AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaishakh Purnima 2024: ವೈಶಾಖ ಪೂರ್ಣಿಮೆಯಂದು ಅರಳಿ ಮರವನ್ನು ಏಕೆ ಪೂಜಿಸಬೇಕು?

ಈ ಹುಣ್ಣಿಮೆಯಂದು ದಾನ ಮಾಡುವುದು ಮಾತ್ರವಲ್ಲ ಅರಳಿ ಮರವನ್ನು ಪೂಜಿಸುವುದಕ್ಕೂ ಕೂಡ ವಿಶೇಷ ಮಹತ್ವವನ್ನು ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಈ ದಿನ ಅರಳಿ ಮರವನ್ನು ಪೂಜಿಸುವ ಮೂಲಕ, ಜನರು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೆ ಗುರು ಗ್ರಹಕ್ಕೆ ಸಂಬಂಧ ಪಟ್ಟ ದೋಷಗಳಿದ್ದರೆ ಈ ದಿನ ಗಿಡಗಳನ್ನು ನೆಡುವ ಮೂಲಕ ಅದನ್ನು ಬಗೆಹರಿಸಿಕೊಳ್ಳಬಹುದು. ವರ್ಷದ ಎಲ್ಲಾ ಹನ್ನೆರಡು ಹುಣ್ಣಿಮೆಗಳು ವಿಶೇಷ ಮಹತ್ವವನ್ನು ಹೊಂದಿದೆ.

Vaishakh Purnima 2024: ವೈಶಾಖ ಪೂರ್ಣಿಮೆಯಂದು ಅರಳಿ ಮರವನ್ನು ಏಕೆ ಪೂಜಿಸಬೇಕು?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:May 20, 2024 | 6:09 PM

ವೈಶಾಖ ಮಾಸದ ಹುಣ್ಣಿಮೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಹುಣ್ಣಿಮೆಯನ್ನು ಅರಳಿ ಹುಣ್ಣಿಮೆ ಮತ್ತು ಬುದ್ಧ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಈ ವರ್ಷ ವೈಶಾಖ ಹುಣ್ಣಿಮೆಯನ್ನು ಮೇ 23 ರ ಗುರುವಾರದಂದು ಆಚರಣೆ ಮಾಡಲಾಗುತ್ತದೆ. ಈ ಪೂರ್ಣಿಮೆಯಂದು ದಾನ ಮಾಡುವುದು ಮಾತ್ರವಲ್ಲ ಅರಳಿ ಮರವನ್ನು ಪೂಜಿಸುವುದಕ್ಕೂ ಕೂಡ ವಿಶೇಷ ಮಹತ್ವವನ್ನು ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಈ ದಿನ ಅರಳಿ ಮರವನ್ನು ಪೂಜಿಸುವ ಮೂಲಕ, ಜನರು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೆ ಗುರು ಗ್ರಹಕ್ಕೆ ಸಂಬಂಧ ಪಟ್ಟ ದೋಷಗಳಿದ್ದರೆ ಈ ದಿನ ಗಿಡಗಳನ್ನು ನೆಡುವ ಮೂಲಕ ಅದನ್ನು ಬಗೆಹರಿಸಿಕೊಳ್ಳಬಹುದು. ವರ್ಷದ ಎಲ್ಲಾ ಹನ್ನೆರಡು ಹುಣ್ಣಿಮೆಗಳು ವಿಶೇಷ ಮಹತ್ವವನ್ನು ಹೊಂದಿದೆ. ಆದರೆ ವೈಶಾಖ ತಿಂಗಳಲ್ಲಿ ಮಾತ್ರ ಶ್ರೀ ಹರಿಯೊಂದಿಗೆ ಅರಳಿ ಮರವನ್ನು ಸಹ ಪೂಜಿಸಲಾಗುತ್ತದೆ, ಆದ್ದರಿಂದ ವೈಶಾಖ ಹುಣ್ಣಿಮೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ.

ಅರಳಿ ಮರವನ್ನು ಪೂಜಿಸುವುದರಿಂದ ಆಗುವ ಪ್ರಯೋಜನಗಳೇನು?

  1. ವೈಶಾಖ ಹುಣ್ಣಿಮೆಯಂದು ಅರಳಿ ಮರವನ್ನು ಪೂಜಿಸುವುದರಿಂದ ಜಾತಕದಲ್ಲಿ ಶನಿ, ಗುರು ಮತ್ತು ಇತರ ಗ್ರಹಕ್ಕೆ ಸಂಬಂಧ ಪಟ್ಟಂತೆ ಯಾವುದಾದರೂ ದೋಷವಿದ್ದಲ್ಲಿ ಪರಿಹಾರವಾಗುತ್ತದೆ.
  2. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅರಳಿ ಮರದಲ್ಲಿ ವಾಸಿಸುತ್ತಾರೆ. ಬೆಳಿಗ್ಗೆ ಎದ್ದು, ಅದಕ್ಕೆ ನೀರನ್ನು ಅರ್ಪಿಸಿ, ಪೂಜೆ ಮಾಡಿ ದೀಪ ಹಚ್ಚುವುದರಿಂದ ಮೂರು ದೇವತೆಗಳ ಆಶೀರ್ವಾದ ಸಿಗುತ್ತದೆ.
  3. ಅರಳಿ ಮರದ ಮೇಲೆ ಹಾಲು ಮತ್ತು ಕಪ್ಪು ಎಳ್ಳನ್ನು ಅರ್ಪಿಸುವುದರಿಂದ ಪಿತೃದೋಷ ಇದ್ದಲ್ಲಿ ನಿವಾರಣೆಯಾಗುತ್ತದೆ ಜೊತೆಗೆ ಅವರ ಆಶೀರ್ವಾದ ಸಿಗುತ್ತದೆ.
  4. ಲಕ್ಷ್ಮೀ ದೇವಿಯು ಸೂರ್ಯೋದಯದ ನಂತರ ಅರಳಿ ಮರದಲ್ಲಿ ವಾಸ ಮಾಡುತ್ತಾಳೆ ಆದ್ದರಿಂದ ಸೂರ್ಯೋದಯದ ನಂತರ ಅರಳಿ ಮರವನ್ನು ಪೂಜಿಸುವುದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
  5. ಜಾತಕದಲ್ಲಿ ವಿಧವಾ ಯೋಗ ಇದ್ದರೆ, ಮೊದಲು ಅರಳಿ ಮರವನ್ನು ಶುಭ ಲಗ್ನದಲ್ಲಿ ಮದುವೆಯಾಗುವ ಮೂಲಕ, ವೈಧವ್ಯ ಯೋಗಕ್ಕೆ ಪರಿಹಾರ ನೀಡಲಾಗುತ್ತದೆ. ಈ ಸಂಪ್ರದಾಯ ಕೆಲವು ಭಾಗಗಳಲ್ಲಿ ರೂಢಿಯಲ್ಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:46 pm, Mon, 20 May 24

ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್