ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಮಾನವ ನಡವಳಿಕೆಯ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸುತ್ತಾನೆ. ಅದರಲ್ಲೂ ವ್ಯಕ್ತಿ ಬಾಹ್ಯವಾಗಿ ಕಾಣುವುದೇ ಬೇರೆ ಮತ್ತು ಆಂತರಿಕವಾಗಿ ಆತನ ಒಳಗಿನ ಮನಸ್ಥಿತಿಯೇ ಬೇರೆ.. ಹೌದು ಒಂದೇ ವ್ಯಕ್ತಿಯಲ್ಲಿ ಎರಡು ರೂಪಗಳಿರಲು ಸಾಧ್ಯ ಎಂದು ಚಾಣಕ್ಯ ವಿವರಿಸುತ್ತಾನೆ. ಚಾಣಕ್ಯ (chanakya niti) ಹೇಳುವಂತೆ ಒಂದು ಹೊರಜಗತ್ತಿಗೆ ಮತ್ತು ಇನ್ನೊಂದು ವಾಸ್ತವವಾಗಿ ಒಳಗಿನ ಚಿಂತನೆಯದ್ದಾಗಿದೆ. ಈ ಎರಡು ರೀತಿಯಲ್ಲಿ ವರ್ತಿಸುವ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ತಪ್ಪುಗಳನ್ನು (mistake) ಮಾಡುತ್ತಾನಂತೆ. ಅಂತಹವರು ಜೈಗೊಳ್ಳುವ ಯಾವುದೇ ಕೆಲಸವು ಎಂದಿಗೂ ಸರಿಯಾದ ಫಲಿತಾಂಶವನ್ನು ನೀಡುವುದಿಲ್ಲ. ಎಷ್ಟೇ ಕಷ್ಟಪಟ್ಟರೂ (hard work) ಅಂತಹವರಿಗೆ ಯಶಸ್ಸು ಸಿಗುವುದಿಲ್ಲ (failure).
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗುರಿ ಸಾಧನೆಗಾಗಿ ಅತ್ಯುತ್ತಮ ಪ್ರಯತ್ನಗಳನ್ನು ಹಾಕುತ್ತಾನೆ. ಯಶಸ್ಸಿನ ಸಾಧನೆಯ ಹಾದಿಯಲ್ಲಿ ಯಾವುದೇ ತೊಂದರೆ ಬಂದರೂ ಹೋರಾಡಲು ಅವನು ಯಾವಾಗಲೂ ಸಿದ್ಧ. ಚಾಣಕ್ಯನ ಪ್ರಕಾರ, ನೀವು ಮಾಡುವ ಕೆಲ ತಪ್ಪುಗಳು ನಿಮ್ಮನ್ನು ಗುರಿ ತಲುಪದಂತೆ ತಡೆಯುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸು ಸಿಗುವುದಿಲ್ಲ. ಅಂತಹ ನಾಲ್ಕು ವಿಷಯಗಳ ಬಗ್ಗೆ ಇಲ್ಲಿ ತಿಳಿಯೋಣ.
ಚಾಣಕ್ಯನ ಪ್ರಕಾರ.. ವೈಫಲ್ಯದ ಭೀತಿಯಲ್ಲಿ ನಿಮ್ಮ ಗುರಿಯತ್ತ ಸಾಗಿದರೆ ಅದು ನಿಮ್ಮ ದೊಡ್ಡ ತಪ್ಪು. ಮನದಲ್ಲಿ ಸೋಲಿನ ಭಯ ಇರುವ ವ್ಯಕ್ತಿ… ಏನನ್ನಾದರೂ ಸಾಧಿಸಲು ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಸಿಗುವುದಿಲ್ಲ. ಕಠಿಣ ಪರಿಶ್ರಮವಿಲ್ಲದೆ ಯಾವ ಗುರಿಯೂ ಸಾಧ್ಯವಿಲ್ಲ.
ಚಾಣಕ್ಯನ ಪ್ರಕಾರ ಬೇರೆಯವರನ್ನು ನೋಡಿಕೊಂಡು ನಾವು ಯಾವುದೇ ಕಾರ್ಯ ಅಥವಾ ಗುರಿಯನ್ನು ಪ್ರಾರಂಭಿಸಬಾರದು. ನೀವು ಏನು ಮಾಡಲು ಪ್ರಾರಂಭಿಸಿದರೂ, ಈ ಮೂರು ಪ್ರಶ್ನೆಗಳನ್ನು ನೀವೇ ಕೇಳಲು ಮರೆಯದಿರಿ. ನಾನು ಇದನ್ನು ಮಾಡಬಹುದೇ? ಫಲಿತಾಂಶ ಏನಾಗುತ್ತದೆ? ಯಶಸ್ಸು ಸಿಗುತ್ತದೆಯೇ? ಎಂದು ನೀವೇ ಯೋಚಿಸಿ.. ನೀವು ಈ ಪ್ರಶ್ನೆಗಳಿಂದ ತೃಪ್ತರಾಗಿದ್ದರೆ ಹೊಸ ಕೆಲಸವನ್ನು ಪ್ರಾರಂಭಿಸಿ.
ಚಾಣಕ್ಯನ ಪ್ರಕಾರ.. ಅನೇಕರು ತಮಗೆ ಇಷ್ಟವಾದುದನ್ನೇ ಮಾಡಲು ಪ್ರಾರಂಭಿಸುತ್ತಾರೆ. ಆದರೂ ಯಶಸ್ವಿಯಾಗುವುದಿಲ್ಲ. ಏಕೆಂದರೆ ಕಷ್ಟದ ಸಂದರ್ಭಗಳು ಬಂದ ತಕ್ಷಣ ಅವರು ತಮ್ಮ ಗುರಿಯನ್ನು ಅಪೂರ್ಣವಾಗಿ ಬಿಟ್ಟುಬಿಡುತ್ತಾರೆ. ತೊಂದರೆಗಳು ಮತ್ತು ಅಡೆತಡೆಗಳ ಭಯದಿಂದ ಅಂತಹವರು ತಮ್ಮ ಗುರಿಯನ್ನು ತ್ಯಜಿಸುತ್ತಾರೆ. ಚಾಣಕ್ಯನ ಪ್ರಕಾರ ಅಂತಹ ಜನರನ್ನು ಹೇಡಿಗಳು ಎಂದು ಕರೆಯಲಾಗುತ್ತದೆ. ಅಂತಹವರು ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ನೀವು ಗುರಿಯನ್ನು ಹೊಂದಿದ್ದರೆ, ಅದನ್ನು ಸಾಧಿಸುವತ್ತ ಹೆಜ್ಜೆ ಹಾಕಿ.
ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತಾನು ಕೈಗೆತ್ತಿಕೊಂಡ ಕೆಲಸವನ್ನು ಆಯಕಟ್ಟಿನಿಂದ, ಯೋಜಿತ ರೀತಿಯಲ್ಲಿ ಮಾಡದಿದ್ದರೆ ಆ ಕೆಲಸವು ವಿಫಲಗೊಳ್ಳುತ್ತದೆ. ಅಥವಾ ಯೋಜನೆಯ ಸಮಯದಲ್ಲಿ ಅವರು ಅದರ ಬಗ್ಗೆ ಇತರರಿಗೆ ಹೇಳಿಕೊಳ್ಳುತ್ತಾರೆ. ಹಾಗೆ ಮಾಡುವುದರಿಂದ ಯೋಜನೆ ಕಾರ್ಯಗತಗೊಳಿಸುವ ಸಮಯದಲ್ಲಿ ವೈಫಲ್ಯ ಕಾಣುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Mon, 10 April 23