Buddha Purnima 2024: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬುದ್ಧ ಪೂರ್ಣಿಮೆಯಂದು ಹೀಗೆ ಮಾಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ ಬುದ್ಧ ಪೂರ್ಣಿಮೆಯಂದು ಮೂರು ಪ್ರಮುಖ ಘಟನೆಗಳು ನಡೆದಿವೆ ಎಂದು ನಂಬಲಾಗಿದೆ, ಈ ಕಾರಣದಿಂದಾಗಿ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮೊದಲನೆಯದಾಗಿ ಬುದ್ಧ ದೇವನ ಜನನ, ಎರಡನೆಯದಾಗಿ ಬುದ್ಧ ದೇವನಿಗೆ ಜ್ಞಾನೋದಯವಾದ ದಿನ ಮತ್ತು ಮೂರನೆಯದಾಗಿ ಮೋಕ್ಷ, ಇವೆಲ್ಲವೂ ಒಂದೇ ದಿನದಂದು ಆಚರಣೆ ಮಾಡಲಾಗುತ್ತದೆ. ಹಾಗಾಗಿ ಈ ದಿನ ಭಗವಾನ್ ಬುದ್ಧನನ್ನು ಪೂಜಿಸುವುದರ ಜೊತೆಗೆ ಉಪವಾಸ ಮಾಡಿ ಆತನ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಬುದ್ಧ ಪೂರ್ಣಿಮೆಯು ಬಹಳ ವಿಶೇಷವಾದ ದಿನವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಬುದ್ಧ ಪೂರ್ಣಿಮೆಯಂದು ಮೂರು ಪ್ರಮುಖ ಘಟನೆಗಳು ನಡೆದಿವೆ ಎಂದು ನಂಬಲಾಗಿದೆ, ಈ ಕಾರಣದಿಂದಾಗಿ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಮೊದಲನೆಯದಾಗಿ ಬುದ್ಧ ದೇವನ ಜನನ, ಎರಡನೆಯದಾಗಿ ಬುದ್ಧ ದೇವನಿಗೆ ಜ್ಞಾನೋದಯವಾದ ದಿನ ಮತ್ತು ಮೂರನೆಯದಾಗಿ ಮೋಕ್ಷ, ಇವೆಲ್ಲವೂ ಒಂದೇ ದಿನದಂದು ಆಚರಣೆ ಮಾಡಲಾಗುತ್ತದೆ. ಹಾಗಾಗಿ ಈ ದಿನ ಭಗವಾನ್ ಬುದ್ಧನನ್ನು ಪೂಜಿಸುವುದರ ಜೊತೆಗೆ ಉಪವಾಸ ಮಾಡಿ ಆತನ ಆಶೀರ್ವಾದ ಪಡೆದುಕೊಳ್ಳುತ್ತಾರೆ.
2024ರಲ್ಲಿ ಬುದ್ಧ ಪೂರ್ಣಿಮೆ ಯಾವಾಗ?
ಈ ಬಾರಿ ಹುಣ್ಣಿಮೆಯು ಮೇ 22 ರಂದು ಸಂಜೆ 6.47 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಮೇ 23 ರ ಗುರುವಾರ ಸಂಜೆ 7.22 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಈ ವರ್ಷ ಬುದ್ಧ ಪೂರ್ಣಿಮೆಯನ್ನು ಮೇ 23 ರಂದು ಆಚರಿಸಲಾಗುತ್ತದೆ.
ಬುದ್ಧ ಪೂರ್ಣಿಮೆಯಂದು ತೆಗೆದುಕೊಳ್ಳಬೇಕಾದ ಕೆಲವು ವಿಶೇಷ ಕ್ರಮಗಳು ಯಾವುದು ಗೊತ್ತಾ?
ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳು; ಬುದ್ಧ ಪೂರ್ಣಿಮೆಯನ್ನು ವೈಶಾಖ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ, ಆದ್ದರಿಂದ ಈ ದಿನದಂದು ತಾಯಿ ಲಕ್ಷ್ಮೀ ದೇವಿಯನ್ನು ಪೂಜೆ ಮಾಡಿ. ಸೂರ್ಯೋದಯದ ಸಮಯದಲ್ಲಿ ಅರಳಿ ಮರಕ್ಕೆ ನೀರನ್ನು ಅರ್ಪಿಸಿ, ನಂತರ ಅರಳಿ ಮರವನ್ನು 7 ಬಾರಿ ಪ್ರದಕ್ಷಿಣೆ ಹಾಕಿ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಶುಭ ಫಲಿತಾಂಶಗಳನ್ನು ಪಡೆಯಲು ಪರಿಹಾರಗಳು; ಬುದ್ಧ ಪೂರ್ಣಿಮೆಯ ದಿನ, ಕೆಲವು ವಿಶೇಷ ಕ್ರಮಗಳನ್ನು ಅನುಸರಿಸಲಾಗುತ್ತದೆ, ಅದರಲ್ಲಿ ಅಕ್ಕಿಯ ಪಾಯಸ ತಯಾರಿಸಿ ದೇವರಿಗೆ ನೈವೇದ್ಯ ಮಾಡುವ ಕ್ರಮವೂ ಇದೆ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ:
ಬುದ್ಧ ಪೂರ್ಣಿಮೆಯಂದು ಈ ಕೆಲಸಗಳನ್ನು ಮಾಡಬೇಕು:
-ಈ ದಿನದಂದು ಮನೆಯಲ್ಲಿ ಸತ್ಯನಾರಾಯಣನ ಕಥೆಯನ್ನು ಪಠಿಸುವುದು ತುಂಬಾ ಒಳ್ಳೆಯದು.
-ಬುದ್ಧ ಪೂರ್ಣಿಮೆಯ ದಿನ ನೀರು ಮತ್ತು ಸಿಹಿತಿಂಡಿಗಳು ಅಥವಾ ವಿವಿಧ ರೀತಿಯ ಭಕ್ಷ್ಯಗಳನ್ನು ದಾನ ಮಾಡುವುದು ಉತ್ತಮ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ