Ram Navami Special Recipe : ರಾಮನಿಗಾಗಿ ಪಾನಕ, ದೂದ್ ಪೇಡ ರೂಪದಲ್ಲಿ ನೈವೇದ್ಯ ಅರ್ಪಿಸಿ

ಭಾರತದಾದ್ಯಂತ ಶ್ರೀರಾಮ ಹುಟ್ಟಿದ ದಿನದಂದು ರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇದು ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಈ ಬಾರಿ ಏಪ್ರಿಲ್ 17 ರಂದು ರಾಮನವಮಿಯನ್ನು ಆಚರಿಸಲಾಗುತ್ತಿದೆ. ಹಬ್ಬದ ದಿನ ಪಾನಕ ಹಾಗೂ ದೂದ್ ಪೇಡ ಮಾಡಿ ರಾಮನಿಗೆ ನೈವೇದ್ಯವಾಗಿ ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಬಹುದು.

Ram Navami Special Recipe : ರಾಮನಿಗಾಗಿ ಪಾನಕ, ದೂದ್ ಪೇಡ ರೂಪದಲ್ಲಿ ನೈವೇದ್ಯ ಅರ್ಪಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 17, 2024 | 9:26 AM

ಶ್ರೀರಾಮನ ಹುಟ್ಟಿದ ಹಬ್ಬದಂದು ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ರಾಮನವಮಿ ಎಂದ ಕೂಡಲೇ ನೆನಪಿಗೆ ಬರುವುದೇ ಪಾನಕ. ಅದಲ್ಲದೇ ಹಬ್ಬದ ದಿನ ಎಲ್ಲರೂ ಸ್ವೀಟ್ ಗಳನ್ನು ಮಾಡಿ ಸವಿಯುತ್ತಾರೆ. ಹಿಂದೂಗಳ ಪ್ರಮುಖ ಹಬ್ಬವಾದ ’ಶ್ರೀ ರಾಮನವಮಿಗೆ ಪಾನಕ ಹಾಗೂ ದೂದ್ ಪೇಡ ಮಾಡಿ ನೈವೇದ್ಯವನ್ನಿಟ್ಟು, ಹಬ್ಬದ ಸಂಭ್ರಮವನ್ನು ಸವಿಯಬಹುದು.

ಪಾನಕ ಮಾಡಲು ಬೇಕಾಗುವ ಸಾಮಗ್ರಿಗಳು:

* ಬೆಲ್ಲ

* ಒಂದೆರಡು ಒಣಶುಂಠಿ

* ಅರ್ಧ ಚಮಚದಷ್ಟು ಕಾಳು ಮೆಣಸು

* ನಿಂಬೆ

* ಉಪ್ಪು

* ಏಲಕ್ಕಿ ಪುಡಿ

* ನೀರು

ಪಾನಕ ಮಾಡುವ ವಿಧಾನ:

* ಮೊದಲಿಗೆ ಬೆಲ್ಲ ಹಾಗೂ ಒಣಶುಂಠಿಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು.

* ಪಾನಕಕ್ಕೆ ಬೇಕಾಗುವ ಈ ಕಾಳು ಮೆಣಸನ್ನು ಸ್ವಲ್ಪ ಸ್ವಲ್ಪ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು.

* ಒಂದು ಪಾತ್ರೆಗೆ ನೀರು ಹಾಕಿ ನಿಂಬೆಯನ್ನು ಹಿಂಡಿಕೊಳ್ಳಿ. ಅದಕ್ಕೆ ಪುಡಿ ಮಾಡಿಟ್ಟ ಬೆಲ್ಲ, ಕಾಳು ಮೆಣಸು ಹಾಗೂ ಒಣಶುಂಠಿಯನ್ನು ಬೆರೆಸಬೇಕು.

* ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿದರೆ ಬೆಲ್ಲದ ಪಾನಕ ಸವಿಯಲು ಸಿದ್ಧವಾಗುತ್ತದೆ.

ದೂದ್ ಪೇಡ ಮಾಡಲು ಬೇಕಾಗುವ ಸಾಮಗ್ರಿಗಳು:

*ಹಾಲಿನಪುಡಿ

* ಕಂಡೆನ್ಸ್ದ್ ಹಾಲು

* ಬೆಣ್ಣೆ

* ಏಲಕ್ಕಿ ಪುಡಿ

ಇದನ್ನೂ ಓದಿ: ರಾಮನವಮಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಶುಭಕೋರಿ

ಮಾಡುವ ವಿಧಾನ:

* ಮೊದಲು ಬೆಣ್ಣೆಯನ್ನು ಕರಗಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ,ಹಾಲಿನ ಪುಡಿಯನ್ನು ಹಾಕಿ, ಗಂಟು ಆಗದಂತೆ ಚೆನ್ನಾಗಿ ಬೆರೆಸಿಕೊಳ್ಳಬೇಕು.

* ಆಗಾಗ ಕೈಯಾಡಿಸುತ್ತ ಇರಬೇಕು. ಈ ಮಿಶ್ರಣವು ಗಟ್ಟಿಯಾದ ತಕ್ಷಣ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಕಲಸಿಕೊಳ್ಳಿ.

* ತಳ ಬಿಡುತ್ತಿದ್ದಂತೆ ಬೇಕಾದ ಆಕಾರದಲ್ಲಿ ಪೇಡಗಳನ್ನು ತಯಾರಿಸಿದರೆ ರುಚಿ ರುಚಿಕರವಾದ ದೂದ್ ಪೇಡ ಸವಿಯಲು ಸಿದ್ಧ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:56 am, Tue, 16 April 24

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ