Chanakya Niti: ನಿಮ್ಮ ಮಕ್ಕಳನ್ನು ಯೋಗ್ಯರನ್ನಾಗಿಸಲು ಬಯಸುವುದಾದರೆ ಚಾಣಕ್ಯ ಹೇಳುವ ಈ ಮಾತುಗಳನ್ನು ಕೇಳಿ

| Updated By: shruti hegde

Updated on: Nov 05, 2021 | 9:06 AM

ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ಅನುಸರಿಸುತ್ತಾರೆ. ಪೋಷಕರು ಮಕ್ಕಳ ಮುಂದೆ ಹೇಗೆ ನಡೆದುಕೊಳ್ಳುತ್ತಾರೆ ಅದನ್ನೇ ಅವರು ಅನುಸರಿಸುತ್ತಾರೆ. ಇದನ್ನು ಎಲ್ಲ ಅಪ್ಪ-ಅಮ್ಮಂದಿರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಮಕ್ಕಳ ಮುಂದೆ ಅಪ್ಪ-ಅಮ್ಮ ಪರಸ್ಪರ ಗೌರವಾನ್ವಿತರಾಗಿ ನಡೆದುಕೊಳ್ಳಬೇಕು.

Chanakya Niti: ನಿಮ್ಮ ಮಕ್ಕಳನ್ನು ಯೋಗ್ಯರನ್ನಾಗಿಸಲು ಬಯಸುವುದಾದರೆ ಚಾಣಕ್ಯ ಹೇಳುವ ಈ ಮಾತುಗಳನ್ನು ಕೇಳಿ
ನಿಮ್ಮ ಮಕ್ಕಳನ್ನು ಯೋಗ್ಯರನ್ನಾಗಿಸಲು ಬಯಸುವುದಾದರೆ ಆಚಾರ್ಯ ಚಾಣಕ್ಯ ಹೇಳುವ ಈ ಮಾತುಗಳನ್ನು ಕೇಳಿ
Follow us on

ನಿಮ್ಮ ಪೀಳಿಗೆಯನ್ನು ಯೋಗ್ಯರನ್ನಾಗಿಸಲು ಬಯಸುವುದಾದರೆ ಆಚಾರ್ಯ ಚಾಣಕ್ಯ ಹೇಳುವ ಈ ಮೂರು ಮಾತುಗಳನ್ನು ಪಾಲಿಸಿ ನೋಡಿ. ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವರ ಅಪ್ಪ-ಅಮ್ಮಂದಿರ ಜವಾಬ್ದಾರಿ ತುಂಬಾ ದೊಡ್ಡದಿರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ! ಜೊತೆಗೆ ಇದರ ಬಗ್ಗೆ ಇನ್ನೂ ಅನೇಕ ಮಹತ್ವಪೂರ್ಣ ಸಂಗತಿಗಳನ್ನು ಹೇಳಿದ್ದಾರೆ. ಈ ಮೂಲಭೂತ ಸಂಗತಿಗಳನ್ನು ಆಲಿಸಿ, ಪಾಲಿಸಿದ್ದೇ ಆದರೆ ನಿಮ್ಮ ಪೀಳಿಗೆಯವರು ಯೋಗ್ಯರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಯಾವುದೇ ಅಪ್ಪ-ಅಮ್ಮ ತಮ್ಮ ಮಕ್ಕಳು ಭವಿಷ್ಯದಲ್ಲಿ ಕುಟುಂಬದ ಹೆಸರನ್ನು ಉಜ್ವಲಗೊಳಿಸುವಂತಾಗಲಿ ಎಂದು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಜವಾಬ್ದಾರಿಯನ್ನು ಮೊದಲು ಇವರೇ ತಮ್ಮ ಹೆಗಲ ಮೇಲೆ ಹೊತ್ತೊಕೊಳ್ಳಬೇಕು. ಅದನ್ನ ಸರಿಯಾಗಿ ನಿಭಾಯಿಸಬೇಕು. ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ? ಹಾಗಾಗಿ ಅಪ್ಪ-ಅಮ್ಮನ ಮೇಲೆ ಗುರುತರ ಜವಾಬ್ದಾರಿ ಇರುತ್ತದೆ. ಅಪ್ಪ-ಅಮ್ಮನಿಂದಲೇ ಮಕ್ಕಳಿಗೆ ಸಂಸ್ಕಾರ ಪ್ರಾಪ್ತಿಯಾಗುವುದು.

ಮಕ್ಕಳ ಭವಿಷ್ಯಕ್ಕೆ ಉತ್ತಮ ಬುನಾದಿ ಹಾಕಿ, ಸರಿಯಾದ ಕಾಳಜಿ ವಹಿಸಿದ್ದೇ ಆದರೆ ನಿಶ್ಚಿತವಾಗಿಯೂ ನಿಮ್ಮ ಮಕ್ಕಳು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಮುಂದೆ ಬರುತ್ತಾರೆ. ಈ ನಿಟ್ಟಿನಲ್ಲಿ ಅಪ್ಪ-ಅಮ್ಮ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚಾಣಕ್ಯ ಹೇಳಿರುವ ಈ ಮಾತುಗಳನ್ನು ಎಲ್ಲ ಅಪ್ಪ-ಅಮ್ಮಂದಿರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.

1. ಮನೆಯ ವಾತಾವರಣ:
ಯಾವುದೇ ಮಗು ತನ್ನ ಸುತ್ತಮುತ್ತಲ ಪರಿಸರ, ವಾತಾವರಣವನ್ನು ನೋಡಿ ಅದರಿಂದಲೇ ಸಾಕಷ್ಟು ಕಲಿಯುತ್ತದೆ. ನೀವು ಎಷ್ಟೇ ಶ್ರಮಪಟ್ಟು ಹೇಳಿಕೊಟ್ಟರೂ ಮಕ್ಕಳು ತಮ್ಮ ಸುತ್ತಮುತ್ತಲ ವಾತಾವರಣದಿಂದ ಬೇಗನೇ ಕಲಿಯುತ್ತಾರೆ. ನಿಮ್ಮ ಮನೆಯಲ್ಲಿ ಜಗಳ ಕಾಯುವುದು ಮತ್ತು ಅಶಾಂತಿ ವಾತಾವರಣ ನಿರ್ಮಾಣವಾಗಿದ್ದರೆ ಖಂಡಿತವಾಗಿಯೂ ನಿಮ್ಮ ಮಗು ಸಹ ಕಿರಿಕಿರಿ ಸ್ವಭಾವದ, ಮುಂಗೋಪಿ ಮಗುವಾಗಿ ಬೆಳೆಯುತ್ತದೆ. ಹಾಗಾಗಿ ಮನೆಯ ವಾತಾವರಣವನ್ನು ಶಾಂತವಾಘಿಟ್ಟುಕೊಳ್ಳುವುದು ಮಾತಾ ಪಿತರ ಆದ್ಯ ಕರ್ತವ್ಯವಾಗಬೇಕು.

2. ಅಪ್ಪ-ಅಮ್ಮನ ಅನುಕರಣೆ:
ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ಅನುಸರಿಸುತ್ತಾರೆ. ಪೋಷಕರು ಮಕ್ಕಳ ಮುಂದೆ ಹೇಗೆ ನಡೆದುಕೊಳ್ಳುತ್ತಾರೆ ಅದನ್ನೇ ಅವರು ಅನುಸರಿಸುತ್ತಾರೆ. ಇದನ್ನು ಎಲ್ಲ ಅಪ್ಪ-ಅಮ್ಮಂದಿರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಮಕ್ಕಳ ಮುಂದೆ ಅಪ್ಪ-ಅಮ್ಮ ಪರಸ್ಪರ ಗೌರವಾನ್ವಿತರಾಗಿ ನಡೆದುಕೊಳ್ಳಬೇಕು.

3. ಮಕ್ಕಳನ್ನು ಪ್ರೇರಣೆಗೊಳಿಸಬೇಕು, ಅವರಲ್ಲಿ ಉತ್ಸಾಹ ತುಂಬಬೇಕು:
ಒಬ್ಬೊಬ್ಬ ಮಗುವಿನಲ್ಲೂ ಒಂದೊಂದು ವಿಶೇಷ ಪ್ರತಿಭೆ ಇರುತ್ತದೆ. ವಿಶೇಷ ಕ್ಷಮತೆ ಇರುತ್ತೆ. ಅದನ್ನು ಉತ್ತೇಜಿಸಿ, ಪ್ರೋತ್ಸಾಹಿಸಲು ಅವರಲ್ಲಿ ಉತ್ಸಾಹ ತುಂಬಬೇಕು. ಇದರಲ್ಲಿ ಬೇರೆಯ ಮಕ್ಕಳೊಂದಿಗೆ ಅವರನ್ನು ಹೋಲಿಕೆ ಮಾಡಬಾರದು. ಆ ಮಗು ಅಷ್ಟು ಮಾರ್ಕ್ಸ್​​ ತೆಗೆದುಕೊಂಡಿದೆ ನೋಡು. ನೀನು ದಡ್ಡ ಎಂದೆಲ್ಲಾ ಮೂದಲಿಸಬಾರದು.

ನಿಮ್ಮ ಮಗು ಬಯಸಿದ ವಿಷಯದಲ್ಲಿ ವ್ಯಾಸಂಗ, ಪರಿಣತಿ ಪಡೆಯಲಿ. ಅದಕ್ಕೆ ಬಾಧಕರಾಗಬೇಡಿ. ಇದರಿಂದ ಅವರು ಜೀವನದಲ್ಲಿ ಏನನ್ನೇ ಆಗಲಿ ಸುಲಭವಾಗಿ, ಸ್ವ ಸಾಮರ್ಥ್ಯದಿಂದ ನಿಭಾಯಿಸುವ ಛಾತಿ ಬೆಳೆಸಿಕೊಳ್ಳುತ್ತಾರೆ. ಅವರಿಗೆ ಯಾವುದೇ ಆಗಲಿ ಅಸಂಭವ ಎನಿಸುವುದಿಲ್ಲ. ಏನನ್ನೂ ಬೇಕಾದರೂ ಸಾಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ. ಆದರೆ ಇದೆಲ್ಲ ಅಪ್ಪ-ಅಮ್ಮರಾಗಿ ಇದುವರೆಗೂ ಚಾಣಕ್ಯ ಹೇಳಿದಂತೆ ನಿಮ್ಮ ಕೈಯಲ್ಲೇ ಇರುತ್ತದೆ ಎಂಬುದನ್ನು ಮರೆಯಬೇಡಿ.

(chanakya niti in kannada to make your children worthy successful then follow 3 things taught by acharya chanakya)