Gold Rings
ಬಂಗಾರವು ಅನಾಧಿಕಾಲದಿಂದಲೂ ಮಾನವನ ಜೀವನದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಆಭರಣವಾಗಿ, ಹೂಡಿಕೆಯಾಗಿ, ಮತ್ತು ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯದ ದೃಷ್ಟಿಯಿಂದಲೂ ಬಂಗಾರಕ್ಕೆ ಅಗ್ರಸ್ಥಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಚಿನ್ನದ ಆಭರಣಗಳನ್ನು ಧರಿಸುವುದು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಅದರಲ್ಲೂ ಚಿನ್ನದ ಉಂಗುರಗಳು ನಿರ್ದಿಷ್ಟ ಬೆರಳುಗಳಲ್ಲಿ ಧರಿಸಿದಾಗ ವಿವಿಧ ಶುಭ ಫಲಗಳನ್ನು ನೀಡುತ್ತವೆ ಎಂಬ ನಂಬಿಕೆ ಬಲವಾಗಿದೆ.
ಜ್ಯೋತಿಷ್ಯದ ಪ್ರಕಾರ, ಬಂಗಾರವು ನವಗ್ರಹಗಳಲ್ಲಿ ಗುರು ಗ್ರಹವನ್ನು ಪ್ರತಿನಿಧಿಸುತ್ತದೆ. ಗುರು ಗ್ರಹವು ಜ್ಞಾನ, ಸಂಪತ್ತು, ಅದೃಷ್ಟ, ಸಕಾರಾತ್ಮಕ ಶಕ್ತಿ ಮತ್ತು ವಿಸ್ತರಣೆಯ ಕಾರಕವಾಗಿದೆ. ಚಿನ್ನವನ್ನು ಧರಿಸುವುದರಿಂದ ಗುರುವಿನ ಅನುಗ್ರಹ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಮಾನಸಿಕವಾಗಿ ಸಂತೋಷ, ಸಕಾರಾತ್ಮಕ ಚಿಂತನೆ, ಮೈಂಡ್ ಆಕ್ಟಿವ್ ಆಗಿರುವುದರ ಜೊತೆಗೆ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂಬುದು ಪ್ರಾಚೀನ ಕಾಲದಿಂದಲೂ ಇರುವ ನಂಬಿಕೆ.
ಇದನ್ನೂ ಓದಿ: ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!
ಚಿನ್ನದ ಉಂಗುರಗಳನ್ನು ಯಾವ ಬೆರಳಿಗೆ ಧರಿಸುವುದರಿಂದ ಏನು ಲಾಭ?
- ಉಂಗುರ ಬೆರಳು (ರವಿ ಬೆರಳು): ಈ ಬೆರಳನ್ನು ರವಿ ಬೆರಳು ಎಂದೂ ಕರೆಯಲಾಗುತ್ತದೆ. ಇಲ್ಲಿ ಚಿನ್ನದ ಉಂಗುರ ಧರಿಸುವುದರಿಂದ ಸೂರ್ಯನ ಅನುಗ್ರಹ ದೊರೆಯುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಹೆಚ್ಚಿಸುತ್ತದೆ, ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಸೂರ್ಯನು ಆಡಳಿತ, ನಾಯಕತ್ವ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ.
- ತೋರು ಬೆರಳು (ಗುರು ಬೆರಳು): ಇದು ಗುರುವಿನ ಬೆರಳು. ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಎಲ್ಲೋ ಸಫೈರ್ ಅನ್ನು ಈ ಬೆರಳಲ್ಲಿ ಧರಿಸಲು ಸೂಚಿಸಲಾಗುತ್ತದೆ. ಇಲ್ಲಿ ಚಿನ್ನದ ಉಂಗುರ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ.
- ಮಧ್ಯದ ಬೆರಳು (ಶನಿ ಬೆರಳು): ಈ ಬೆರಳನ್ನು ಶನಿ ಗ್ರಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಚಿನ್ನದ ಉಂಗುರ ಧರಿಸುವುದರಿಂದ ಜೀವನದಲ್ಲಿ ಸ್ಥಿರತ್ವ, ಖ್ಯಾತಿ ಮತ್ತು ಸಮತೋಲನ ದೊರೆಯುತ್ತದೆ. ಶನಿ ಗ್ರಹವು ಶಿಸ್ತು ಮತ್ತು ನ್ಯಾಯದ ಸಂಕೇತವಾಗಿದೆ.
- ಕಿರುಬೆರಳು (ಬುಧ ಬೆರಳು): ಈ ಬೆರಳನ್ನು ಬುಧ ಗ್ರಹಕ್ಕೆ ಸಂಬಂಧಿಸಿದೆ. ಇಲ್ಲಿ ಉಂಗುರ ಧರಿಸುವುದರಿಂದ ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ಬೌದ್ಧಿಕ ಸಾಮರ್ಥ್ಯಗಳು ಹೆಚ್ಚುತ್ತವೆ ಎಂದು ನಂಬಲಾಗಿದೆ. ಬುಧ ಗ್ರಹವು ವ್ಯಾಪಾರ ಮತ್ತು ಶಿಕ್ಷಣದ ಕಾರಕವಾಗಿದೆ.
- ಹೆಬ್ಬೆರಳು (ಶುಕ್ರ ಬೆರಳು): ಹೆಬ್ಬೆರಳನ್ನು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ವ್ಯಾಪಾರ ಮತ್ತು ಸಂಪತ್ತಿನ ವೃದ್ಧಿಗಾಗಿ ಹೆಬ್ಬೆರಳಿನಲ್ಲಿ ಉಂಗುರ ಧರಿಸಲು ಸಲಹೆ ನೀಡಲಾಗುತ್ತದೆ. ಶುಕ್ರ ಗ್ರಹವು ಸಂಪತ್ತು, ಸೌಂದರ್ಯ ಮತ್ತು ಐಷಾರಾಮಿ ಜೀವನಕ್ಕೆ ಅಧಿಪತಿ.
ಚಿನ್ನದ ಉಂಗುರವನ್ನು ಯಾವುದೇ ಬೆರಳಿನಲ್ಲಿ ಧರಿಸಿದರೂ ಶುಭಕರ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಮೇಲೆ ತಿಳಿಸಿದಂತೆ ಪ್ರತಿ ಬೆರಳಿನಲ್ಲೂ ಧರಿಸುವುದರಿಂದ ನಿರ್ದಿಷ್ಟವಾದ ಶುಭ ಫಲಗಳು ದೊರೆಯುತ್ತವೆ. ಈ ಎಲ್ಲಾ ಅಂಶಗಳು ವ್ಯಕ್ತಿಯ ನಂಬಿಕೆ ಮತ್ತು ಆಸ್ತಿಕತೆಗೆ ಸಂಬಂಧಿಸಿವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ