Makara Sankranti 2022: ಮಕರ ಸಂಕ್ರಾಂತಿ ಬಗ್ಗೆ ಈ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು

ಸೂರ್ಯ ದೇವನ ಈ ಹಬ್ಬದಂದು ಸೂರ್ಯ ತನ್ನ ಪಥವನ್ನು ಬದಲಿಸಿ ಪ್ರಯಾಣ ಆರಂಭಿಸುತ್ತಾನೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುತ್ತಾನೆ.

Makara Sankranti 2022: ಮಕರ ಸಂಕ್ರಾಂತಿ ಬಗ್ಗೆ ಈ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 14, 2022 | 9:53 AM

ಮನುಷ್ಯ ಬದುಕಿಗೆ ಹೊಸ ರೀತಿಯ ಹುರುಪನ್ನು ನೀಡುವುದೇ ಹಬ್ಬಗಳು. ಪ್ರತೀ ಮಾಸಗಳಲ್ಲೂ ಒಂದೊಂದು ವಿಶೇಷತೆಯನ್ನು ಹೊತ್ತು ದೈನಂದಿನ ಬದುಕಿಗೊಂದಿಷ್ಟು ಸಂತಸವನ್ನು ನೀಡುವ ಹಬ್ಬಗಳು ಭಾರತೀಯರಿಗೆ ಒಂದು ವಿಶೇಷ ದಿನ.  ಕೇವಲ ಸಂಪ್ರದಾಯಗಳಿಗೆ ಸೀಮಿತವಾಗದೆ ಎಲ್ಲ ಧರ್ಮಗಳಲ್ಲೂ ವಿಭಿನ್ನವಾದ ಹಬ್ಬಗಳನ್ನು ಆಚರಿಸುತ್ತಾರೆ. ಒಂದೇ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಅದರಲ್ಲಿ ಸಂಕ್ರಾಂತಿ ಕೂಡ ಒಂದು.  ಸೂರ್ಯ ದೇವನ ಈ ಹಬ್ಬದಂದು ಸೂರ್ಯ ತನ್ನ ಪಥವನ್ನು ಬದಲಿಸಿ ಪ್ರಯಾಣ ಆರಂಭಿಸುತ್ತಾನೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುತ್ತಾನೆ. ಇದು ಆರು ತಿಂಗಳ ಅವಧಿ. ಈ ದಿನ ಸೂರ್ಯ ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಹೋಗುತ್ತಾನೆ ಎನ್ನುವುದು  ನಂಬಿಕೆ. ಹೀಗಾಗಿ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. 

ಪ್ರತೀ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಸುಗ್ಗಿಯ ಕಾಲದಲ್ಲಿ ಆಚರಿಸುವ ಈ ಹಬ್ಬ ಭಾರತೀಯ ಕಾಲಮಾನಮಾನ ಪುಷ್ಯ ಮಾಸದಲ್ಲಿ ಬರುತ್ತದೆ. ಇದನ್ನು ಉತ್ತರಾಯಣದ ಪುಣ್ಯ ಕಾಲವೆಂದೂ ಕರೆಯುತ್ತಾರೆ.  ಈ ದಿನ ಎಳ್ಳು ಬೆಲ್ಲದ ಸಿಹಿ ತಯಾರಿಸಿ ಸವಿಯುತ್ತಾರೆ, ಗಂಗಾ, ಬ್ರಹ್ಮಪುತ್ರ ನದಿಗಳಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆಯುತ್ತಾರೆ. ಇನ್ನೂ ಹಲವೆಡೆ ಗಾಳಿಪಟವನ್ನು ಹಾರಿಸಿ ವಿಶೇಷವಾಗಿ ಆಚರಿಸುತ್ತಾರೆ. ಈ ದಿನದಂದು ಸೂರ್ಯ ದಕ್ಷಿಣದಿಂದ ಉತ್ತರದ ಕಡೆಗೆ ಪಥ ಬದಲಾಯಿಸಿ ಚಲಿಸುತ್ತಾನೆ. ಇದರಿಂದ ಭಾರತದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಹಗಲು ಹೆಚ್ಚುತ್ತದೆ ಎನ್ನುವ ಪ್ರತೀತಿಯಿದೆ.  ಎಳ್ಳು ಸೂರ್ಯನಿಗೆ ಶ್ರೇಷ್ಠ ಎನ್ನುತ್ತಾರೆ. ಹೀಗಾಗಿ ಶಾಸ್ತ್ರದಲ್ಲಿ ಈ ದಿನ ಸೂರ್ಯನ ದಿನವಾದ್ದರಿಂದ ಎಳ್ಳನ್ನು ದಾನ ಮಾಡಿದರೆ ಸೂರ್ಯ ದೇವ ಆಜನ್ಮಪರ್ಯಂತ ಅನುಗ್ರಹಿಸುತ್ತಾನೆ ಎನ್ನುವ ನಂಬಿಕೆಯಿದೆ. ಸಂಕ್ರಾಂತಿಯನ್ನು ದೇಶದ ಹಲವೆಡೆ ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. ಈಶಾನ್ಯ ಬಾರತದಲ್ಲಿ ಸಂಕ್ರಾಂತಿಯನ್ನು ಮಾಘ್ ಬಿಹು ಎಂದು ಆಚರಿಸಿದರೆ, ದಕ್ಷಿಣ ಭಾರತದ ಹಲವೆಡೆ ಪೊಂಗಲ್​ ಎಂದು ಕರೆಯುತ್ತಾರೆ. ಇನ್ನು ಉತ್ತರ ಭಾರತದ ಹಲವೆಡೆ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ.

ಸೂರ್ಯ ಸಂಸ್ಕೃತಿಯಲ್ಲಿ, ಮಕರ ಸಂಕ್ರಾಂತಿಯ ಹಬ್ಬವನ್ನು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಆದಿಶಕ್ತಿ ಮತ್ತು ಸೂರ್ಯನ ಪೂಜೆ ಮತ್ತು ಆರಾಧನೆಯ ಪವಿತ್ರ ದಿನವೆಂದು ಕರೆಯುತ್ತಾರೆ. ಈ ದಿನ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ ಪೂಜಿಸಿದರೆ ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿ ದೊರೆಯುತ್ತದೆ ಎನ್ನುವ ನಂಬಿಕೆ ಪ್ರತೀತಿಯಲ್ಲಿದೆ.

ಆಚರಣೆ ಹೇಗೆ? ಭಾರತದಲ್ಲಿ ವಿವಿದೆಡೆ ವಿವಿಧ ರೀತಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಎಳ್ಳು, ಬೆಲ್ಲ ಸೇರಿಸಿ ಸಿಹಿ ಮಾಡಿ ಹಂಚುತ್ತಾರೆ.  ಆಂಧ್ರಪ್ರದೇಶದಲ್ಲಿ ಈ ದಿನ ಶ್ರೀರಾಮನ ಪೂಜೆ ಮಾಡುತ್ತಾರೆ. ಇನ್ನು ತಮಿಲುನಾಡಿನಲ್ಲಿ ಅಕ್ಕಿ, ತುಪ್ಪ ಬೆಲ್ಲವನ್ನು ಸೇರಿಸಿ ಪೊಂಗಲ್​ ತಯಾರಿಸಿ  ಸವಿದು ಆಚರಿಸುತ್ತಾರೆ.  ಇನ್ನು ಹಲವೆಡೆ ಜಾನುವರಗಳಿಗೆ ವಿಶೇಷವಾಗಿ ಅಲಂಕರಿಸಿ ಮೆರವಣಿಗೆ ಮಾಡಿ, ಕಿಚ್ಚು ಹಾಯಿಸಿ ಅದ್ದೂರಿಯಾಗಿ ಆಚರಿಸುತ್ತಾರೆ.  ಎಳ್ಳಿನ ಹಬ್ಬವೆಂದೇ ಆಚರಿಸುವ ಹಲವು ಪ್ರದೇಶಗಳಲ್ಲಿ ಸೂರ್ಯನನ್ನು ಆರಾಧಿಸಲು ವಿವಿಧ ರೀತಿಯ ಎಳ್ಳಿನ ಸಿಹಿಯನ್ನು ತಯಾರಿಸುತ್ತಾರೆ. ನಮ್ಮ ರಾಜ್ಯದಲ್ಲಿಯೂ ಎಳ್ಳು ಬೆಲ್ಲವನ್ನು ತಯಾರಿಸಿ ಹಂಚುತ್ತಾರೆ.  ಈ ದಿನ  ದೆವತೆಗಳಿಗೆ ಹಗಲು ಹಾಗೂ ರಾಕ್ಷಸಿರಿಗೆ ರಾತ್ರಿಯಾಗಿರುತ್ತದೆ ಧ್ದರಿಂದ ಎಳ್ಳು ಬೆಲ್ಲವನ್ನು ತಿಂದು ಹಿತ ನುಡಿಯನ್ನು ಆಡಬೇಕು ಎನ್ನುವುದು ಹಿರಿಯರ ಸಲಹೆಯಾಗಿದೆ.

Published On - 7:00 am, Fri, 14 January 22