಮಾತ್ರವಲ್ಲದೆ ಕ್ಯಾಥೊಲಿಕ್, ಯಹೂದಿ, ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಮುಖ ಚಿಂತಕರು ಹಾಗೂ ಮಾನಸಿಕ ಆರೋಗ್ಯ ತಜ್ಞರು ಭಾಗವಹಿಸಿದ್ದರು. ಕಂಪನಿಯ ಸಂಸ್ಥಾಪಕರಲ್ಲೊಬ್ಬರು ಇಡೀ ಚರ್ಚೆಯಲ್ಲಿ ಜೊತೆಗಿದ್ದು ಎಲ್ಲರ ಸಲಹೆಗಳನ್ನು ಆಲಿಸಿದರು. ಮುಂದಿನ ದಿನಗಳಲ್ಲಿ AI ತಂತ್ರಜ್ಞಾನವು ಮನುಷ್ಯರಂತೆ ಯೋಚಿಸಲು ಅಥವಾ ಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯವೇ? AI ಅನ್ನು ಸಮಾಜಕ್ಕೆ ಒಳ್ಳೆಯ ರೀತಿಯಲ್ಲಿ ಹೇಗೆ ಬಳಸುವುದು? ಎಂಬ ವಿಷಯಗಳ ಕುರಿತು ಅಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.
ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
So this is the part I did not expect.
Anthropic called Swami Sarvapriyananda, a Vedanta monk and flew him to the San Francisco head-office.
> Closed door meeting with NDA signed. > theologians and mental health people in the same sitting, all of it aimed at training Claude. >… https://t.co/pP2vo08DHU pic.twitter.com/prW0Kva67X
— Rohan Paul (@rohanpaul_ai) October 1, 2026
ಯಾರು ಈ ಸ್ವಾಮಿ ಸರ್ವಪ್ರಿಯಾನಂದ?
ಅದ್ವೈತ ವೇದಾಂತದ ತತ್ವಗಳನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ಸರಳವಾಗಿ ಹಾಗೂ ಸ್ಪಷ್ಟವಾಗಿ ತಲುಪಿಸುತ್ತಿರುವ ಸ್ವಾಮಿ ಸರ್ವಪ್ರಿಯಾನಂದ ಅವರನ್ನು ಹಲವರು “ಇಂಟರ್ನೆಟ್ ಯುಗದ ವಿವೇಕಾನಂದ” ಎಂದೇ ಬಣ್ಣಿಸುತ್ತಾರೆ. ತಮ್ಮ ಆಳವಾದ ಜ್ಞಾನ ಮತ್ತು ಬೌದ್ಧಿಕ ಚಿಂತನೆಗಳ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Sat, 3 October 26




