Ram Navami 2024: ಅಯೋಧ್ಯೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ, ಎಲ್ಲೆಲ್ಲಿ ನಡೆದಿದೆ ಈ ಪ್ರಯೋಗ?

ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ ಕೂಡ ಯಶಸ್ವಿಯಾಗಿದ್ದು ರಾಮನವಮಿಯ ದಿನವೇ ಸೂರ್ಯ ರಶ್ಮಿ ಶ್ರೀರಾಮನ ಮೂರ್ತಿ ಸ್ಪರ್ಶ ಮಾಡಲಿದೆ. ಇದರ ಪ್ರಯೋಗ ಈಗಾಗಲೇ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

Ram Navami 2024: ಅಯೋಧ್ಯೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ, ಎಲ್ಲೆಲ್ಲಿ ನಡೆದಿದೆ ಈ ಪ್ರಯೋಗ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 16, 2024 | 3:55 PM

ಶ್ರೀರಾಮ ಭೂಮಿ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು ಭರದಿಂದ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ ಕೂಡ ಯಶಸ್ವಿಯಾಗಿದ್ದು ರಾಮನವಮಿಯ ದಿನವೇ ಸೂರ್ಯ ರಶ್ಮಿ ಶ್ರೀರಾಮನ ಮೂರ್ತಿ ಸ್ಪರ್ಶ ಮಾಡಲಿದೆ. ಇದರ ಪ್ರಯೋಗ ಈಗಾಗಲೇ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸಿದ್ದು ರಾಮನವಮಿಯ ದಿನ ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳಲಿದೆ. ಅದನ್ನು ದೂರದರ್ಶನ ನೇರ ಪ್ರಸಾರ ಮಾಡಲಿದ್ದು, ಜಗತ್ತಿನಾದ್ಯಂತ ಜನರು ಈ ತಂತ್ರಜ್ಞಾನ ಕೌತುಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಹಾಗಾದರೆ ಸೂರ್ಯರಶ್ಮಿ ಎಂದರೇನು? ಇದು ಉಂಟಾಗುವುದು ಹೇಗೆ? ಈ ರೀತಿಯ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗುವ ದೇವಸ್ಥಾನಗಳು ಬೇರೆ ಎಲ್ಲೆಲ್ಲಿ ಇದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೂರ್ಯರಶ್ಮಿ ಎಂದರೇನು?

ವಾಸ್ತುಶಿಲ್ಪದ ಕೆಲವು ತಂತ್ರಗಳು ನಮ್ಮನ್ನು ಮೂಕನಾಗಿಸುತ್ತದೆ. ಅದರಲ್ಲಿ ಇದು ಒಂದು. ನಿಮಗೆ ತಿಳಿದಿರಬಹುದು ಸೂರ್ಯನು ಸ್ಥಿರವಾಗಿರುವುದಿಲ್ಲ. ಅವನು ಚಲಿಸುತ್ತಾನೆ ಎಂದು ವಿಜ್ಞಾನ ಹೇಳುತ್ತದೆ. ಇನ್ನು ಸೂರ್ಯ ದೇವರು ರಥದ ಮೇಲೆ ಸವಾರಿ ಮಾಡುತ್ತಾನೆ ಎಂದು ವೇದಗಳು ಹೇಳುತ್ತವೆ. ಜೊತೆಗೆ ಬಣ್ಣವು ಸೂರ್ಯನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎನ್ನಲಾಗುತ್ತದೆ. ಇವುಗಳ ಆಧಾರದ ಮೇಲೆ ಪ್ರಾಚೀನ ವಾಸ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ದೇವರ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಮಾಡುತ್ತಾರೆ. ಸೂರ್ಯನ ಚಲನೆಯ ಆಧಾರದ ಮೇಲೆ ಈ ಪ್ರಯೋಗವನ್ನು ಮಾಡಲಾಗುತ್ತದೆ.

ಉದಾಹರಣೆಗೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ, ಮತ್ತು ಗದಗ ಜಿಲ್ಲೆಯ ಪುಲಿಗೆರೆ ಸೋಮನಾಥ ದೇವಾಲಯದಲ್ಲಿ ಉತ್ತರಾಯಣ ಪುಣ್ಯ ಕಾಲದಲ್ಲಿ ಮಕರ ಸಂಕ್ರಾಂತಿಯ ದಿನದ ಸಂಜೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಸೂರ್ಯ ತನ್ನ ಪಥ ಬದಲಿಸುವಾಗ ಅಂದರೆ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ದಿಕ್ಕು ಬದಲಿಸುವ ವೇಳೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತದೆ.

ಇದನ್ನೂ ಓದಿ: ರಾಮನಿಗಾಗಿ ಪಾನಕ, ದೂದ್ ಪೇಡ ರೂಪದಲ್ಲಿ ನೈವೇದ್ಯ ಅರ್ಪಿಸಿ

ಸೂರ್ಯನ ಕಿರಣಗಳಲ್ಲಿ ಏಳು ಬಣ್ಣ;

ಇನ್ನು ಸೂರ್ಯನ ಕಿರಣಗಳಲ್ಲಿ ಏಳು ಬಣ್ಣಗಳಿವೆ, ಧರ್ಮಗ್ರಂಥಗಳಲ್ಲಿ ಅವುಗಳನ್ನು ಸಪ್ತರಶ್ಮಿ ಎಂದು ಕರೆಯಲಾಗುತ್ತದೆ, ಎಲ್ಲಾ ಕಿರಣಗಳು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ. ಹಸಿರು, ಹಳದಿ, ನೀಲಿ, ಕಿತ್ತಳೆ, ಕೆಂಪು, ನೇರಳೆ ಮತ್ತು ಆಕಾಶ ನೀಲಿ. ನಮ್ಮ ವೇದಗಳಲ್ಲಿ ಇವುಗಳನ್ನು ಸಪ್ತರಶ್ಮಿಯರು ಎಂದು ಕರೆಯಲಾಗಿದೆ.

ಎಲ್ಲೆಲ್ಲಿ ನಡೆದಿದೆ ಸೂರ್ಯರಶ್ಮಿ ಪ್ರಯೋಗ?

ಅಯೋದ್ಯೆಯಲ್ಲಿ ಮಾಡಿರುವ ಸೂರ್ಯರಶ್ಮಿ ಪ್ರಯೋಗವನ್ನು ಈಗಾಗಲೇ ಕೆಲವು ಜೈನ ದೇವಾಲಯಗಳಲ್ಲಿ ಮತ್ತು ಒರಿಸ್ಸಾ ರಾಜ್ಯದಲ್ಲಿರುವ ಕೊನಾರ್ಕ್‌ ಸೂರ್ಯ ದೇವಾಲಯದಲ್ಲಿಯೂ ಈ ಪ್ರಯೋಗ ನಡೆದಿದೆ ಆದರೆ ಅವುಗಳನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:47 pm, Tue, 16 April 24

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ