Chaitra Navratri 2024: ನವರಾತ್ರಿಯ ಕನ್ಯಾ ಪೂಜೆಯಲ್ಲಿ ಎಷ್ಟು ಹುಡುಗಿಯರು ಕುಳಿತುಕೊಳ್ಳಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2024 | 10:36 AM

ನವರಾತ್ರಿಯಲ್ಲಿಕನ್ಯಾ ಪೂಜೆ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನವರಾತ್ರಿ ಉಪವಾಸವು ಕೂಡ ಈ ಪೂಜೆಯೊಂದಿಗೆ ಕೊನೆಗೊಳ್ಳುತ್ತದೆ. ಅಷ್ಟಮಿ ಅಥವಾ ನವಮಿ ತಿಥಿಯಂದು ನೀವು ಕನ್ಯಾ ಪೂಜೆ ಮಾಡಬಹುದು. ಆದರೆ ಎಷ್ಟು ಕನ್ಯೆಯರನ್ನು ಮನೆಗೆ ಆಹ್ವಾನಿಸಬೇಕು? ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ಇಲ್ಲಿದೆ ಈ ಬಗ್ಗೆ ಮಾಹಿತಿ.

Chaitra Navratri 2024: ನವರಾತ್ರಿಯ ಕನ್ಯಾ ಪೂಜೆಯಲ್ಲಿ ಎಷ್ಟು ಹುಡುಗಿಯರು ಕುಳಿತುಕೊಳ್ಳಬೇಕು?
ಸಾಂದರ್ಭಿಕ ಚಿತ್ರ
Follow us on

ಚೈತ್ರ ಮತ್ತು ಶಾರದೀಯ ನವರಾತ್ರಿಯಲ್ಲಿ ಕನ್ಯಾ ಪೂಜೆ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನವರಾತ್ರಿ ಉಪವಾಸವು ಕೂಡ ಈ ಪೂಜೆಯೊಂದಿಗೆ ಕೊನೆಗೊಳ್ಳುತ್ತದೆ. ಅಷ್ಟಮಿ ಅಥವಾ ನವಮಿ ತಿಥಿಯಂದು ನೀವು ಕನ್ಯಾ ಪೂಜೆ ಮಾಡಬಹುದು. ಆದರೆ ಎಷ್ಟು ಕನ್ಯೆಯರನ್ನು ಮನೆಗೆ ಆಹ್ವಾನಿಸಬೇಕು? ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ಸಾಮಾನ್ಯವಾಗಿ ಈ ಪೂಜೆಯಲ್ಲಿ 9 ಹುಡುಗಿಯರು ಕುಳಿತುಕೊಳ್ಳುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ 9 ಹುಡುಗಿಯರು 9 ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ.

  1. ಅಷ್ಟಮಿ ಅಥವಾ ನವಮಿಯ ದಿನದಂದು ನೀವು ಕನ್ಯಾ ಪೂಜೆಯನ್ನು ಮಾಡಿದರೆ, ಒಂಬತ್ತು ಹುಡುಗಿಯರನ್ನು ಪೂಜಿಸುವ ಮೂಲಕ ತಾಯಿಯ ಆಶೀರ್ವಾದ ಪಡೆಯಬಹುದು.
  2. ಕನ್ಯಾ ಪೂಜೆ ಮಾಡುವುದರಿಂದ ಅತ್ಯಧಿಕ ಫಲ ಪ್ರಾಪ್ತಿಯಾಗುತ್ತದೆ. ನಿಮ್ಮ ಆಸೆಗಳು ಈಡೇರುತ್ತದೆ.
  3. ಈ ಪೂಜೆಗೆ 9 ಹುಡುಗಿಯರು ಸಿಗದಿದ್ದಲ್ಲಿ. ಪೂಜೆಯಲ್ಲಿ 5 ಅಥವಾ 7 ಹುಡುಗಿಯರನ್ನು ಕೂಡ ಕೂರಿಸಬಹುದು.
  4. ಕನ್ಯಾ ಪೂಜೆಯ ಸಮಯದಲ್ಲಿ ಹುಡುಗಿಯರನ್ನು ಮನೆಗೆ ಕರೆದು ಅವರಿಗೆ ಆಹಾರವನ್ನು ನೀಡುವುದು ತುಂಬಾ ಶುಭವೆಂದು ಹೇಳಲಾಗುತ್ತದೆ.
  5. ಕನ್ಯಾ ಪೂಜೆಯಲ್ಲಿ, ಮೊದಲು ಎಲ್ಲಾ ಹುಡುಗಿಯರಿಗೆ ಬಟ್ಟೆಗಳನ್ನು ನೀಡಿ. ಆ ಬಳಿಕ ಅವರ ಪಾದಗಳನ್ನು ತೊಳೆಯಿರಿ. ಬಳಿಕ ಕುಂಕುಮ ಹಚ್ಚಿ ನಮಸ್ಕಾರ ಮಾಡಿ.
  6. ಬಳಿಕ ಆ ಕನ್ಯೆಯರಿಗೆ ಒಳ್ಳೆಯ ಆಹಾರವನ್ನು ನೀಡಿ, ಪ್ರತಿಯೊಬ್ಬ ಹುಡುಗಿಗೂ ದಕ್ಷಿಣೆ ಅಥವಾ ಉಡುಗೊರೆಗಳನ್ನು ನೀಡಿ.
  7. ತಾಯಿಗೆ ಮಾಡಿದ ನೈವೇದ್ಯವನ್ನು ಪ್ರಸಾದವಾಗಿ ಕನ್ಯೆಯರಿಗೆ ನೀಡಿ.
  8. ಹುಡುಗಿಯರೊಂದಿಗೆ ಒಬ್ಬರು ಅಥವಾ ಇಬ್ಬರು ಹುಡುಗರನ್ನು ಕೂರಿಸುವ ನಿಯಮವಿದೆ. ಅದರಲ್ಲಿ ಒಂದು ಮಗುವನ್ನು ಭೈರವ ಎಂದು ಮತ್ತಿಬ್ಬರು ಮಕ್ಕಳನ್ನು ಗಣಪತಿ ಎಂದು ಕರೆಯಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ