
ಮಹಾರಾಷ್ಟ್ರದ ಮೂಲದ ಜ್ಯೋತಿಷಿ ಶರ್ಮಿಷ್ಠ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ್ (ಪಿಓಕೆ) ಕುರಿತು ಹೇಳಿದ ಭವಿಷ್ಯವಾಣಿ ಸದ್ಯ ಎಲ್ಲೆಡೆ ಗಮನ ಸೆಳೆಯುತ್ತಿದೆ. ಕರಣ್ ವರ್ಮಾ ಎಂಬವರ ಪಾಡ್‌ಕ್ಯಾಸ್ಟ್‌ನಲ್ಲಿ ಶರ್ಮಿಷ್ಠ ಅವರು ಭಾಗಿಯಾಗಿದ್ದು, ಈ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮುಂದೇನಾಗಲಿದೆ ಎಂಬುದನ್ನು ವಿವರಿಸಿದ್ದಾರೆ.
ಜ್ಯೋತಿಷಿ ಶರ್ಮಿಷ್ಠ ಅವರು ಅವರ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಇನ್ನೂ ಹೆಚ್ಚಾಗಲಿದೆ. ವಿಮಾನಯಾನ ದುರಂತದ ಉಲ್ಲೇಖಿಸಿ, ಭವಿಷ್ಯದಲ್ಲಿ ಇನ್ನಷ್ಟು ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಪಾಕಿಸ್ತಾನವು ಒಡೆಯುವ ಸಾಧ್ಯತೆಯಿದ್ದು, ಪಿಓಕೆ 2027ರ ಹೊತ್ತಿಗೆ ಮತ್ತೆ ಭಾರತದ ಮಡಿಲು ಸೇರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಜೋಡಿ ಶವ ಪತ್ತೆ
ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಶರ್ಮಿಷ್ಠ ಅವರು ಈ ಹಿಂದೆ ಅಂದರೆ ಕಳೆದ ವರ್ಷದ ಡಿಸೆಂಬರ್ ನಲ್ಲಿ ವಿಮಾನ ಪತನವಾಗುವ ಸಾಧ್ಯತೆಯ ಕುರಿತು ಭವಿಷ್ಯವನ್ನು ನುಡಿದಿದ್ದರು. ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಅಭಿವೃದ್ದಿ ಕಾಣಲಿದ್ದು, ಇದರ ಜೊತೆಗೆ ಸುರಕ್ಷತೆ ಮತ್ತು ರಕ್ಷಣೆಯ ಕೊರತೆಯೂ ಎದುರಾಗಲಿದೆ ಎಂದು ಶರ್ಮಿಷ್ಠೆ ಎಚ್ಚರಿಕೆ ನೀಡಿದ್ದರು. ಈ ಟ್ವೀಟ್ ಈಗಾಗಲೇ 9ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ