AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ

ವಿದ್ಯುತ್​​​ ಚಾಲಿತ ವಿಮಾನವೊಂದು ಬರುತ್ತಿದೆ. ಈಗಾಗಲೇ ಇದರ ಹಾರಾಟದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರಯಾಣಿಕರನ್ನು ಹೊತ್ತು, ಕೇವಲ 30 ನಿಮಿಷಗಳಲ್ಲಿ 130 ಕಿ.ಮೀ ಹಾರಾಟ ನಡೆಸಿದೆ. ಇದು ಇಂಧನ ಹಾಗೂ ಹಲವು ವೆಚ್ಚಗಳನ್ನು ಉಳಿಸುತ್ತದೆ ಎಂದು ಹೇಳಲಾಗಿದೆ. ಈ ವಿಮಾನ ಯಾವಾಗದಿಂದ ಅಧಿಕೃತವಾಗಿ ಹಾರಾಟ ಮಾಡಲಿದೆ, ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂಬ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ
Electric PlaneImage Credit source: NDTV
ಸಾಯಿನಂದಾ
| Edited By: |

Updated on:Jun 23, 2025 | 6:02 PM

Share

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಸಂಪೂರ್ಣ ವಿದ್ಯುತ್ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಬೀಟಾ ಟೆಕ್ನಾಲಜೀಸ್‌ನ ಆಲಿಯಾ CX300 (Alia CX300) ಎಂಬ ವಿಮಾನ ಪ್ರಯಾಣಿಕರನ್ನು ಹೊತ್ತ ಹಾರಾಟ ನಡೆಸಿದೆ. ಈ ತಿಂಗಳ ಆರಂಭದಲ್ಲಿ ಈಸ್ಟ್ ಹ್ಯಾಂಪ್ಟನ್‌ನಿಂದ ಅಮೆರಿಕದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ನಾಲ್ಕು ಪ್ರಯಾಣಿಕರೊಂದಿಗೆ ಹಾರಾಟ ನಡೆಸಿತು. ಫಾಕ್ಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 70 ನಾಟಿಕಲ್ ಮೈಲುಗಳನ್ನು (130 ಕಿಲೋಮೀಟರ್) ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಈ ಹಾರಾಟ ವೆಚ್ಚ ಹೆಲಿಕಾಪ್ಟರ್‌ಗೆ ಹೋಲಿಸಿದ್ರೆ ಅಂದಾಜು ರೂ. 13,885 ($160) ಇಂಧನ ವೆಚ್ಚವಾಗುತ್ತದೆ. ಆದರೆ ಈ ವಿಮಾನಕ್ಕೆ ಕೇವಲ ರೂ. 694 ($8) ವೆಚ್ಚದಲ್ಲಿ ತಲುಪಿದೆ ಎಂದು ಹೇಳಲಾಗಿದೆ. ಜತೆಗೆ ಇದರಲ್ಲಿ ಅಂತಹ ಯಾವುದೇ ಶಬ್ದ-ಗದ್ದಲಗಳು ಇರುವುದಿಲ್ಲ, ಆರಾಮವಾಗಿ ಪ್ರಯಾಣಿಸಬಹುದು.

“ಇದು 100% ವಿದ್ಯುತ್ ಚಾಲಿತ ವಿಮಾನವಾಗಿದ್ದು, ಈಸ್ಟ್ ಹ್ಯಾಂಪ್ಟನ್ ನಿಂದ ಜೆಎಫ್ ಕೆಗೆ ಪ್ರಯಾಣಿಕರೊಂದಿಗೆ ಹಾರಾಟ ನಡೆಸಿದ್ದು, ನ್ಯೂಯಾರ್ಕ್ ಬಂದರು ಪ್ರಾಧಿಕಾರ ಮತ್ತು ನ್ಯೂಯಾರ್ಕ್ ಪ್ರದೇಶಕ್ಕೆ ಇದು ಮೊದಲ ಹಾರಾಟವಾಗಿದೆ. 35 ನಿಮಿಷಗಳಲ್ಲಿ 130 ಕಿಲೋಮೀಟರ್ ದೂರ ಕ್ರಮಿಸಿದ್ದೇವೆ” ಎಂದು ಬೀಟಾ ಟೆಕ್ನಾಲಜೀಸ್ ನ ಸಂಸ್ಥಾಪಕ ಮತ್ತು ಸಿಇಒ ಕೈಲ್ ಕ್ಲಾರ್ಕ್ ಹೇಳಿದ್ದಾರೆ. ಇದನ್ನು ಇಲ್ಲಿಂದ ಹಾರಾಟ ನಡೆಸಲು ಕೇವಲ 8$ (694 ರೂ) ಮಾತ್ರ ಖರ್ಚಾಗಿದೆ. ಪ್ರಯಾಣಿಕರು ಇಲ್ಲಿ ಪೈಲೆಟ್​ ಹಾಗೂ ವಿಮಾನಕ್ಕೆ ಮಾತ್ರ ಪಾವತಿ ಮಾಡಬೇಕು ಅಷ್ಟೇ, ಮೂಲಭೂತವಾಗಿ, ಇದು ತುಂಬಾ ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದ್ದಾರೆ. ಕಂಪನಿಯ ಪ್ರಕಾರ, CX300 ಒದಗಿಸುವ ಸೌಕರ್ಯ, ಪ್ರಯಾಣದ ಅನುಭವದಿಂದ ಮುಂದಿನ ದಿನದಲ್ಲಿ ಇದು ಹೆಚ್ಚು ಜನಪ್ರಿಯತೆ ಪಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು

ಇದನ್ನೂ ಓದಿ
Image
ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ
Image
ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಮನೆಮಂದಿ
Image
ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ
Image
ನಿಂತ ಮಳೆನೀರಲ್ಲಿ ಕುಣಿಯಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

FAA (Federal Aviation Administration) ಅನುಮೋದನೆ ಬಾಕಿ

ವರ್ಮೊಂಟ್ ಮೂಲದ ಬೀಟಾ ಟೆಕ್ನಾಲಜೀಸ್ ಕಂಪನಿ 2017 ರಲ್ಲಿ ಸ್ಥಾಪನೆಯಾಗಿದೆ. ಈ ವಿದ್ಯುತ್ ವಿಮಾನಗಳ ಉತ್ಪಾದನೆ ಹಾಗೂ ಪ್ರಮಾಣೀಕರಣ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸಲು $318 (27,597.99 ರೂ.) ಮಿಲಿಯನ್ ಹಣವನ್ನು ಮಿಸಲಿಟ್ಟಿದೆ. ಕಳೆದ ಆರು ವರ್ಷಗಳಿಂದ, ಕಂಪನಿಯು ಈ ವಿಮಾನದ ಸಲವಾಗಿ ಕೆಲಸ ಮಾಡುತ್ತಿದೆ.  6 ವರ್ಷದಲ್ಲಿ ಇದರ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ CX300 ಮಾದರಿ ಮತ್ತು ಅದರ ಅಲಿಯಾ 250 eVTOL ಸಾಮಾರ್ಥ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಈ ವಿದ್ಯುತ್​​​ ವಿಮಾನಯಾನಕ್ಕೆ ಒಪ್ಪಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ. ಬೀಟಾ ವಿಮಾನಗಳು ಒಂದೇ ಚಾರ್ಜ್‌ನಲ್ಲಿ 250 ನಾಟಿಕಲ್ ಮೈಲುಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ನಗರಗಳು ಮತ್ತು ಉಪನಗರಗಳ ನಡುವಿನ ಸಂಪರ್ಕವನ್ನು ಸುಲಭವಾಗಿ ಸಾಧಿಸಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Mon, 23 June 25

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್