Ashada Masa: ಆಷಾಢ ಮಾಸದಲ್ಲಿ ಮದರಂಗಿ ಹಚ್ಚುವುದೇಕೆ, ಇದರ ಹಿಂದಿದೆ ರಹಸ್ಯ ಕಾರಣ

| Updated By: ಅಕ್ಷತಾ ವರ್ಕಾಡಿ

Updated on: Jul 16, 2024 | 2:49 PM

ಈ ಮಾಸದಲ್ಲಿ ಕೆಲವು ಭಾಗದಲ್ಲಿ ಗೋರಂಟಿ ಉತ್ಸವಗಳು ನಡೆಯುತ್ತವೆ. ಇನ್ನು ಕೆಲವು ಭಾಗದಲ್ಲಿ ಮನೆಯ ಹೆಂಗಳೆಯರು ಸೇರಿ ಮೆಹೆಂದಿ ಅಥವಾ ಮದರಂಗಿಯನ್ನು ಇಟ್ಟುಕೊಳ್ಳುತ್ತಾರೆ. ಯಾವುದೇ ಸಮಾರಂಭವಿಲ್ಲದಿದ್ದರೂ ಕೂಡ ಈ ಪದ್ಧತಿ ಮಾತ್ರ ಜಾರಿಯಲ್ಲಿರುವುದನ್ನು ನೋಡಬಹುದು. ಹಾಗಾದರೆ ಈ ಸಮಯದಲ್ಲಿ ಮದರಂಗಿ ಹಚ್ಚಿಕೊಳ್ಳುವುದು ಒಳ್ಳೆಯದು ಏಕೆ? ಯಾಕಾಗಿ ಇಂತಹ ಶಾಸ್ತ್ರಗಳಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Ashada Masa: ಆಷಾಢ ಮಾಸದಲ್ಲಿ ಮದರಂಗಿ ಹಚ್ಚುವುದೇಕೆ, ಇದರ ಹಿಂದಿದೆ ರಹಸ್ಯ ಕಾರಣ
Follow us on

ಆಷಾಢ ಮಾಸದಲ್ಲಿ ಹಲವಾರು ರೀತಿಯ ಆಚರಣೆಗಳು ರೂಢಿಯಲ್ಲಿರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ನಂಬಿಕೆ ಮಾತ್ರವಲ್ಲ ಇದಕ್ಕೆ ಕೆಲವು ವೈಜ್ಞಾನಿಕ ಕಾರಣಗಳು ಇರುತ್ತವೆ ಎಂಬುದನ್ನು ನಾವು ಮರೆಯುವಂತಿಲ್ಲ. ಈ ಮಾಸದಲ್ಲಿ ಕೆಲವು ಭಾಗದಲ್ಲಿ ಗೋರಂಟಿ ಉತ್ಸವಗಳು ನಡೆಯುತ್ತವೆ. ಇನ್ನು ಕೆಲವು ಭಾಗದಲ್ಲಿ ಮನೆಯ ಹೆಂಗಳೆಯರು ಸೇರಿ ಮೆಹೆಂದಿ ಅಥವಾ ಮದರಂಗಿಯನ್ನು ಇಟ್ಟುಕೊಳ್ಳುತ್ತಾರೆ. ಯಾವುದೇ ಸಮಾರಂಭವಿಲ್ಲದಿದ್ದರೂ ಕೂಡ ಈ ಪದ್ಧತಿ ಮಾತ್ರ ಜಾರಿಯಲ್ಲಿರುವುದನ್ನು ನೋಡಬಹುದು. ಹಾಗಾದರೆ ಈ ಸಮಯದಲ್ಲಿ ಮದರಂಗಿ ಹಚ್ಚಿಕೊಳ್ಳುವುದು ಒಳ್ಳೆಯದು ಏಕೆ? ಯಾಕಾಗಿ ಇಂತಹ ಶಾಸ್ತ್ರಗಳಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಹುಡುಗಿಯರ ಕೈ, ಕಾಲುಗಳು ಮದರಂಗಿಯಿಂದ ತನ್ನ ಅಂದ ಹೆಚ್ಚಿಸಿಕೊಂಡಿರುತ್ತವೆ. ಈ ಗೋರಂಟಿ ಆಚರಣೆಯ ಹಿಂದೆ ಹಿರಿದಾದ ಅರ್ಥವಿದೆ. ಇದು ಕೇವಲ ಅಂದ ಚೆಂದ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಬದಲಾಗಿ ಇದನ್ನು ಅರೆದು ನಿಮ್ಮ ಕೈ ಕಾಲುಗಳಿಗೆ ಹಚ್ಚುವುದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಗೋರಂಟಿಯಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ ಎಂದು ಸಂಶೋಧನೆ ಸಾಬೀತುಪಡಿಸಿದೆ. ಈ ಮಾಸದಲ್ಲಿ ಜೋರಾಗಿ ಮಳೆ ಬರುತ್ತದೆ ಹಾಗಾಗಿ ದೇಹದ ತಾಪಮಾನವನ್ನು ಸರಿಯಾದ ಸ್ಥಿತಿಯಲ್ಲಿಡಲು ಮತ್ತು ಈ ಸಮಯದಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Shravan masa 2024: ವಿವಾಹಿತ ಮಹಿಳೆಯರಿಗೆ ಶ್ರಾವಣ ಮಾಸದಲ್ಲಿ ಮಂಗಳ ಗೌರಿ ವ್ರತ ಏಕೆ ವಿಶೇಷ? ತಿಳಿಯಿರಿ

ನೈಸರ್ಗಿಕವಾಗಿ ಬೆಳೆಯುವ ಗೋರಂಟಿ ಮರಗಳ ಎಲೆಗಳನ್ನು ತಂದು, ಅದನ್ನು ನುಣ್ಣಗೆ ಪೇಸ್ಟ್ ಮಾಡಿ ಬಳಿಕ ಅದನ್ನು ಉಂಡೆಗಳಾಗಿ ಮಾಡಿ ಬೆರಳುಗಳ ಮೇಲೆ ಜೊತೆಗೆ ಕೈ, ಕಾಲುಗಳಿಗೆ ಹಾಕಿಕೊಳ್ಳುತ್ತಾರೆ. ಇದರಿಂದ ಮಳೆಗಾಲದಲ್ಲಿ ಪದೇ ಪದೇ ಆರೋಗ್ಯ ಕೆಡುವುದಿಲ್ಲ ಎಂಬುದು ನಂಬಿಕೆ. ಏಕೆಂದರೆ ನಮ್ಮ ದೇಹದಲ್ಲಿನ ಎಲ್ಲಾ ನರಗಳು ಬೆರಳುಗಳ ತುದಿಯಲ್ಲಿ ಕೊನೆಗೊಳ್ಳುತ್ತವೆ, ಮತ್ತು ಅಲ್ಲಿನ ನರಗಳು ತಣ್ಣಗಾದರೆ, ಇಡೀ ದೇಹವು ತಂಪಾಗುತ್ತದೆ. ಇದರಿಂದ ವಾತಾವರಣಕ್ಕೆ ತಕ್ಕನಾಗಿ ದೇಹವಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅನಾದಿ ಕಾಲದಿಂದಲೂ ಮಹಿಳೆಯರು ಕಾಲುಗಳು, ಬೆರಳುಗಳು, ಅಂಗೈಗಳು ಮತ್ತು ಪಾದಗಳಿಗೆ ಮದರಂಗಿ ಹಾಕುವುದನ್ನು ಕಾಣಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ