ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸರಾಗಿದ್ದವರು. ತಮ್ಮ ಜೀವನ ಅನುಭವಗಳ ಮೂಲಕ ಜನರಿಗೆ ತಿಳುವಳಿಕೆಯನ್ನು ನೀಡಿದ್ದಾರೆ. ಚಾಣಕ್ಯರು ಶಿಕ್ಷಕರಾಗಿದ್ದವರು. ಅರ್ಥಶಾಸ್ತ್ರವನ್ನು ಮಕ್ಕಳಿಗೆ ಬೋಧನೆ ಮಾಡಿದ್ದಾರೆ. ಪ್ರಸ್ತುತದಲ್ಲಿಯೂ ಸಹಾಯವಾಗುವಂತೆ ಜನರಿಗೆ ಜೀವನದ ಕ್ರಮಗಳ ಬಗ್ಗೆ ನೀತಿ ಪಾಠವನ್ನು ಸಾರಿದ್ದಾರೆ. ಆರೋಗ್ಯವೇ ಭಾಗ್ಯ ಎಂಬಂತೆ ಉತ್ತಮ ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಿರುವಾಗ ನಾವು ಆರೋಗ್ಯವಾಗಿರಲು ಏನು ಸೇವಿಸಬೇಕು ಎಂಬುದರ ಬಗ್ಗೆ ಚಾಣಕ್ಯ ನೀತಿ ಹೇಳುತ್ತದೆ.
ಇಂದಿಗೂ ಜನರು ಚಾಣಕ್ಯರ ನೀತಿ ಪಾಠವನ್ನು ಅನುಸರಿಸುತ್ತಾರೆ. ನಿಯಮಗಳನ್ನು ಪಾಲಿಸುವ ಮೂಲಕ ಜನರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಆರೋಗ್ಯವೂ ಕೂಡಾ ಮನುಷ್ಯನ ಜೀವನದಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯು ಆರೋಗ್ಯವಾಗಿದ್ದರೆ ಆತನು ಯಾವುದೇ ಅಡಚಣೆಗಳಿಲ್ಲದೇ ತನ್ನ ಸಾಧನೆಯತ್ತ ಸಾಗಲು ಸಾಧ್ಯ. ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚಾರ್ಯ ಚಾಣಕ್ಯರು ಕೆಲವು ವಿಷಯಗಳನ್ನು ತಿಳಿಸಿದ್ದಾರೆ.
ಆಚಾರ ಚಾಣಕ್ಯರ ಪ್ರಕಾರ ತಿಂದ ಆಹಾರವು ಜೀರ್ಣವಾಗದಿದ್ದಾಗ ಕುಡಿಯುವ ನೀರು ಔಷಧಿಯಂತೆ ಕೆಲಸ ವಿರ್ವಹಿಸುತ್ತದೆ. ಆಹಾರ ಸೇವಿಸಿದ 1 ರಿಂದ 2 ಗಂಟೆಯ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಊಟದ ನಡುವೆ ಸ್ವಲ್ಪ ನೀರು ಕುಡಿಯುವುದು ಅಮೃತದಂತೆ, ಆಹಾರ ಸೇವಿಸಿದ ತಕ್ಷಣವೇ ಹೊಟ್ಟೆ ತುಂಬ ನೀರು ಕುಡಿಯುವುದು ಒಳಿತಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಚಾಣಕ್ಯರ ಪ್ರಕಾರ, ಉತ್ತಮ ಆರೋಗ್ಯಕ್ಕಾಗಿ ಮತ್ತು ರೋಗಗಳಿಂದ ದೂರವಿರಲು ವಾರಕ್ಕೊಮ್ಮೆ ಮಸಾಜ್ ಮಾಡಬೇಕು. ದೇಹದಲ್ಲಿನ ಕೊಳಕು, ಧೂಳಿನಾಂಶಗಳು ನಾಶವಾಗುತ್ತವೆ. ಮಸಾಜ್ ಮಾಡಿದ ಬಳಿಕ ಸ್ನಾನ ಮಾಡುವುದು ಉತ್ತಮ ಎಂದು ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ:
Chanakya Niti: ಈ ರೀತಿಯ ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು- ಚಾಣಕ್ಯ ನೀತಿ