Go Pooja: ಗೋಪೂಜೆ ಮಾಡುವುದರಿಂದ ನೀವು ಇವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು

| Updated By: ಆಯೇಷಾ ಬಾನು

Updated on: Jan 13, 2022 | 7:15 AM

ಗೋವುಗಳನ್ನು ನಿತ್ಯ ನೋಡುವುದರಿಂದ ದುಃಖಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಗೋವುಗಳನ್ನು ಸಾಕುವುದರಿಂದ ಮತ್ತು ಅವುಗಳನ್ನು ನಿತ್ಯ ಪೂಜಿಸುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸನಾತನ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಗೋಮಾತೆಯನ್ನು ಮನೆಯಲ್ಲಿ ಸಾಕುವುದರ ಪ್ರಯೋಜನವು ಅಪಾರವಾಗಿದೆ. ಗೋವುಗಳಿಗೆ ತಾಯಿಯ ಸ್ಥಾನಮಾನವನ್ನು ನೀಡಲು ಕೂಡ ಇದೇ ಕಾರಣವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, 33 ಕೋಟಿ ದೇವಾನುದೇವತೆಗಳು ಕೂಡ ಗೋವಿನಲ್ಲಿ ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ.

1 / 6
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2 / 6
ವಾಸ್ತು ದೋಷ ದೂರಾಗುವುದು : ಗೋವನ್ನು ಹೊಂದುವ ಪ್ರಯೋಜನಗಳನ್ನು ಮತ್ತು ಗೋವಿನ ಪೂಜೆಯ ವಿಶೇಷ ಪ್ರಾಮುಖ್ಯತೆಯನ್ನು ಶಿವಪುರಾಣ ಮತ್ತು ಸ್ಕಂದಪುರಾಣಗಳಲ್ಲಿ ಹೇಳಲಾಗಿದೆ. ಇವುಗಳ ಪ್ರಕಾರ ಗೋಸೇವೆ ಮಾಡುವುದರಿಂದ ಯಮನ ಬಗ್ಗೆ ಭಯ ಪಡಬೇಕಾಗಿಲ್ಲ ಎನ್ನುವ ನಂಬಿಕೆಯಿದೆ. ಮನೆಯನ್ನು ಕಟ್ಟುವ ಸ್ಥಳದಲ್ಲಿ ಹಸುವಿನೊಂದಿಗೆ ಕರುವನ್ನು ಕಟ್ಟುವುದರಿಂದ ಆ ಮನೆಯ ವಾಸ್ತು ದೋಷಗಳು ತಾನಾಗಿಯೇ ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ ಎಲ್ಲಾ ಕೆಲಸಗಳು ಸುಗಮವಾಗಿ ಮುಗಿದು ಆರ್ಥಿಕ ಲಾಭ ದೊರೆಯುವುದು.

3 / 6
ರೋಗ ಕಡಿಮೆಯಾಗುವುದು: ಧಾರ್ಮಿಕ ನಂಬಿಕೆಗಳ ಪ್ರಕಾರ, ಗೋವಿನ ದೇಹವನ್ನು ನಿಯಮಿತವಾಗಿ ಸ್ಪರ್ಶಿಸುವುದರಿಂದ ಮತ್ತು ಸೇವೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ಈ ರೀತಿ ಮಾಡುವುದರಿಂದ ಚಿಕನ್ ಪಾಕ್ಸ್ ಅಂದರೆ ಸಿಡುಬು ಬರುವ ಭಯವೂ ಕಡಿಮೆಯಾಗುತ್ತದೆ.

4 / 6
ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ: ಹಸು ಕುಳಿತುಕೊಳ್ಳುವ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಯು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಆ ಸ್ಥಳದಿಂದ ವಾಸ್ತು ದೋಷವನ್ನು ಸಹ ತೆಗೆದುಹಾಕಲಾಗುತ್ತದೆ.

5 / 6
ಲಕ್ಷ್ಮಿಯ ವಾಸಸ್ಥಾನ: ಧಾರ್ಮಿಕ ನಂಬಿಕೆಗಳ ಪ್ರಕಾರ, ಹಸುಗಳು ಬಾಲ ಅಲ್ಲಾಡಿಸುವ ಸ್ಥಳದಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎನ್ನುವ ನಂಬಿಕೆಯಿದೆ. ಅಂತಹ ಸ್ಥಳದಲ್ಲಿ ಸಂಪತ್ತು ಮತ್ತು ಸಮೃದ್ಧಿಯೂ ಉಳಿಯುತ್ತದೆ.

6 / 6
ದುಪ್ಪಟ್ಟು ಪ್ರಯೋಜನ ದೊರೆಯುವುದು: ಗೋವು ವಾಸಿಸುವ ಸ್ಥಳದಲ್ಲಿ ಮಂತ್ರ, ಸಾಧನ, ತಪಸ್ಸು ಮತ್ತು ಧ್ಯಾನವನ್ನು ಮಾಡುವುದರಿಂದ ಅನೇಕ ಪಟ್ಟು ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ ಎಂದು ನಂಬಲಾಗಿದೆ.