Vasthu Tips: ನಿಂಬೆಹಣ್ಣು ಬಳಸಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಕಂಡುಹಿಡಿಯುವುದು ಹೇಗೆ?
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದ್ದರೆ ಅದು ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಲ್ಲಿ ನಿಂಬೆಹಣ್ಣು ಮತ್ತು ಗಂಗಾಜಲವನ್ನು ಬಳಸಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಪತ್ತೆ ಹಚ್ಚುವ ಮತ್ತು ತೆಗೆದುಹಾಕುವ ಸುಲಭ ವಿಧಾನಗಳನ್ನು ವಿವರಿಸಲಾಗಿದೆ. ಕೇವಲ ಒಂದೇ ಒಂದು ನಿಂಬೆಹಣ್ಣಿನಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಬಹುದು.

ವಾಸ್ತು ಶಾಸ್ತ್ರದಲ್ಲಿ ಧನಾತ್ಮಕ ಶಕ್ತಿ ಮತ್ತು ನಕಾರಾತ್ಮಕ ಶಕ್ತಿಯ ಬಗ್ಗೆ ವಿವರಿಸಲಾಗಿದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ಅದು ಕುಟುಂಬದ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮನೆಯಲ್ಲಿ ಜಗಳ, ಮನಸ್ತಾಪ ಹಾಗೂ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಕೇವಲ ಒಂದೇ ಒಂದು ನಿಂಬೆಹಣ್ಣಿನಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಬಹುದು.
ನಿಂಬೆಹಣ್ಣಿನಿಂದ ನಕರಾತ್ಮಕ ಶಕ್ತಿ ತೊಡೆದುಹಾಕುವುದು ಹೇಗೆ?
ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿಂಬೆಹಣ್ಣಿನಿಂದ ಪರೀಕ್ಷಿಸಲು, ಮೊದಲು ಒಂದು ಲೋಟಕ್ಕೆ ಶುದ್ಧ ನೀರು ತುಂಬಿಸಇ. ಬಳಿಕ ಅದಕ್ಕೆ ನಿಂಬೆಹಣ್ಣು ಹಾಕಿ, 10-20 ನಿಮಿಷಗಳ ಕಾಲ ಬಿಡಿ. ನಿಂಬೆಹಣ್ಣು ನೀರಿನಲ್ಲಿ ತೇಲುತ್ತಿದ್ದರೆ, ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದೆ ಎಂದರ್ಥ. ಮತ್ತೊಂದೆಡೆ, ನಿಂಬೆಹಣ್ಣು ನೀರಿನಲ್ಲಿ ಮುಳುಗಿದರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರ್ಥ.
ಇದನ್ನೂ ಓದಿ: ಗಣೇಶನ ಪೂಜೆಯ ವೇಳೆ ತಪ್ಪಾಗಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ!
ಇದಲ್ಲದೆ, ನೀವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಇನ್ನೊಂದು ಸರಳ ರೀತಿಯಲ್ಲಿ ಕಂಡುಹಿಡಿಯಬಹುದು. ಇದಕ್ಕಾಗಿ, ಒಂದು ಲೋಟದಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಗಂಗಾ ಜಲ ಸೇರಿಸಿ. ನಂತರ ಆ ನೀರಿಗೆ ಗುಲಾಬಿ ದಳಗಳನ್ನು ಸೇರಿಸಿ. ಇದಾದ ನಂತರ, ಈ ಗಾಜಿನ ಲೋಟವನ್ನು ಮನೆಯ ಒಂದು ಮೂಲೆಯಲ್ಲಿ ಮರೆಮಾಡಿ. 24 ಗಂಟೆಗಳ ಕಾಲ ಎಲ್ಲರ ಕಣ್ಣುಗಳಿಂದ ದೂರವಿಡಿ. 24 ಗಂಟೆಗಳ ನಂತರ ನೀರಿನ ಬಣ್ಣ ಸಂಪೂರ್ಣವಾಗಿ ಬದಲಾಗಿದ್ದರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥಮಾಡಿಕೊಳ್ಳಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Wed, 25 June 25