Chaitra Navaratri 2023: ಚೈತ್ರ ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಜೊತೆ ಈ ಆಹಾರವನ್ನು ಸೇವಿಸಬಾರದು
ಈ ವರ್ಷದ ಚೈತ್ರ ನವರಾತ್ರಿಯು ಮಾರ್ಚ್ 22 ರಿಂದ ಮಾರ್ಚ್ 30 ರ ರಾಮ ನವಮಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಹೊರತುಪಡಿಸಿ ನವರಾತ್ರಿಯ ಸಂದರ್ಭದಲ್ಲಿ ತಿನ್ನಬಾರದ ಆಹಾರಗಳು ಇಲ್ಲಿವೆ.
ಚೈತ್ರ ಶುಕ್ಲ ಪಕ್ಷದ ಸಮಯದಲ್ಲಿ ಹಿಂದೂ (Hindu) ಸಮುದಾಯದಿಂದ ಚೈತ್ರ ನವರಾತ್ರಿಯನ್ನು (Chaitra Navarathri) ಆಚರಿಸಲಾಗುತ್ತದೆ. ಇದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುತ್ತದೆ, ಈ ವರ್ಷ ಚೈತ್ರ ನವರಾತ್ರಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಒಂಬತ್ತು ದಿನಗಳು ಆಚರಿಸಲಾಗುವುದು. ಕೊನೆಯ ದಿನ ಮಾರ್ಚ್ 30, ರಾಮ ನವಮಿಯೊಂದಿಗೆ (Ram Navami) ಕೊನೆಗೊಳ್ಳುತ್ತದೆ. ನವರಾತ್ರಿಯ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರಿಗಳಂತಹ ರಾಜಸಿಕ ಮತ್ತು ತಾಮಸಿಕ ಆಹಾರಗಳನ್ನು ಸೇವಿಸುವಂತಿಲ್ಲ. ಈ ಒಂಬತ್ತು ದಿನಗಳ ಹಬ್ಬದಲ್ಲಿ ಸಾತ್ವಿಕ ಆಹಾರವನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲಾಗುತ್ತದೆ.
ಸಾತ್ವಿಕ್ ಆಹಾರಗಳು ಮೂಲಭೂತವಾಗಿ ಸಸ್ಯಾಹಾರವಾಗಿದೆ. ಕೇವಲ ಆರೋಗ್ಯಕರ, ಸಾವಯವ, ಸಸ್ಯ ಆಧಾರಿತ ಮತ್ತು ಡೈರಿ ಉತ್ಪನ್ನಗಳನ್ನು ಬಳಸಿ ತಯಾರಿಸಲಾಗುತ್ತದೆ. ಸಾತ್ವಿಕ ಆಹಾರ ಯಾವುದೇ ರೀತಿಯ ಪ್ರಾಣಿ ಮಾಂಸವನ್ನು ಒಳಗೊಂಡಿಲ್ಲ. ಹಣ್ಣುಗಳು, ಬೀಜಗಳು, ತರಕಾರಿಗಳು, ಹಾಲು, ದ್ವಿದಳ ಧಾನ್ಯಗಳು ಮತ್ತು ಇತರ ನೈಸರ್ಗಿಕವಾಗಿ ಪಡೆದ ಉತೊಅನ್ನಗಳನ್ನು ಒಳಗೊಂಡಿರುತ್ತದೆ.
ನವರಾತ್ರಿಯ ಸಮಯದಲ್ಲಿ, ಹಿಂದೂ ಭಕ್ತರು ಸಂಸ್ಕರಿಸಿದ, ಪ್ಯಾಕೇಜ್ಡ್ ತಿನಿಸು ಅಥವಾ ಬಾಟಲಿಯಲ್ಲಿ ಶೇಖರಿಸಿದ ಯಾವ ಆಹಾರವನ್ನು ಸೇವಿಸುವಂತಿಲ್ಲ. ಏಕೆಂದರೆ ಇವು ತಾಜಾ ಆಹಾರ ಪದಾರ್ಥಗಳಲ್ಲ ಮತ್ತು ಸೇವಿಸುವ ಯಾವ ಆಹಾರವನ್ನು ಕರಿಯಬಾರದು. ಆಹಾರದ ಸತ್ವ ಹೋಗುವಂತ ಯಾವ ವಿಧಾನವನ್ನು ಅನುಸರಿಸದೆ, ಆಹಾರದಲ್ಲಿರುವ ಸಂಪೂರ್ಣ ನೈಸರ್ಗಿಕ ಸತ್ವವನ್ನು ಸೇವಿಸಬೇಕು. ಪ್ರಮುಖವಾಗಿ ಆಹಾರದ ಒಂದು ಭಾಗ ಹಣ್ಣುಗಳು, ತರಕಾರಿಗಳು ಮತ್ತು ಸೊಪ್ಪುಗಳಾಗಿರಬೇಕು, ಇವುಗಳಲ್ಲಿ ನೀರಿನ ಸಾಂದ್ರತೆ ಸಮೃದ್ಧವಾಗಿರಬೇಕು.
ನವರಾತ್ರಿಯಲ್ಲಿ ಸಾಮಾನ್ಯವಾಗಿ ತಿನ್ನಬಾರದ ಕೆಲವು ಆಹಾರಗಳು ಇಲ್ಲಿವೆ –
-
ಮಾಂಸಾಹಾರ:
ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆಗಳನ್ನು ಒಳಗೊಂಡಂತೆ ಮಾಂಸಹಾರವನ್ನು ಸಾಮಾನ್ಯವಾಗಿ ನವರಾತ್ರಿಯ ಸಮಯದಲ್ಲಿ ತಿನ್ನಬಾರದು. ಏಕೆಂದರೆ ಇದು ತಾಮಸಿಕ ಎಂದು ನಂಬಲಾಗಿದೆ, ಅಂದರೆ ಇದು ಮನಸ್ಸು ಮತ್ತು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
-
ಈರುಳ್ಳಿ ಮತ್ತು ಬೆಳ್ಳುಳ್ಳಿ:
ನವರಾತ್ರಿಯ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಪ್ಪಿಸಿ ಏಕೆಂದರೆ ಅವು ರಾಜಸಿಕವೆಂದು ನಂಬಲಾಗಿದೆ, ಅಂದರೆ ಅವು ಇಂದ್ರಿಯಗಳನ್ನು ಉತ್ತೇಜಿಸುತ್ತದೆ ಮತ್ತು ಚಡಪಡಿಕೆಗೆ ಕಾರಣವಾಗಬಹುದು.
-
ಧಾನ್ಯಗಳು:
ನವರಾತ್ರಿಯ ಸಮಯದಲ್ಲಿ ಗೋಧಿ, ಅಕ್ಕಿ ಮತ್ತು ಓಟ್ಸ್‌ನಂತಹ ಧಾನ್ಯಗಳನ್ನು ತಿನ್ನದಿರಿ ಮತ್ತು ಬದಲಿಗೆ ಅಮರಂಥ್, ಬಕ್‌ವೀಟ್ ಮತ್ತು ವಾಟರ್ ಚೆಸ್ಟ್‌ನಟ್ ಹಿಟ್ಟಿನಂತಹ ಅಂಟು-ಮುಕ್ತ ಪರ್ಯಾಯಗಳನ್ನು ಆರಿಸಿಕೊಳ್ಳಿ.
-
ದ್ವಿದಳ ಧಾನ್ಯಗಳು:
ಕೆಲವರು ನವರಾತ್ರಿಯ ಸಮಯದಲ್ಲಿ ಮಸೂರ, ಬೀನ್ಸ್ ಮತ್ತು ಕಡಲೆಗಳಂತಹ ದ್ವಿದಳ ಧಾನ್ಯಗಳನ್ನು ತಾಮಸಿಕವೆಂದು ಪರಿಗಣಿಸುತ್ತಾರೆ.
-
ಸಂಸ್ಕರಿಸಿದ ಆಹಾರಗಳು:
ಪ್ಯಾಕ್ ಮಾಡಿದ ತಿಂಡಿಗಳು, ಸಿಹಿತಿಂಡಿಗಳು ಸೇರಿದಂತೆ ಸಂಸ್ಕರಿಸಿದ ಆಹಾರಗಳನ್ನು ಸಾಮಾನ್ಯವಾಗಿ ನವರಾತ್ರಿಯ ಸಮಯದಲ್ಲಿ ಸೇವಿಸುವುದಿಲ್ಲ. ಏಕೆಂದರೆ ಅವುಗಳನ್ನು ಸಾಮಾನ್ಯವಾಗಿ ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ, ಇವುಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುವುದಿಲ್ಲ.
ಚೈತ್ರ ನವರಾತ್ರಿಯನ್ನು ವಸಂತ ನವರಾತ್ರಿ ಎಂದೂ ಕರೆಯುತ್ತಾರೆ, ಈ ಹಿಂದೂ ಹಬ್ಬದ ಪ್ರತಿ ದಿನವನ್ನು ದುರ್ಗೆಯ ಅವತಾರಕ್ಕೆ ಸಮರ್ಪಿಸಲಾಗುತ್ತದೆ. ಚೈತ್ರ ನವರಾತ್ರಿಯಲ್ಲಿ ಆಚರಿಸಲಾಗುವ ದುರ್ಗೆಯ ಅವತಾರಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.
Published On - 2:57 pm, Sat, 18 March 23