ವಿಮಾನ ಪತನಕ್ಕೂ ಆರು ತಿಂಗಳ ಮುನ್ನವೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ಶರ್ಮಿಷ್ಠ; ವಿಶೇಷ ಪಾಡ್‌ಕ್ಯಾಸ್ಟ್ ಇಲ್ಲಿದೆ ನೋಡಿ
ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ಮಹಾರಾಷ್ಟ್ರದ ಜ್ಯೋತಿಷಿ ಶರ್ಮಿಷ್ಠಾ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭವಿಷ್ಯ ನುಡಿದಿದ್ದರು. ಜೊತೆಗೆ ಭಾರತೀಯ ವಿಮಾನಯಾನದಲ್ಲಿ ಸುರಕ್ಷತಾ ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಅವರು ವಿಶೇಷ ಪಾಡ್‌ಕ್ಯಾಸ್ಟ್‌ನಲ್ಲಿ ಈ ಘಟನೆ ಮತ್ತು ಭಾರತದ ಭವಿಷ್ಯದ ಕುರಿತು ಮಾತನಾಡಿದ್ದು, ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
ಜೂನ್ 12 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನ ಕೆಲವೇ ಸೆಕೆಂಡುಗಳಲ್ಲಿ ಭಸ್ಮವಾಗಿ ಹೋಗಿದೆ. ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ವೈದ್ಯಕೀಯ ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ 241 ಪ್ರಯಾಣಿಕರೊಂದಿಗೆ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿ 270 ಜನರು ಸಾವನ್ನಪ್ಪಿದ್ದಾರೆ. ಇದೀಗಾ ಜ್ಯೋತಿಷಿಯೊಬ್ಬರ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಮೂಲದ ಜ್ಯೋತಿಷಿ ಶರ್ಮಿಷ್ಠ ಕಳೆದ ವರ್ಷದ ಡಿಸೆಂಬರ್ ನಲ್ಲಿ ವಿಮಾನ ಪತನವಾಗುವ ಸಾಧ್ಯತೆಯ ಕುರಿತು ಭವಿಷ್ಯವನ್ನು ನುಡಿದಿದ್ದರು. ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಅಭಿವೃದ್ದಿ ಕಾಣಲಿದ್ದು, ಇದರ ಜೊತೆಗೆ ಸುರಕ್ಷತೆ ಮತ್ತು ರಕ್ಷಣೆಯ ಕೊರತೆಯೂ ಎದುರಾಗಲಿದೆ ಎಂದು ಶರ್ಮಿಷ್ಠೆ ಎಚ್ಚರಿಕೆ ನೀಡಿದ್ದರು. ಈ ಟ್ವೀಟ್ ಈಗಾಗಲೇ 9ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಟ್ವೀಟ್ ಇಲ್ಲಿದೆ ನೋಡಿ:

ಇದೀಗ ಜ್ಯೋತಿಷಿ ಶರ್ಮಿಷ್ಠಾ ಅವರು ಕರಣ್ ವರ್ಮಾ ಎಂಬವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗಿಯಾಗಿದ್ದು, ಇಂಡಿಯಾ ವಿಮಾನ ಅಪಘಾತದ ಘಟನೆಯ ಬಗ್ಗೆ ಭವಿಷ್ಯ ನುಡಿದಿದ್ದರ ಬಗ್ಗೆ ವಿವರಿಸಿದ್ದಾರೆ. ಇದಲ್ಲದೇ ಭಾರತ ಮತ್ತು ಜಗತ್ತಿನ ಭವಿಷ್ಯದ ಕುರಿತು ವಿಸ್ತಾರವಾದ ಭವಿಷ್ಯವಾಣಿಗಳನ್ನು ಮಾಡಿದ್ದಾರೆ. ಈ ಭವಿಷ್ಯವಾಣಿಗಳು ಭಾರತ-ಪಾಕಿಸ್ತಾನ ಯುದ್ಧದ ಸಾಧ್ಯತೆ, ಭಾರತದ ಮುಂದಿನ ಪ್ರಧಾನಿ, ಇರಾನ್-ಅಮೇರಿಕಾ ಸಂಘರ್ಷ ಮತ್ತು ಜಾಗತಿಕ ರಾಜಕೀಯದ ಬಗ್ಗೆಯೂ ಒಳಗೊಂಡಿವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 am, Wed, 25 June 25




