AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami 2024: ಅಯೋಧ್ಯೆ ರಾಮನಿಗೆ ಅರ್ಪಣೆಯಾಗಲಿದೆ 1,11,111 ಕೆಜಿ ಲಡ್ಡು

ರಾಮ ನವಮಿ ಈ ವರ್ಷ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಸರಿಸುಮಾರು 500 ವರ್ಷಗಳ ನಂತರ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿ ಉತ್ಸವ ನಡೆಯುತ್ತಿದೆ. ಹಾಗಾಗಿ ಇದು ಹೆಚ್ಚು ವಿಶೇಷವಾಗಿದೆ. ಇನ್ನು ಈ ಸಂಭ್ರಮದಲ್ಲಿ ರಾಮ ಮಂದಿರಕ್ಕೆ 1,11,111 ಕಿ. ಗ್ರಾಂ. ಗಳಷ್ಟು ಲಡ್ಡುಗಳು ಪ್ರಸಾದವಾಗಿ ಬರಲಿದ್ದು ಆ ಮೂಲಕ ಭವ್ಯ ಆಚರಣೆಗೆ ಸಾಕ್ಷಿಯಾಗಲಿದೆ.

Ram Navami 2024: ಅಯೋಧ್ಯೆ ರಾಮನಿಗೆ ಅರ್ಪಣೆಯಾಗಲಿದೆ 1,11,111 ಕೆಜಿ ಲಡ್ಡು
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 16, 2024 | 5:43 PM

Share

ಚೈತ್ರ ನವರಾತ್ರಿಯ ಒಂಬತ್ತನೇ ಅಥವಾ ಕೊನೆಯ ದಿನವಾದ ರಾಮ ನವಮಿ ಈ ವರ್ಷ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಸರಿಸುಮಾರು 500 ವರ್ಷಗಳ ನಂತರ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿ ಉತ್ಸವ ನಡೆಯುತ್ತಿದೆ. ಹಾಗಾಗಿ ಇದು ಹೆಚ್ಚು ವಿಶೇಷವಾಗಿದೆ. ಇನ್ನು ಈ ಸಂಭ್ರಮದಲ್ಲಿ ರಾಮ ಮಂದಿರಕ್ಕೆ 1,11,111 ಕಿ. ಗ್ರಾಂ. ಗಳಷ್ಟು ಲಡ್ಡುಗಳು ಪ್ರಸಾದವಾಗಿ ಬರಲಿದ್ದು ಆ ಮೂಲಕ ಭವ್ಯ ಆಚರಣೆಗೆ ಸಾಕ್ಷಿಯಾಗಲಿದೆ.

ರಾಮ ಮಂದಿರಕ್ಕೆ 1,11,111 ಕೆಜಿ ಲಡ್ಡುಗಳ ರವಾನೆ!

ರಾಮನವಮಿಯ ಸಂದರ್ಭದಲ್ಲಿ ದೇವ್ರಹ ಹನ್ಸ್ ಬಾಬಾ ಟ್ರಸ್ಟ್ ಎ. 17 ರಂದು ಅಯೋಧ್ಯೆಯ ರಾಮ ಮಂದಿರಕ್ಕೆ 1,11,111 ಕೆಜಿ ಲಡ್ಡುಗಳನ್ನು ಕಳುಹಿಸಲಿದೆ. ಈ ಟ್ರಸ್ಟ್ ಜ. 22ರ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾನಕ್ಕೆ 40,000 ಕೆಜಿ ಲಡ್ಡುಗಳನ್ನು ಕಳುಹಿಸಿತ್ತು. ತಿರುಪತಿ ಬಾಲಾಜಿ ದೇವಾಲಯ ಮತ್ತು ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಲಡ್ಡುಗಳನ್ನು ಕಳುಹಿಸುವುದು ವಾಡಿಕೆ ಎಂದು ದೇವ್ರಹ ಹನ್ಸ್ ಬಾಬಾ ಟ್ರಸ್ಟ್ ನ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ ಅವರು ಹೇಳಿದ್ದಾರೆ.

ಇದನ್ನೂ ಓದಿ : ಈ ನಿಗೂಢ ದೇವಾಲಯದಲ್ಲಿ ದೇವಿಯ ವಿಗ್ರಹ ದಿನಕ್ಕೆ ಮೂರು ಬಾರಿ ರೂಪ ಬದಲಾಯಿಸುತ್ತದೆ!

ರಾಮ ಲಲ್ಲಾಗೆ ಸುಮಾರು 56 ರೀತಿಯ ನೈವೇದ್ಯ!

ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ರಾಮ ನವಮಿಯ ಬಗ್ಗೆ ಮಾತನಾಡಿದ ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ದೇವಾಲಯದ ಟ್ರಸ್ಟ್ ಎಲ್ಲಾ ಸಿದ್ಧತೆಗಳನ್ನು ಮಾಡಿದೆ ಎಂದು ಹೇಳಿದರು. ರಾಮನವಮಿಯ ದಿನ ರಾಮ ಲಲ್ಲಾಗೆ ಸುಮಾರು 56 ರೀತಿಯ ನೈವೇದ್ಯ ಪ್ರಸಾದವನ್ನು ಸಹ ನೀಡಲಾಗುವುದು ಎಂದಿದ್ದಾರೆ.

ರಾಮ ಮಂದಿರ ಟ್ರಸ್ಟ್ ಸೋಮವಾರ ಭಕ್ತರಿಗೆ ರಾಮ ನವಮಿ ಆಚರಣೆಗಾಗಿ ಅಯೋಧ್ಯೆಗೆ ಭೇಟಿ ನೀಡದಂತೆ ಮನವಿ ಮಾಡಿದೆ. ಬದಲಿಗೆ ದೂರದರ್ಶನದಲ್ಲಿ ನೇರ ಪ್ರಸಾರವನ್ನು ವೀಕ್ಷಿಸಲು ಸೂಚಿಸಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:43 pm, Tue, 16 April 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!