ಪೋರ್ಷೆ ಕಾರು ಅಪಘಾತ: ಆರೋಪಿ ಬಾಲಕನ ಕುಟುಂಬ ಹಾಗೂ ಭೂಗತ ಪಾತಕಿ ಛೋಟಾ ರಾಜನ್ಗಿದೆ ನಂಟು?
ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ ಇಡಿ ದೇಶದಾದ್ಯಂತ ಸದ್ದು ಮಾಡಿದೆ. ಬಾಲಕನ ಅಜ್ಜ ಸುರೀಂದರ್ ಅಗರ್ವಾಲ್ ಹಾಗೂ ಜೈಲಿನಲ್ಲಿರುವ ಛೋಟಾ ರಾಜನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿದೆ

ಪುಣೆಯ ಕಲ್ಯಾಣಿನಗರದಲ್ಲಿ ಶನಿವಾರ ರಾತ್ರಿ ಕುಡಿದ ಮತ್ತಿನಲ್ಲಿ 17ರ ಬಾಲಕ ವೇದಾಂತ್ ಅಗರ್ವಾಲ್(Vedant Agarwal) ವೇಗವಾಗಿ ದುಬಾರಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಘಟನೆ ಇಡೀ ದೇಶಾದ್ಯಂತ ಸದ್ದು ಮಾಡಿದೆ. ಆತ ಖ್ಯಾತ ಬಿಲ್ಡರ್ ಪುತ್ರನಾಗಿದ್ದು, ಪ್ರಕರಣದಲ್ಲಿ ಆತನಿಗೆ ಜಾಮೀನು ನೀಡಿ ತಂದೆಯನ್ನು ಬಂಧಿಸಲಾಗಿದೆ.
ವೇದಾಂತ್ ಅಜ್ಜ ಸುರೀಂದರ್ ಅಗರ್ವಾಲ್ ಹಾಗೂ ಜೈಲಿನಲ್ಲಿರುವ ಛೋಟಾ ರಾಜನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಕೇವಲ 15 ಗಂಟೆಗಳಲ್ಲಿ ಬಾಲಾಪರಾಧಿ ನ್ಯಾಯಾಲಯ ಬಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ ಟ್ರಾಫಿಕ್ ಪೊಲೀಸರ ಜತೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತದ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು ಇದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಛೋಟಾ ರಾಜನ್ ಹಾಗೂ ಸುರೀಂದರ್ ನಂಟು ಹೇಗೆ? ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಜಯ್ ಭೋಸ್ಲೆ ಎಂಬ ವ್ಯಕ್ತಿಯ ಕೊಲೆ ನಡೆದಿತ್ತು ಕೊಲೆ ಆರೋಪಿಗಳನ್ನು ಸುರೀಂದರ್ ಕೂಡ ಒಬ್ಬರು. ಈ ಕೊಲೆಯಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಕೂಡ ಶಾಮೀಲಾಗಿದ್ದರು.
ಮತ್ತಷ್ಟು ಓದಿ: ಕಾರು ಅಪಘಾತಕ್ಕೂ ಮುನ್ನ ಪಬ್ನಲ್ಲಿ 90 ನಿಮಿಷಗಳಲ್ಲಿ 48 ಸಾವಿರ ರೂ. ಖರ್ಚು ಮಾಡಿದ್ದ ಬಾಲಕ
ಛೋಟಾ ರಾಜನ್ ಬಂಧನದೊಂದಿಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು, ಇದನ್ನು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಯಿತು.
ಈ ಅಪಘಾತದ ಬಳಿಕ ಎರಡು ಪಬ್ಗಳನ್ನು ಮುಚ್ಚಲು ಪುಣೆ ಕಲೆಕ್ಟರ್ ಸುಹಾಸ್ ದಿವಾಸೆ ಆದೇಶ ಹೊರಡಿಸಿದ್ದಾರೆ. ಮಗನ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಬಾಲಕನ ತಂದೆ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಮಂಗಳವಾರ ಬಂಧಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ