Chaitra Navratri 2024: ನವರಾತ್ರಿಯ ಕನ್ಯಾ ಪೂಜೆಯಲ್ಲಿ ಎಷ್ಟು ಹುಡುಗಿಯರು ಕುಳಿತುಕೊಳ್ಳಬೇಕು?
ನವರಾತ್ರಿಯಲ್ಲಿಕನ್ಯಾ ಪೂಜೆ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನವರಾತ್ರಿ ಉಪವಾಸವು ಕೂಡ ಈ ಪೂಜೆಯೊಂದಿಗೆ ಕೊನೆಗೊಳ್ಳುತ್ತದೆ. ಅಷ್ಟಮಿ ಅಥವಾ ನವಮಿ ತಿಥಿಯಂದು ನೀವು ಕನ್ಯಾ ಪೂಜೆ ಮಾಡಬಹುದು. ಆದರೆ ಎಷ್ಟು ಕನ್ಯೆಯರನ್ನು ಮನೆಗೆ ಆಹ್ವಾನಿಸಬೇಕು? ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ಇಲ್ಲಿದೆ ಈ ಬಗ್ಗೆ ಮಾಹಿತಿ.
ಚೈತ್ರ ಮತ್ತು ಶಾರದೀಯ ನವರಾತ್ರಿಯಲ್ಲಿ ಕನ್ಯಾ ಪೂಜೆ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ನವರಾತ್ರಿ ಉಪವಾಸವು ಕೂಡ ಈ ಪೂಜೆಯೊಂದಿಗೆ ಕೊನೆಗೊಳ್ಳುತ್ತದೆ. ಅಷ್ಟಮಿ ಅಥವಾ ನವಮಿ ತಿಥಿಯಂದು ನೀವು ಕನ್ಯಾ ಪೂಜೆ ಮಾಡಬಹುದು. ಆದರೆ ಎಷ್ಟು ಕನ್ಯೆಯರನ್ನು ಮನೆಗೆ ಆಹ್ವಾನಿಸಬೇಕು? ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ಸಾಮಾನ್ಯವಾಗಿ ಈ ಪೂಜೆಯಲ್ಲಿ 9 ಹುಡುಗಿಯರು ಕುಳಿತುಕೊಳ್ಳುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ 9 ಹುಡುಗಿಯರು 9 ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ.
- ಅಷ್ಟಮಿ ಅಥವಾ ನವಮಿಯ ದಿನದಂದು ನೀವು ಕನ್ಯಾ ಪೂಜೆಯನ್ನು ಮಾಡಿದರೆ, ಒಂಬತ್ತು ಹುಡುಗಿಯರನ್ನು ಪೂಜಿಸುವ ಮೂಲಕ ತಾಯಿಯ ಆಶೀರ್ವಾದ ಪಡೆಯಬಹುದು.
- ಕನ್ಯಾ ಪೂಜೆ ಮಾಡುವುದರಿಂದ ಅತ್ಯಧಿಕ ಫಲ ಪ್ರಾಪ್ತಿಯಾಗುತ್ತದೆ. ನಿಮ್ಮ ಆಸೆಗಳು ಈಡೇರುತ್ತದೆ.
- ಈ ಪೂಜೆಗೆ 9 ಹುಡುಗಿಯರು ಸಿಗದಿದ್ದಲ್ಲಿ. ಪೂಜೆಯಲ್ಲಿ 5 ಅಥವಾ 7 ಹುಡುಗಿಯರನ್ನು ಕೂಡ ಕೂರಿಸಬಹುದು.
- ಕನ್ಯಾ ಪೂಜೆಯ ಸಮಯದಲ್ಲಿ ಹುಡುಗಿಯರನ್ನು ಮನೆಗೆ ಕರೆದು ಅವರಿಗೆ ಆಹಾರವನ್ನು ನೀಡುವುದು ತುಂಬಾ ಶುಭವೆಂದು ಹೇಳಲಾಗುತ್ತದೆ.
- ಕನ್ಯಾ ಪೂಜೆಯಲ್ಲಿ, ಮೊದಲು ಎಲ್ಲಾ ಹುಡುಗಿಯರಿಗೆ ಬಟ್ಟೆಗಳನ್ನು ನೀಡಿ. ಆ ಬಳಿಕ ಅವರ ಪಾದಗಳನ್ನು ತೊಳೆಯಿರಿ. ಬಳಿಕ ಕುಂಕುಮ ಹಚ್ಚಿ ನಮಸ್ಕಾರ ಮಾಡಿ.
- ಬಳಿಕ ಆ ಕನ್ಯೆಯರಿಗೆ ಒಳ್ಳೆಯ ಆಹಾರವನ್ನು ನೀಡಿ, ಪ್ರತಿಯೊಬ್ಬ ಹುಡುಗಿಗೂ ದಕ್ಷಿಣೆ ಅಥವಾ ಉಡುಗೊರೆಗಳನ್ನು ನೀಡಿ.
- ತಾಯಿಗೆ ಮಾಡಿದ ನೈವೇದ್ಯವನ್ನು ಪ್ರಸಾದವಾಗಿ ಕನ್ಯೆಯರಿಗೆ ನೀಡಿ.
- ಹುಡುಗಿಯರೊಂದಿಗೆ ಒಬ್ಬರು ಅಥವಾ ಇಬ್ಬರು ಹುಡುಗರನ್ನು ಕೂರಿಸುವ ನಿಯಮವಿದೆ. ಅದರಲ್ಲಿ ಒಂದು ಮಗುವನ್ನು ಭೈರವ ಎಂದು ಮತ್ತಿಬ್ಬರು ಮಕ್ಕಳನ್ನು ಗಣಪತಿ ಎಂದು ಕರೆಯಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ