Mysterious temple: ಈ ನಿಗೂಢ ದೇವಾಲಯದಲ್ಲಿ ದೇವಿಯ ವಿಗ್ರಹ ದಿನಕ್ಕೆ ಮೂರು ಬಾರಿ ರೂಪ ಬದಲಾಯಿಸುತ್ತದೆ!
ಕಾಳಿ ದೇವಿಗೆ ಅರ್ಪಿತವಾಗಿರುವ ದೇವಾಲಯವು ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ, ಶ್ರೀನಗರ ಮತ್ತು ರುದ್ರಪ್ರಯಾಗ್ ನಡುವೆ ಅಲಕನಂದಾ ನದಿಯ ದಡದಲ್ಲಿದೆ. ಈ ಮಂದಿರವು ಶ್ರೀನಗರದಿಂದ 14 ಕಿ. ಮೀ. ದೂರದಲ್ಲಿದೆ. ಈ ದೇವಿಯ ಪವಾಡಗಳನ್ನು ನೋಡಲು ಭಕ್ತರು ಪ್ರತಿದಿನ ಈ ದೇವಾಲಯಕ್ಕೆ ಬರುತ್ತಾರೆ.
ಭಾರತವು ದೇವಾಲಯಗಳ ಬೀಡು. ಅನೇಕ ರೀತಿಯ ದೇವಾಲಯಗಳು ಇಲ್ಲಿವೆ. ಕೆಲವು ಮಂದಿರಗಳು ಅದರ ವೈಶಿಷ್ಟ್ಯಗಳಿಗೆ ಸುದ್ದಿಯಾಗಿದ್ದರೆ ಇನ್ನು ಕೆಲವು ಪವಾಡಗಳಿಗೆ ಹೆಸರುವಾಸಿಯಾಗಿವೆ, ಇಂತಹ ಒಂದು ಪವಾಡಸದೃಶ, ಕಾಳಿ ದೇವಿಗೆ ಅರ್ಪಿತವಾಗಿರುವ ದೇವಾಲಯವು ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ, ಶ್ರೀನಗರ ಮತ್ತು ರುದ್ರಪ್ರಯಾಗ್ ನಡುವೆ ಅಲಕನಂದಾ ನದಿಯ ದಡದಲ್ಲಿದೆ. ಈ ಮಂದಿರವು ಶ್ರೀನಗರದಿಂದ 14 ಕಿ. ಮೀ. ದೂರದಲ್ಲಿದೆ. ಈ ದೇವಿಯ ಪವಾಡಗಳನ್ನು ನೋಡಲು ಭಕ್ತರು ಪ್ರತಿದಿನ ಈ ದೇವಾಲಯಕ್ಕೆ ಬರುತ್ತಾರೆ. ಇಲ್ಲಿರುವ ಧಾರಿ ದೇವಿಯು ಉತ್ತರಾಖಂಡವನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ, ಈ ದೇವಿಯನ್ನು ಪರ್ವತ ಮತ್ತು ಯಾತ್ರಾರ್ಥಿಗಳನ್ನು ರಕ್ಷಿಸುವ ದೇವತೆ ಎಂದು ಹೇಳಲಾಗುತ್ತದೆ. ಧಾರಿ ದೇವಿಯ ವಿಗ್ರಹದ ಮೇಲಿನ ಅರ್ಧ ಭಾಗವು ಈ ದೇವಾಲಯದಲ್ಲಿದೆ, ಆದರೆ ವಿಗ್ರಹದ ಕೆಳಗಿನ ಅರ್ಧ ಭಾಗ ಕಾಳಿಮಠದಲ್ಲಿದೆ, ಅಲ್ಲಿ ಅವಳನ್ನು ಕಾಳಿ ದೇವಿಯ ರೂಪವಾಗಿ ಪೂಜಿಸಲಾಗುತ್ತದೆ ಎಂಬ ಪ್ರತೀತಿ ಇದೆ.
ಈ ವಿಗ್ರಹ ದಿನಕ್ಕೆ ಮೂರು ಬಾರಿ ರೂಪ ಬದಲಾಯಿಸುತ್ತದೆ!
ನಂಬಿಕೆಯ ಪ್ರಕಾರ, ಈ ದೇವಾಲಯದಲ್ಲಿರುವ ಮಾತೆ ಧಾರಿಯ ವಿಗ್ರಹವು ದಿನಕ್ಕೆ ಮೂರು ಬಾರಿ ತನ್ನ ರೂಪವನ್ನು ಬದಲಾಯಿಸುತ್ತದೆ. ಈ ದೇವಿಯ ವಿಗ್ರಹವು ಬೆಳಿಗ್ಗೆ ಹುಡುಗಿಯಂತೆ, ನಂತರ ಮಧ್ಯಾಹ್ನ ಚಿಕ್ಕ ಹುಡುಗಿಯಂತೆ ಮತ್ತು ಸಂಜೆ ಮುದುಕಿಯಂತೆ ಕಾಣುತ್ತದೆ. ವಿಗ್ರಹ ದಿನಕ್ಕೆ ಮೂರು ಬಾರಿ ರೂಪ ಬದಲಾಯಿಸುವ ದೃಶ್ಯವು ನಿಜವಾಗಿಯೂ ಆಶ್ಚರ್ಯಕರವಾಗಿರುತ್ತದೆ.
ದೇವಾಲಯದ ಇತಿಹಾಸವೇನು?
ದಂತಕಥೆಯ ಪ್ರಕಾರ, ಒಮ್ಮೆ ಮಾತೆಯ ದೇವಾಲಯವು ತೀವ್ರ ಪ್ರವಾಹದಿಂದ ಕೊಚ್ಚಿ ಹೋಯಿತು. ಬಳಿಕ ಧರೋ ಎಂಬ ಗ್ರಾಮದ ಬಳಿ ಬಂಡೆಗೆ ಡಿಕ್ಕಿ ಹೊಡೆದು ಪ್ರತಿಮೆ ಅಲ್ಲಿಯೇ ನಿಂತಿತು. ಆಗ ಆ ವಿಗ್ರಹದಿಂದ ಒಂದು ದೈವಿಕ ಧ್ವನಿ ಕೇಳಿಸಿತು ಎಂದು ಹೇಳಲಾಗುತ್ತದೆ, ಇದು ಗ್ರಾಮಸ್ಥರಿಗೆ ವಿಗ್ರಹವನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ಸೂಚನೆ ನೀಡಿತು. ಇದರ ನಂತರ, ಧರೋ ಗ್ರಾಮದ ಜನರು ಒಟ್ಟಾಗಿ ಅಲ್ಲಿ ಮಾತಾ ದೇವಾಲಯವನ್ನು ನಿರ್ಮಿಸಿದರು. ಪುರೋಹಿತರ ಪ್ರಕಾರ, ದ್ವಾಪರಯುಗದಲ್ಲಿಯೇ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಈ ತಾಯಿ ಅಲ್ಲಿನ ಜನರನ್ನು ರಕ್ಷಿಸುತ್ತಾ ಬಂದಿದ್ದಾಳಂತೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ, ಎಲ್ಲೆಲ್ಲಿ ನಡೆದಿದೆ ಈ ಪ್ರಯೋಗ?
ದೇವಾಲಯ ನೆಲಸಮಗೊಳಿಸಿದಾಗ ಬಂತು ಭೀಕರ ಪ್ರವಾಹ!
2013 ರಲ್ಲಿ ಮಾತೆ ಧಾರಿ ದೇವಾಲಯವನ್ನು ನೆಲಸಮಗೊಳಿಸಲಾಯಿತು ಬಳಿಕ ಅಲ್ಲಿದ್ದ ವಿಗ್ರಹವನ್ನು ಮೂಲ ಸ್ಥಾನದಿಂದ ತೆಗೆಯಲಾಯಿತು. ಈ ಕಾರಣದಿಂದಾಗಿ 2013 ರಲ್ಲಿ ಉತ್ತರಾಖಂಡದಲ್ಲಿ ಭೀಕರ ಪ್ರವಾಹ ಸಂಭವಿಸಿತು, ಇದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ದೇವಿಯ ಪ್ರತಿಮೆಯನ್ನು 2013 ಜೂನ್ 16ರ ಸಂಜೆ ತೆಗೆಯಲಾಯಿತು ಅದಾದ ಕೆಲವೇ ಗಂಟೆಗಳ ನಂತರ ಪ್ರವಾಹ ದುರಂತ ರಾಜ್ಯವನ್ನು ಅಪ್ಪಳಿಸಿತು. ನಂತರ ಅದೇ ಸ್ಥಳದಲ್ಲಿ ಈ ದೇವಾಲಯವನ್ನು ಮತ್ತೆ ನಿರ್ಮಿಸಲಾಯಿತು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ