AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿತೃ ಪಕ್ಷ: ಬದರಿನಾಥದ ‘ಬ್ರಹ್ಮಕಪಾಲ’ದಲ್ಲೇಕೆ ನೀಡಬೇಕು ಅಂತಿಮ ಪಿಂಡದಾನ? ಇಲ್ಲಿದೆ ಪೌರಾಣಿಕ ಹಿನ್ನೆಲೆ!

ಬದರಿನಾಥದ ಬ್ರಹ್ಮಕಪಾಲವು ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಕ್ಕೆ ಮೋಕ್ಷ ಕರುಣಿಸುವ ಅತ್ಯಂತ ಪವಿತ್ರ ಶ್ರಾದ್ಧ ಕ್ಷೇತ್ರ. ಇಲ್ಲಿ ಮಾಡುವ ಪಿಂಡದಾನವು 'ಅಂತಿಮ ಪಿಂಡದಾನ' ಎನಿಸಿ, ಮತ್ತೆಲ್ಲಿಯೂ ಶ್ರಾದ್ಧ ಮಾಡುವ ಅಗತ್ಯವಿರುವುದಿಲ್ಲ. ಶಿವ ಮತ್ತು ಬ್ರಹ್ಮ ಸಂಬಂಧಿತ ಪೌರಾಣಿಕ ಹಿನ್ನೆಲೆ ಹೊಂದಿರುವ ಬ್ರಹ್ಮಕಪಾಲದಲ್ಲಿ ಮಹಾಭಾರತದ ಪಾಂಡವರು ಕೂಡ ಪಿಂಡದಾನ ಮಾಡಿದ್ದರು. ಪೂರ್ವಜರ ಋಣ ತೀರಿಸಿ ಮೋಕ್ಷ ಪಡೆಯಲು ಇದು ಶ್ರೇಷ್ಠ ಸ್ಥಳ.

ಪಿತೃ ಪಕ್ಷ: ಬದರಿನಾಥದ 'ಬ್ರಹ್ಮಕಪಾಲ'ದಲ್ಲೇಕೆ ನೀಡಬೇಕು ಅಂತಿಮ ಪಿಂಡದಾನ? ಇಲ್ಲಿದೆ ಪೌರಾಣಿಕ ಹಿನ್ನೆಲೆ!
ಪಿತೃ ಪಕ್ಷ Image Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 02, 2026 | 11:03 AM

Share

ಹಿಂದೂ ಧರ್ಮ ಸಂಪ್ರದಾಯದಲ್ಲಿ ಪಿತೃ ಪಕ್ಷಕ್ಕೆ ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ನಮ್ಮನ್ನಗಲಿದ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ, ಅವರ ಆಶೀರ್ವಾದ ಪಡೆಯಲು ತರ್ಪಣ, ಶ್ರಾದ್ಧ ಮತ್ತು ಪಿಂಡದಾನ ನೆರವೇರಿಸುವುದು ಭಾರತೀಯ ಸಂಸ್ಕೃತಿಯ ಅನಾದಿ ಕಾಲದ ಪದ್ಧತಿ. ಪ್ರತಿ ವರ್ಷ ಭಾದ್ರಪದ ಮಾಸದ ಪೂರ್ಣಿಮೆ ಅಥವಾ ಅಶ್ವಯುಜ ಮಾಸದ ಕೃಷ್ಣ ಪಕ್ಷದ ಪ್ರತಿಪದೆಯಿಂದ ಪ್ರಾರಂಭವಾಗುವ ಈ ಶ್ರಾದ್ಧ ಆಚರಣೆಗಳು ಸರ್ವ ಪಿತೃ ಅಮಾವಾಸ್ಯೆಯಂದು ಮುಕ್ತಾಯಗೊಳ್ಳುತ್ತವೆ. ಭಾರತದಾದ್ಯಂತ ಶ್ರಾದ್ಧ ಕರ್ಮಗಳನ್ನು ಮಾಡಲು ಗಯಾ, ಕಾಶಿ, ಗೋಕರ್ಣ ಮುಂತಾದ ಹಲವು ಪುಣ್ಯಕ್ಷೇತ್ರಗಳಿದ್ದರೂ, ಉತ್ತರಾಖಂಡದ ಬದರಿನಾಥ ಧಾಮದಲ್ಲಿರುವ ಬ್ರಹ್ಮಕಪಾಲ ಅತ್ಯಂತ ಶ್ರೇಷ್ಠ ಹಾಗೂ ವಿಶಿಷ್ಟವಾದ ಕ್ಷೇತ್ರವಾಗಿದೆ.

ಅಂತಿಮ ಪಿಂಡದಾನದ ಪವಿತ್ರ ಕ್ಷೇತ್ರ ಬ್ರಹ್ಮಕಪಾಲ:

ಬದರಿನಾಥ ದೇವಾಲಯದ ಸಮೀಪ ಹರಿಯುವ ಪವಿತ್ರ ಅಲಕನಂದಾ ನದಿಯ ದಡದಲ್ಲಿದೆ ಈ ಬ್ರಹ್ಮಕಪಾಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬ್ರಹ್ಮಕಪಾಲದಲ್ಲಿ ಒಮ್ಮೆ ಪಿಂಡದಾನ ನೆರವೇರಿಸಿದರೆ ಅದು ‘ಅಂತಿಮ ಪಿಂಡದಾನ’ ಎನಿಸಿಕೊಳ್ಳುತ್ತದೆ. ಅಂದರೆ, ಇಲ್ಲಿ ಪಿಂಡದಾನ ಮಾಡಿದ ನಂತರ ಆ ಪೂರ್ವಜರಿಗಾಗಿ ಮತ್ತೆ ಎಲ್ಲೂ, ಎಂದಿಗೂ ಶ್ರಾದ್ಧ ಅಥವಾ ಪಿಂಡದಾನ ಮಾಡುವ ಅಗತ್ಯವಿರುವುದಿಲ್ಲ. ಇಲ್ಲಿ ನೆರವೇರಿಸುವ ಆಚರಣೆಗಳಿಂದ ಅಗಲಿದ ಪಿತೃಗಳ ಆತ್ಮಕ್ಕೆ ನೇರವಾಗಿ ಮೋಕ್ಷ ಸಿಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.

ಬ್ರಹ್ಮಕಪಾಲಕ್ಕೆ ಶಿವ ಮತ್ತು ಬ್ರಹ್ಮದೇವರ ಪೌರಾಣಿಕ ಹಿನ್ನೆಲೆ:

ಬ್ರಹ್ಮಕಪಾಲ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂತು ಎಂಬುದರ ಹಿಂದೆ ಒಂದು ಕುತೂಹಲಕಾರಿ ಪೌರಾಣಿಕ ಕಥೆಯಿದೆ. ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವನಿಗೆ ಐದು ಮುಖಗಳಿದ್ದವು. ಕಾಲಕ್ರಮೇಣ ಬ್ರಹ್ಮನಲ್ಲಿ ದುರಹಂಕಾರ ಹೆಚ್ಚಾಗಿ, ತನ್ನನ್ನು ತಾನೇ ಸರ್ವಶ್ರೇಷ್ಠನೆಂದು ಭಾವಿಸತೊಡಗಿದನು. ಬ್ರಹ್ಮನ ಈ ಅಹಂಕಾರವನ್ನು ನಿಗ್ರಹಿಸಲು ಪರಮಶಿವನು ಆತನ ಐದನೇ ತಲೆಯನ್ನು ಕತ್ತರಿಸಿದನು.

ಬ್ರಾಹ್ಮಣನಾದ ಬ್ರಹ್ಮನ ಶಿರಚ್ಛೇದನ ಮಾಡಿದ್ದರಿಂದ ಶಿವನಿಗೆ ‘ಬ್ರಹ್ಮಹತ್ಯಾ ದೋಷ’ ಆವರಿಸಿತು. ಬ್ರಹ್ಮನ ಕತ್ತರಿಸಿದ ತಲೆಬುರುಡೆ (ಕಪಾಲ) ಶಿವನ ಕೈಗೆ ಅಂಟಿಕೊಂಡಿತು ಮತ್ತು ಶಿವನು ಎಷ್ಟೇ ಪ್ರಯತ್ನಿಸಿದರೂ ಅದು ಕೈಯಿಂದ ಕಳಚಲಿಲ್ಲ. ಈ ಮಹಾಪಾಪದಿಂದ ಮುಕ್ತಿ ಪಡೆಯಲು ಶಿವನು ಕಪಾಲವನ್ನು ಕೈಯಲ್ಲಿ ಹಿಡಿದು ಭಿಕ್ಷುಕನಂತೆ ತ್ರಿಲೋಕಗಳನ್ನು ಅಲೆದಾಡಿದನು. ಅಂತಿಮವಾಗಿ ಶಿವನು ಬದರಿ ಪ್ರದೇಶಕ್ಕೆ ತಲುಪಿದಾಗ, ಬ್ರಹ್ಮನ ಕಪಾಲವು ಶಿವನ ಕೈಯಿಂದ ಜಾರಿ ನೆಲಕ್ಕೆ ಬಿದ್ದಿತು. ಬ್ರಹ್ಮನ ಕಪಾಲ ಬಿದ್ದ ಈ ಜಾಗವೇ ಕಾಲಕ್ರಮೇಣ ‘ಬ್ರಹ್ಮಕಪಾಲ’ ಎಂದು ಪ್ರಸಿದ್ಧಿಯಾಯಿತು.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?

ಮಹಾಭಾರತ ಮತ್ತು ಪಾಂಡವರ ದೋಷ ನಿವಾರಣೆ:

ಬ್ರಹ್ಮಕಪಾಲ ಕ್ಷೇತ್ರಕ್ಕೆ ಮಹಾಭಾರತದ ಕಾಲದ ಸುದೀರ್ಘ ಇತಿಹಾಸವೂ ಜೋಡಿಸಲ್ಪಟ್ಟಿದೆ. ಕುರುಕ್ಷೇತ್ರ ಯುದ್ಧ ಮುಗಿದ ನಂತರ, ತಮ್ಮ ಸ್ವಂತ ಬಂಧು-ಮಿತ್ರರು, ಸೋದರರು ಮತ್ತು ಗುರುಗಳನ್ನು ಕೊಂದ ಅಪರಾಧ ಭಾವನೆ ಪಾಂಡವರನ್ನು ತೀವ್ರವಾಗಿ ಕಾಡತೊಡಗಿತು. ಯುದ್ಧದಲ್ಲಿ ಮಡಿದ ತಮ್ಮ ಪೂರ್ವಜರ ಮತ್ತು ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ತಮ್ಮ ಪಾಪ ಪ್ರಾಯಶ್ಚಿತ್ತಕ್ಕಾಗಿ ಪಾಂಡವರು ಬದರಿನಾಥದ ಬ್ರಹ್ಮಕಪಾಲಕ್ಕೆ ಆಗಮಿಸಿ ತರ್ಪಣ ಮತ್ತು ಪಿಂಡದಾನ ನೆರವೇರಿಸಿದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಜನನ-ಮರಣಗಳ ಚಕ್ರದಿಂದ ಮುಕ್ತಿ ಮತ್ತು ಮೋಕ್ಷ ಪ್ರಾಪ್ತಿ:

ಬ್ರಹ್ಮಕಪಾಲದಲ್ಲಿ ಅರ್ಪಿಸುವ ಪಿಂಡವು ಪಿತೃಗಳನ್ನು ಜನನ ಮತ್ತು ಮರಣಗಳ ನಿರಂತರ ಚಕ್ರದಿಂದ ಮುಕ್ತಗೊಳಿಸಿ ಸಂಪೂರ್ಣ ಮೋಕ್ಷವನ್ನು ನೀಡುತ್ತದೆ. ಹೀಗಾಗಿ, ಪಿತೃ ಪಕ್ಷದ ಸಂದರ್ಭದಲ್ಲಿ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ ಮತ್ತು ಅವರ ಋಣ ತೀರಿಸಲು ಬ್ರಹ್ಮಕಪಾಲಕ್ಕೆ ಆಗಮಿಸುತ್ತಾರೆ. ನೀವೂ ನಿಮ್ಮ ಪೂರ್ವಜರ ಆತ್ಮಕ್ಕೆ ಶ್ರೇಷ್ಠವಾದ ಮೋಕ್ಷ ಪ್ರಾಪ್ತಿಯನ್ನು ಬಯಸುವುದಾದರೆ, ಬದರಿನಾಥದ ಈ ಪುಣ್ಯಭೂಮಿ ಬ್ರಹ್ಮಕಪಾಲಕ್ಕೆ ಭೇಟಿ ನೀಡಿ ಪಿಂಡದಾನ ಮಾಡುವುದು ಅತ್ಯಂತ ಫಲಪ್ರದವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ