Flute: ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಇಟ್ಟರೆ ಆ ಸಮಸ್ಯೆಗಳು ಇರುವುದಿಲ್ಲ!

| Updated By: ಸಾಧು ಶ್ರೀನಾಥ್​

Updated on: Apr 13, 2023 | 6:06 AM

Vastu Tips: ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಬಂಧದಲ್ಲಿ ಅಂತರವಿದ್ದರೆ ಅದಕ್ಕೂ ವೇಣುವಿನಿಂದ ಪರಿಹಾರವಿದೆ. ಅಂತಹ ದಂಪತಿ ತಮ್ಮ ಮಲಗುವ ಕೋಣೆಯ ಚಾವಣಿಯ ಮೇಲೆ ಕೊಳಲನ್ನು ನೇತುಹಾಕಬೇಕು.  

Flute: ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಇಟ್ಟರೆ ಆ ಸಮಸ್ಯೆಗಳು ಇರುವುದಿಲ್ಲ!
ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಇಟ್ಟರೆ ಸಮಸ್ಯೆಗಳು ಇರುವುದಿಲ್ಲ!
Follow us on

ಗ್ರಂಥಗಳಲ್ಲಿ ಕೊಳಲನ್ನು (Flute) ಶ್ರೀಕೃಷ್ಣನ ಗುರುತು ಎಂದು ವಿವರಿಸಲಾಗಿದೆ. ಕೊಳಲನ್ನು ದೇವತೆಗಳ ನೆಚ್ಚಿನ ವಾದ್ಯ ಎಂದು ವಿವರಿಸಲಾಗಿದೆ. ಹಿಂದೂ ಧರ್ಮದಲ್ಲಿ ಕೊಳಲನ್ನು ಪವಿತ್ರವೆಂದು ಪರಿಗಣಿಸಲು ಇದೇ ಕಾರಣ. ವಾಸ್ತು ಶಾಸ್ತ್ರದ ಪುಸ್ತಕಗಳಲ್ಲಿ ಕೊಳಲಿನ ಬಗ್ಗೆ ಅನೇಕ ಕ್ರಿಯೆಗಳನ್ನು ವಿವರಿಸಲಾಗಿದೆ. ಮನೆಯಲ್ಲಿರುವ ಪ್ರಮುಖ ದೋಷಗಳನ್ನು ಸಹ ಸರಿಪಡಿಸುತ್ತದೆ. ಹಿಂದೂ ಧರ್ಮದಲ್ಲಿ ಬಿದಿರಿನ ಮರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬಿದಿರಿನಿಂದ ಸುಮಧುರವಾದ ಸಂಗೀತವನ್ನು ರಚಿಸುವ ಸಾಮರ್ಥ್ಯದಿಂದಾಗಿ, ಕೊಳಲನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಕೊಳಲು ಬಳಸಿ, ನಿಮ್ಮ ಮನೆಯಿಂದ ನಕಾರಾತ್ಮಕತೆಯನ್ನು (Positive vibes) ನೀವು ಸುಲಭವಾಗಿ ತೊಲಗಿಸಬಹುದಾಗಿದೆ. ವೇಣುವಿನ ಕೆಲವು ವಾಸ್ತು ಪರಿಹಾರಗಳ (Vastu Tips) ಬಗ್ಗೆ ತಿಳಿಯೋಣ.

ಫ್ಲ್ಯೂಟ್​​ ನಿಂದ ಈ ಪರಿಹಾರಗಳನ್ನು ಕಂಡುಕೊಳ್ಳಿ: ಕೆಲಸದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಥವಾ ಸಹೋದ್ಯೋಗಿಗಳು ಕಚೇರಿಯಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಅಂತಹ ವ್ಯಕ್ತಿಯು ತನ್ನ ಮನೆ ಮತ್ತು ಕಚೇರಿಯಲ್ಲಿ ತಲಾ ಒಂದು ಕೊಳಲನ್ನು ಇಡಬೇಕು. ಹೀಗೆ ಮಾಡುವುದರಿಂದ ಅವರ ವೃತ್ತಿಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

– ಹಲವು ಬಾರಿ ಲಕ್ಷ ಪ್ರಯತ್ನ ಮಾಡಿದರೂ ವ್ಯಾಪಾರದಲ್ಲಿ ಯಶಸ್ಸು ಸಾಧಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅಂತಹ ಸಂದರ್ಭಗಳಲ್ಲಿ ಕೇವಲ ನಿರಾಶೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ಕೃಷ್ಣ ದೇವಸ್ಥಾನದಿಂದ ತಂದ ಬಿದಿರಿನ ಕೊಳಲನ್ನು ನಿಮ್ಮ ಅಂಗಡಿ/ಕಚೇರಿಯಲ್ಲಿ ಇಟ್ಟರೆ ಖಂಡಿತ ಯಶಸ್ಸು ಸಿಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕ್ಷೀಣಿಸುತ್ತಿರುವ ವ್ಯಾಪಾರ ಅದರಿಂದಲೇ ವೃದ್ಧಿಸುತ್ತದೆ.

-ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಬಂಧದಲ್ಲಿ ಅಂತರವಿದ್ದರೆ ಅದಕ್ಕೂ ವೇಣುವಿನಿಂದ ಪರಿಹಾರವಿದೆ. ಅಂತಹ ದಂಪತಿ ತಮ್ಮ ಮಲಗುವ ಕೋಣೆಯ ಚಾವಣಿಯ ಮೇಲೆ ಕೊಳಲನ್ನು ನೇತುಹಾಕಬೇಕು. ಹೀಗೆ ಕೊಳಲನ್ನು ತೂಗು ಹಾಕುವುದರಿಂದ ಅವರ ನಡುವಿನ ಸಂಬಂಧ ಮಧುರವಾಗಿ ಪ್ರೀತಿ ಹೆಚ್ಚುತ್ತದೆ.

-ಗಮನಿಸಿ, ಕೆಲವೊಮ್ಮೆ ಮನೆಯಲ್ಲಿ ಕೊಳಲು ಇಡುವುದು ಶುಭವಲ್ಲ, ಕೊಳಲು ನುಡಿಸುವುದು ಕೂಡ ಅಮಂಗಳಕರ ಎಂದೂ ಪರಿಗಣಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಸೂರ್ಯಾಸ್ತದ ಸಮಯದಲ್ಲಿ 5 ರಿಂದ 10 ನಿಮಿಷಗಳ ಕಾಲ ನೀವು ಸುಮಧುರ ಸ್ವರದಲ್ಲಿ ಕೊಳಲನ್ನು ನುಡಿಸಿದರೆ, ಮನೆಯಲ್ಲಿ ಸಮೃದ್ಧಿ ಪ್ರಾರಂಭವಾಗುತ್ತದೆ. ಆ ಮನೆಯಲ್ಲಿ ವಾಸಿಸುವ ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಹೆಚ್ಚುತ್ತದೆ ಮತ್ತು ಶಾಂತಿ ನೆಲೆಸುತ್ತದೆ.

-ಅನಗತ್ಯವಾಗಿ ಚಿಂತಿಸುವ ಅಭ್ಯಾಸ ಅನೇಕರಿಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಂತಹ ವ್ಯಕ್ತಿಯು ತನ್ನ ಜೇಬಿನಲ್ಲಿ ಬೆಳ್ಳಿಯಿಂದ ಮಾಡಿದ ಸಣ್ಣ ಕೊಳಲನ್ನು ಇಟ್ಟುಕೊಳ್ಳಬೇಕು. ಕೊಳಲನ್ನು ಮುರಿಯದ, ಬಾಗದ ಹಾಗೆ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅದು ಶುಭ ಫಲಗಳ ಬದಲು ಅಶುಭ ಫಲ ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ