Buddha Purnima 2024: ಬುದ್ಧ ಪೂರ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ

ವೈಶಾಖ ಮಾಸದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ, ಈ ಹುಣ್ಣಿಮೆಯ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಸದಾಕಾಲ ಇರುತ್ತದೆ. ಹಾಗಾದರೆ ಈ ದಿನ ಯಾವ ವಸ್ತುಗಳನ್ನು ದಾನ ಮಾಡಬೇಕು? ಇದರಿಂದ ಸಿಗುವ ಫಲಾಫಲಗಳೇನು ತಿಳಿದುಕೊಳ್ಳಿ.

Buddha Purnima 2024: ಬುದ್ಧ ಪೂರ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ
Buddha Purnima 2024
Edited By:

Updated on: May 22, 2024 | 6:18 PM

ಈ ವರ್ಷ ಬುದ್ಧ ಪೂರ್ಣಿಮೆಯನ್ನು ಮೇ 23 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಗೌತಮ ಬುದ್ಧನು ವಿಷ್ಣುವಿನ ಅವತಾರ ಎತ್ತಿ ಭೂಮಿಗೆ ಬಂದನು ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನವನ್ನು ಗೌತಮ ಬುದ್ಧನ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ದಿನ ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ದಿನ ಜೊತೆಗೆ ಮಹಾನಿರ್ವಾಣದ ಪವಿತ್ರ ದಿನವಾಗಿದೆ. ಅದರಲ್ಲಿಯೂ ವೈಶಾಖ ಮಾಸದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ, ಈ ಹುಣ್ಣಿಮೆಯ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಸದಾಕಾಲ ಇರುತ್ತದೆ. ಹಾಗಾದರೆ ಈ ದಿನ ಯಾವ ವಸ್ತುಗಳನ್ನು ದಾನ ಮಾಡಬೇಕು? ಇದರಿಂದ ಸಿಗುವ ಫಲಾಫಲಗಳೇನು ತಿಳಿದುಕೊಳ್ಳಿ.

ಬುದ್ಧ ಪೂರ್ಣಿಮೆಯಂದು ಈ ರೀತಿ ದಾನ ಮಾಡಿ:

  • ಈ ಹುಣ್ಣಿಮೆಯ ದಿನ ಸನ್ಯಾಸಿ ಮತ್ತು ಸಾಧುಗಳಿಗೆ ಭಿಕ್ಷೆ ನೀಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನೀವು ಅವರಿಗೆ ಆಹಾರ ಅಥವಾ ಇತರ ಅಗತ್ಯ ವಸ್ತುಗಳನ್ನು ದಾನ ಮಾಡಬಹುದು.
  • ಬಡ ಮಕ್ಕಳಿಗೆ ಪುಸ್ತಕ, ಪೆನ್ನು ಮುಂತಾದ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ದಾನ ಮಾಡುವುದು ಒಳ್ಳೆಯದು. ಅಥವಾ ಒಂದು ಮಗುವಿಗೆ ವಿದ್ಯಾ ದಾನ ಮಾಡಬಹುದು.
  • ಬಡವರು ಮತ್ತು ಹಸಿದವರಿಗೆ ಧಾನ್ಯಗಳು, ಬೇಳೆಕಾಳುಗಳು, ಅಕ್ಕಿ, ಹಿಟ್ಟು, ಎಣ್ಣೆ, ಮಸಾಲೆಗಳು ಇತ್ಯಾದಿ ಸಾಮಗ್ರಿಗಳನ್ನು ದಾನ ಮಾಡುವುದು ಅತ್ಯುತ್ತಮ ದಾನವೆಂದು ಪರಿಗಣಿಸಲಾಗುತ್ತದೆ.
  • ಆಸ್ಪತ್ರೆಗಳಿಗೆ ಅಥವಾ ಅಗತ್ಯವಿರುವವರಿಗೆ ಔಷಧಿಗಳು, ವೈದ್ಯಕೀಯ ಉಪಕರಣಗಳು ಅಥವಾ ಇತರ ವೈದ್ಯಕೀಯ ಸಾಮಗ್ರಿಗಳನ್ನು ದಾನ ಮಾಡುವುದು ಉತ್ತಮ ದಾನವಾಗಿದೆ.
  • ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಗಿಡಗಳನ್ನು ನೆಡಬಹುದು ಅಥವಾ ಅಂತಹ ಅಭಿಯಾನದಲ್ಲಿ ಭಾಗವಹಿಸಬಹುದು.
  • ಬೇಸಿಗೆಯಲ್ಲಿ ಬಾಯಾರಿದ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೀರನ್ನು ದಾನ ಮಾಡುವುದು ಒಳ್ಳೆಯದು. ಸಾರ್ವಜನಿಕ ಸ್ಥಳಗಳಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಇಡಬಹುದು.
  • ನೀವು ದೇವಾಲಯಗಳು, ಗೋಶಾಲೆಗಳು ಅಥವಾ ಇತರ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡಬಹುದು. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ.

ಇದನ್ನೂ ಓದಿ: ನರಸಿಂಹ ಜಯಂತಿ ಆಚರಣೆ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ

ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ:

ಬುದ್ಧ ಪೂರ್ಣಿಮೆಯಂದು ಮಾಡುವ ದಾನವು ನಿಮಗೆ ತೃಪ್ತಿ ನೀಡುವುದಲ್ಲದೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದೆಲ್ಲದರ ಜೊತೆಗೆ ನಿಮ್ಮ ನಂಬಿಕೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಯಾವುದೇ ವಸ್ತುವನ್ನು ದಾನ ಮಾಡಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us