ಹಡಗು ಅಲ್ಲಿಂದ ಇಲ್ಲಿ ಬರುವಷ್ಟರಲ್ಲಿ ಬೆಲೆ ದುಪ್ಪಟ್ಟು; ಯುಪಿಎ ಟೈಮಲ್ಲಿ ಅದಾನಿ ಬಿಸಿನೆಸ್ ಹೇಗಿತ್ತು ನೋಡಿ

Adani Group's coal business in 2014: ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿಯನ್ನು ಪ್ರಧಾನಿ ನರೇಂದ್ರ ಮೋದಿ ರಕ್ಷಣೆ ಮಾಡುತ್ತಿದ್ದಾರೆ ಎಂಬುದು ರಾಹುಲ್ ಗಾಂಧಿ ಅವರ ಬಹುಕಾಲದ ಪ್ರಮುಖ ಆರೋಪ. ಇದೀಗ 2014ರಲ್ಲಿ ನಡೆದ ಕಲ್ಲಿದ್ದಲು ಸಾಗಣೆಯಲ್ಲಿನ ಇನ್ವಾಯ್ಸ್​ವೊಂದು ಬೆಳಕಿಗೆ ಬಂದಿದ್ದು, ಅದಾನಿ ಗ್ರೂಪ್ ಸಂಸ್ಥೆ ಕಳಪೆ ದರ್ಜೆಯ ಕಲ್ಲಿದ್ದಲು ಪೂರೈಸಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿತ್ತು ಎನ್ನಲಾಗಿದೆ. ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಇವತ್ತು ಈ ಬಗ್ಗೆ ಒಂದು ವರದಿ ಪ್ರಕಟಿಸಿದೆ. ಇನ್ವಾಯ್ಸ್ ಇದ್ದ ಅವಧಿಯಲ್ಲಿ ಯುಪಿಎ ಆಡಳಿತ ಇತ್ತು.

ಹಡಗು ಅಲ್ಲಿಂದ ಇಲ್ಲಿ ಬರುವಷ್ಟರಲ್ಲಿ ಬೆಲೆ ದುಪ್ಪಟ್ಟು; ಯುಪಿಎ ಟೈಮಲ್ಲಿ ಅದಾನಿ ಬಿಸಿನೆಸ್ ಹೇಗಿತ್ತು ನೋಡಿ
ಗೌತಮ್ ಅದಾನಿ, ರಾಹುಲ್ ಗಾಂಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2024 | 3:55 PM

ನವದೆಹಲಿ, ಮೇ 22: ಅಂಬಾನಿ, ಅದಾನಿ ವಿಚಾರ ಈಗ ಬಿಜೆಪಿ, ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಹಿಂದೆಲ್ಲಾ ಅಂಬಾನಿ, ಅದಾನಿಯನ್ನು ಟೀಕಿಸುತ್ತಿದ್ದ ರಾಹುಲ್ ಗಾಂಧಿ (Rahul Gandhi) ಚುನಾವಣೆ ಘೋಷಣೆ ಆದ ಬಳಿಕ ಅವರ ಬಗ್ಗೆ ಸದ್ದೇ ಮಾಡುತ್ತಿಲ್ಲ ಎಂದು ಕೆಲ ವಾರಗಳ ಹಿಂದೆ ಪ್ರಧಾನಿ ಮೋದಿ (Narendra Modi) ಕುಟುಕಿದ್ದರು. ರಾಹುಲ್ ಗಾಂಧಿ ಕಳೆದ ಐದು ವರ್ಷಗಳಿಂದ ತಮ್ಮ ಭಾಷಣಗಳಲ್ಲಿ ಒಮ್ಮೆಯಾದರೂ ನರೇಂದ್ರ ಮೋದಿ ಜೊತೆಗೆ ಅಂಬಾನಿ, ಅದಾನಿ ಹೆಸರು ಎತ್ತುವುದು ತಪ್ಪುವುದೇ ಇಲ್ಲ. ಅದಾನಿಯನ್ನು (Gautam Adani) ಮೋದಿ ರಕ್ಷಣೆ ಮಾಡುತ್ತಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಬಹಳಷ್ಟು ಬಾರಿ ಆರೋಪ ಮಾಡಿದ್ದಾರೆ. ಕಲ್ಲಿದ್ದಲು ದರ ಹೆಚ್ಚಿಸಿ ಇನ್ವಾಯ್ಸ್ ಮಾಡುತ್ತಿದ್ದಾರೆ ಎಂದು ಅದಾನಿ ಗ್ರೂಪ್ ವಿರುದ್ಧ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಇದೇ ಅದಾನಿಯಿಂದ ಇಂಥದ್ದೇ ಇನ್ವಾಯ್ಸ್ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಇವತ್ತು ಈ ಬಗ್ಗೆ ವರದಿ ಪ್ರಕಟಿಸಿ ಬೆಳಕು ಚೆಲ್ಲಿದೆ. ಆ ಇನ್ವಾಯ್ಸ್ 2014ರ ಜನವರಿಯದ್ದಾಗಿದ್ದು, ಆಗ ಅಧಿಕಾರದಲ್ಲಿ ಇದ್ದದ್ದು ಯುಪಿಎ ಸರ್ಕಾರವೇ.

ಇಂಡೋನೇಷ್ಯಾದಿಂದ ಕಳಪೆ ಕಲ್ಲಿದ್ದಲು ತಂದು ಭಾರತದಲ್ಲಿ ದುಬಾರಿ ಬೆಲೆಗೆ ಮಾರಾಟ?

ವರದಿ ಪ್ರಕಾರ ಅದಾನಿ ಗ್ರೂಪ್ ಸಂಸ್ಥೆ ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಖರೀದಿಸಿ ಭಾರತಕ್ಕೆ ತಂದು, ಉತ್ತಮ ಗುಣಮಟ್ಟದ ಕಲ್ಲಿದ್ದಲಿನ ಬೆಲೆಗೆ ಮಾರುತ್ತಿತ್ತು. ಕಿಲೋಗೆ 3,500 ಕ್ಯಾಲೊರಿ ಇರುವ ಕಲ್ಲಿದ್ದಲನ್ನು 6,000 ಕ್ಯಾಲೋರಿಯ ಕಲ್ಲಿದ್ದಲೆಂದು ಮಾರಿ ಒಳ್ಳೆಯ ಲಾಭ ಮಾಡಲಾಗುತ್ತಿತ್ತು ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಹೇಳಿದೆ. 2024ರ ಜನವರಿಯಲ್ಲಿನ ಇನ್ವಾಯ್ಸ್​ಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಶವವಾಗಿ ಪತ್ತೆ

ಅದರ ಪ್ರಕಾರ ಒಟ್ಟು 1.5 ಮಿಲಿಯನ್ ಟನ್​ಗಳಷ್ಟು ಕಲ್ಲಿದ್ದಲನ್ನು ಇಂಡೋನೇಷ್ಯಾದಲ್ಲಿ ಖರೀದಿಸಿ 22 ಹಡಗುಗಳಲ್ಲಿ ತುಂಬಿಸಿ ಭಾರತಕ್ಕೆ ಸಾಗಿಸಲಾಗಿತ್ತು. ಭಾರತದಲ್ಲಿ ಆ ಕಲ್ಲಿದ್ದಲನ್ನು ದುಪ್ಪಟ್ಟು ದರದಲ್ಲಿ ಮಾರಿ ಅದಾನಿ ಗ್ರೂಪ್ ಲಾಭ ಮಾಡಿಕೊಂಡಿತ್ತು ಎನ್ನಲಾಗಿದೆ.

ಫೈನಾನ್ಷಿಯಲ್ ಟೈಮ್ಸ್​ನ ಈ ವರದಿಯು ಒಸಿಸಿಆರ್​ಪಿ ಅಥವಾ ವ್ಯವಸ್ಥಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯ ದಾಖಲೆಗಳಲ್ಲಿನ ಅಂಶಗಳನ್ನು ಪ್ರಸ್ತಾಪಿಸಿದೆ. ಅದರಂತೆ, 2013ರ ಡಿಸೆಂಬರ್​ನಲ್ಲಿ ಟನ್​ಗೆ 28 ಡಾಲರ್​ನ ಬೆಲೆಯಂತೆ ಕಲ್ಲಿದ್ದಲು ಇಂಡೋನೇಷ್ಯಾದಿಂದ ಹೊರಟು 2014ರ ಜನವರಿಯಲ್ಲಿ ಭಾರತವನ್ನು ತಲುಪಿದಾಗ ಟನ್​ಗೆ 92 ಡಾಲರ್ ಬೆಲೆ ಪಡೆದಿತ್ತಂತೆ.

ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ: ಆರೋಪಿ ಬಾಲಕನ ಕುಟುಂಬ ಹಾಗೂ ಭೂಗತ ಪಾತಕಿ ಛೋಟಾ ರಾಜನ್​ಗಿದೆ ನಂಟು?

ತಮಿಳುನಾಡು ವಿದ್ಯುತ್ ಪ್ರಸರಣ ಕಂಪನಿಯಾದ ಟ್ಯಾಂಗೆಡ್ಕೋ ಜೊತೆ ಅದಾನಿ ಗುತ್ತಿಗೆ ಹೊಂದಿತ್ತು. ಅಧಿಕ ಗುಣಮಟ್ಟದ ಇಂಧನ ಪೂರೈಕೆ ಮಾಡಬೇಕೆಂದು ಗುತ್ತಿಗೆಯಲ್ಲಿ ನಿರ್ದಿಷ್ಟಪಡಿಸಲಾಗಿತ್ತು. ಆದರೆ, ಅದಾನಿ ಗ್ರೂಪ್ ಕಳಪೆ ದರ್ಜೆಯ ಕಲ್ಲಿದ್ದಲು ಇಂಧನವನ್ನು ಪೂರೈಕೆ ಮಾಡಿದೆ. ಕಲ್ಲಿದ್ದಲನ್ನು ವಿದ್ಯುತ್ ತಯಾರಿಕೆಗೆ ಇಂಧನವಾಗಿ ಬಳಸಲಾಗುತ್ತದೆ. ಕಲ್ಲಿದ್ದಲ ಬಳಕೆ ಪರಿಸರಕ್ಕೆ ಮಾರಕ. ಆದರೆ, ಕಡಿಮೆ ಕ್ಯಾಲೊರಿಯ ಕಲ್ಲಿದ್ದಲನ್ನು ಹೆಚ್ಚು ಉರಿಸಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ