ನಮ್ಮ ಜೀವನದಲ್ಲಿ ಜ್ಯೋತಿಷ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದರ ಸಹಾಯದಿಂದ ನಾವು ನಮ್ಮ ಜೀವನದಲ್ಲಿರುವ ಬಹುಪಾಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ತಿಳಿಸಿರುವ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸಮಸ್ಯೆಗಳನ್ನು ಕೆಡಿಮೆ ಮಾಡಿಕೊಂಡು ಸಂತೋಷ ಪಡೆಯಬಹುದು. ಈ ಪ್ರಕ್ರಿಯೆ ನಮ್ಮ ದಿನಚರಿಯಿಂದ ಪ್ರಾರಂಭವಾಗಬೇಕು. ಅಂದರೆ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯಲು ನಾವು ದಿನನಿತ್ಯ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದು ಕೂಡ ಮುಖ್ಯವಾಗುತ್ತದೆ. ಇದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಸೋಮವಾರ:
ಈ ವಾರ ಶಿವ ಮತ್ತು ಚಂದ್ರ ದೇವನ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಬಿಳಿ ಮತ್ತು ಬೆಳ್ಳಿ (ಸಿಲ್ವರ್) ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಜೀವನದಲ್ಲಿ ಶಾಂತಿ ಸಿಗುತ್ತದೆ.
ಮಂಗಳವಾರ:
ಮಂಗಳವಾರ ಧೈರ್ಯಶಾಲಿಯಾದ ಹನುಮಂತನ ದಿನ. ಆದ್ದರಿಂದ, ಭಜರಂಗಬಲಿಯ ಆಶೀರ್ವಾದ ಪಡೆಯಲು, ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ದೇವಾಲಯದಿಂದ ಹೊರಬರುವಾಗ ಗಂಟೆ ಬಾರಿಸಬಾರದು ಏಕೆ ಗೊತ್ತಾ?
ಬುಧವಾರ:
ಬುಧವಾರ ಗಣಪನಿಗೆ ಸಮರ್ಪಿತವಾದ ದಿನವಾಗಿದೆ. ಹಸಿರು ಗಣೇಶನಿಗೆ ತುಂಬಾ ಇಷ್ಟವಾದ್ದರಿಂದ ಈ ದಿನ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಗುರುವಾರ:
ಗುರುವಾರದಂದು ವಿಷ್ಣು ಮತ್ತು ಗುರು ರಾಯರನ್ನು ನೆನೆಯಲಾಗುತ್ತದೆ. ಹಾಗಾಗಿ ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.
ಶುಕ್ರವಾರ:
ಶುಕ್ರವಾರವನ್ನು ಲಕ್ಷ್ಮೀ ಮತ್ತು ಶುಕ್ರ ದೇವನನ್ನು ನೆನೆಯಲಾಗುತ್ತದೆ. ಈ ದಿನದ ಪೂಜೆಯಲ್ಲಿ ಲಕ್ಷ್ಮೀ ದೇವಿಗೆ ಕೆಂಪು ಕುಂಕುಮ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು ಎನ್ನಲಾಗುತ್ತದೆ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಶನಿವಾರ:
ಈ ವಾರ ಶನಿ ದೇವರಿಗೆ ಸಮರ್ಪಿತವಾಗಿದೆ. ಆತನ ಆಶೀರ್ವಾದ ಪಡೆಯುವುದರಿಂದ ಜೀವನದಲ್ಲಿ ಬರುವ ಎಲ್ಲಾ ರೀತಿಯ ತೊಂದರೆಗಳು ನಿವಾರಣೆ ಯಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನಿಗೆ ಕಪ್ಪು ಬಣ್ಣ ಬಲು ಪ್ರೀತಿಯಾಗಿರುವುದರಿಂದ ಅದೇ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಭಾನುವಾರ:
ಭಾನುವಾರವನ್ನು ಸೂರ್ಯ ದೇವನ ಆರಾಧನೆಯ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವರ ಮಹಿಮೆಯಂತೆ, ಈ ದಿನದಂದು ಚಿನ್ನ, ಗುಲಾಬಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ