ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ, ಊಟದಲ್ಲಿ ವಿಷದ ಶಂಕೆ
ಏರ್ ಇಂಡಿಯಾ ವಿಮಾನದಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇದೀಗ ಏರ್ ಇಂಡಿಯಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ ಹಲವು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಇದೀಗ ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಏರ್ ಇಂಡಿಯಾ ವಿಮಾನ AI 130ರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಏರ್ ಇಂಡಿಯಾ ಕಂಪನಿ ತನಿಖೆಯನ್ನು ನಡೆಸುತ್ತಿದೆ.

ಈ ಏರ್ ಇಂಡಿಯಾ ವಿಮಾನಕ್ಕೆ (Air India flight) ಯಾರೋದೋ ಶಾಪ ಇದೆ ಅಥವಾ ದೃಷ್ಟಿಯಾಗಿರಬೇಕು. ಒಂದಲ್ಲ ಒಂದು ಸಮಸ್ಯೆಗಳು ಈ ವಿಮಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಈ ವಿಮಾನ ಊಟದ ವಿಚಾರವಾಗಿ ಸದ್ದು ಮಾಡುತ್ತಿದೆ. ಸೋಮವಾರ ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಏರ್ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಸೇರಿದಂತೆ ಆರೋಗ್ಯ ವ್ಯತ್ಯಾಸ ಕಂಡು ಬಂದಿದೆ. ವಿಮಾನದಲ್ಲಿ ಆರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 11 ಜನರು ಅಸ್ವಸ್ಥರಾಗಿದ್ದಾರೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಬಗ್ಗೆ ಏರ್ ಇಂಡಿಯಾ ಕಂಪನಿಯೂ ಕೂಡ ದೃಢಪಡಿಸಿದೆ.
ಈ ವೇಳೆ ವಿಮಾನ ಮುಂಬೈನಲ್ಲಿ ಇಳಿದಿದೆ. ನಂತರ ಇಬ್ಬರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆಯು ಸಾಧ್ಯತೆ ಇರುತ್ತದೆ ಏಕೆಂದರೆ ಕ್ಯಾಬಿನ್‌ನಲ್ಲಿ ಒತ್ತಡ ಕೆಲಸಗಳು ಇರುತ್ತದೆ. ಆದರೆ ವಿಷಪ್ರಾಶನ ಆಗಿದ್ದೀಯಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಕಂಪನಿ ಹೇಳಿದೆ. ವಿಮಾನದಲ್ಲಿ ನಡೆದ ಈ ಘಟನೆಯ ಬಗ್ಗೆ ಖಂಡಿತ ನಾವು ತನಿಖೆ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಊಟದಿಂದ ಪ್ರಯಾಣಿಕರು ಅಸ್ವಸ್ಥರಾಗಿದ್ದಾರಾ? ಅಥವಾ ಆಮ್ಲಜನಕದ ಕೊರತೆಯಿಂದ ಈ ಸಮಸ್ಯೆ ಆಗಿದೆಯೇ ಎಂಬ ಬಗ್ಗೆ ನೋಡಬೇಕಿದೆ. ಕೆಲವೊಂದು ಬಾರಿ ಆಮ್ಲಜನಕದ ಕೊರತೆಯಿಂದಲೂ ಅಸ್ವಸ್ಥರಾಗುವ ಸಾಧ್ಯತೆ ಕೂಡ ಇದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ
ಇನ್ನು ಇದೆ ಊಟವನ್ನು ಪೈಲೆಟ್ಗಳು ಕೂಡ ಮಾಡುತ್ತಾರೆ, ಆದರೆ ಅವರಿಗೆ ಯಾವುದೇ ಇಂತಹ ಸಮಸ್ಯೆ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. ಪ್ರಯಾಣಿಕರಿಗೆ ಊಟ ನೀಡಿದ ನಂತರ ಅವರು ಊಟ ಮಾಡುತ್ತಾರೆ. ಲಂಡನ್ ಹೀಥ್ರೂದಿಂದ ಮುಂಬೈಗೆ ಹೊರಟಿದ್ದ AI-130 ವಿಮಾನದಲ್ಲಿ , ಐದು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗೆ ಹಾರಾಟದ ವೇಳೆ ತಲೆತಿರುಗುವಿಕೆ ಮತ್ತು ವಾಕರಿಕೆ ಕಾಣಿಸಿಕೊಂಡಿದೆ ಎಂದು ಏರ್ ಇಂಡಿಯಾ ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿಕೆ ನೀಡಿದೆ. ವಿಮಾನವು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಯಾವುದೇ ಅಪಾಯ ಆಗಿಲ್ಲ. ನಮ್ಮ ವೈದ್ಯಕೀಯ ತಂಡಗಳು ತಕ್ಷಣದ ವೈದ್ಯಕೀಯ ನೆರವು ನೀಡಿದ್ದಾರೆ. ಇಬ್ಬರು ಪ್ರಯಾಣಿಕರು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿಗೆ ಈ ಸಮಸ್ಯೆಯನ್ನು ಅನುಭವಿಸಿದ್ದಾರೆ. ಇದೀಗ ಅವರನ್ನು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅವರನ್ನು ಆಸ್ಪತ್ರೆಯಿಂದ ವಾಪಸ್ಸು ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Tue, 24 June 25








