AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಹಣ ನಿರ್ವಹಣೆಯ 5 ವಿಷಯಗಳನ್ನು ತಿಳಿದವರು ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸುವುದಿಲ್ಲ – ಚಾಣಕ್ಯ ನೀತಿ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರ ಪ್ರಕಾರ ಹಣವನ್ನು ಖರ್ಚು ಮಾಡುವಾಗ ಯೋಚಿಸಬೇಕು. ಯಾರು ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಾರೋ ಅವರಲ್ಲಿ ದೀರ್ಘಕಾಲದವರೆಗೆ ಹಣ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಾಗ ಹಣವನ್ನು ಉಳಿಸಿ.

Chanakya Niti: ಹಣ ನಿರ್ವಹಣೆಯ 5 ವಿಷಯಗಳನ್ನು ತಿಳಿದವರು ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸುವುದಿಲ್ಲ – ಚಾಣಕ್ಯ ನೀತಿ
ಚಾಣಕ್ಯ
TV9 Web
| Edited By: |

Updated on:Jul 31, 2021 | 8:10 AM

Share

ಆಚಾರ್ಯ ಚಾಣಕ್ಯರು ತಮ್ಮ ಅನುಭದ ಮೂಲಕ ಚಾಣಕ್ಯ ನೀತಿಯಲ್ಲಿ ಕೆಲವು ಸಮಹೆಗಳನ್ನು ನೀಡಿದ್ದಾರೆ. ಅವರು ಮಾತುಗಳು ಈಗಿನ ಕಾಲದಲ್ಲಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಒಳ್ಳೆಯ ಸಂದೇಶವಾಗಿದೆ. ಚಾಣಕ್ಯರು(Acharya Chanakya) ಹಣ ನಿರ್ವಹಣೆಯ ಬಗೆಗೆ ಹೇಳಿದ್ದಾರೆ. ಹಣ(Money) ಅಥವಾ ಸಂಪತ್ತು ವ್ಯಕ್ತಿಯ ನಿಜವಾದ ಸ್ನೇಹಿತ ಎಂದು ಹೇಳಿದ್ದಾರೆ. ಹಣದ ಕುರಿತಾಗಿ ಈ ಕೆಲವು ವಿಷಯಗಳನ್ನು ತಿಳಿದರೆ ಎಂದಿಗೂ ಆರ್ಥಿಕ ಬಿಕ್ಕಟ್ಟು ಬರುವುದಿಲ್ಲ ಎಂದು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ ಹಣವನ್ನು ಖರ್ಚು ಮಾಡುವಾಗ ಯೋಚಿಸಬೇಕು. ಯಾರು ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಾರೋ ಅವರಲ್ಲಿ ದೀರ್ಘಕಾಲದವರೆಗೆ ಹಣ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಾಗ ಹಣವನ್ನು ಉಳಿಸಿ. ಇದರಿಂದ ಕಷ್ಟದ ಸಮಯದಲ್ಲಿ ನಿಮಗೆ ಸಹಾಯವಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ನೀವು ಜೀವನದಲ್ಲಿ ಹಣ ಗಳಿಸಲು ಬಯಸಿದರೆ ಯಾವಾಗಲೂ ನಿಮ್ಮ ಗುರಿಯ ಬಗ್ಗೆ ಗಮನವಿರಲಿ. ನಿಮ್ಮ ಗುರಿಯು ನಿಮ್ಮ ಸಂಪತ್ತಿನ ಸಾಧನವಾಗಿರಲಿ. ಹಾಗಿರುವಾಗ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ ಎಂಬುದರ ಕುರಿತಾದ ಸಂಪೂರ್ಣ ತಿಳುವಳಿಕೆಯಿರಲಿ. ಆ ಮೂಲಕ ನೀವು ಶ್ರದ್ಧೆಯಿಂದ ಕೆಲಸ ಮಾಡಬಹುದು.

ಉದ್ಯೋಗದ ಹಾದಿ ಹಿಡಿದರೆ ಮಾತ್ರ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆದ್ದರಿಂದ ನೀವು ಉದ್ಯೋಗದ ಬಗ್ಗೆ ಚಿಂತಿಸಬೇಕು. ನಿಮ್ಮ ಸಾಧನೆಯ ಬಗ್ಗೆ ಯೋಚಿಸಿದರೆ ಎಂದಿಗೂ ಹಣದ ಕುರಿತಾಗಿ ಚಿಂತಿಸುವುದಿಲ್ಲ. ಸಾಧನೆಯ ಗುರಿ ತಲುಪಿದರೆ ಹಣವೇ ನಿಮ್ಮನ್ನು ಅರಸಿ ಬರುತ್ತದೆ.

ಚಾಣಕ್ಯರ ಪ್ರಕಾರ ವ್ಯಕ್ತಿಯು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಸಂಪಾದಿಸಬೇಕು. ತಪ್ಪು ಹಾದಿ ಹಿಡಿದು ಗಳಿಸುವ ಹಣ ಎಂದಿಗೂ ಶ್ರೇಯಸ್ಸು ತರುವುದಿಲ್ಲ. ಹೆಚ್ಚು ತೊಂದರೆಗೆ ಸಿಲುಕುವಂತೆ ಮಾಡುತ್ತದೆ. ಹಾಗಿರುವಾಗ ಸತ್ಯದ ಹಾದಿಯಲ್ಲಿ, ಶ್ರಮವಹಿಸಿ ಕೆಲಸ ಮಾಡಿದೆ ಸದಾ ಕಾಲ ಹಣ ನಿಮ್ಮ ಕೈಯಲ್ಲಿರುತ್ತದೆ.

ನಿಮ್ಮ ಹಣ ಯಾವಾಗಲು ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿರಬೇಕು. ಇತರರ ವಶದಲ್ಲಿರುವ ಹಣ ಎಂದಿಗೂ ನಿಮ್ಮದಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಹಾಗಾಗಿ ನೀವು ಸಂಪಾದಿಸುವ ಹಣ ಪ್ರಾಮಾಣಿಕವಾಗಿರಲಿ.

ಇದನ್ನೂ ಓದಿ:

Chanakya Niti: ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗಿತ್ತಿದ್ದೀರಾ? ಆಚಾರ್ಯ ಚಾಣಕ್ಯ ಹೇಳಿರುವ ಈ 3 ವಿಷಯಗಳನ್ನು ಎಂದಿಗೂ ಮರೆಯದಿರಿ

Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ

(People are these 5 things about money they will be not have crisis of finance in life)

Published On - 8:07 am, Sat, 31 July 21

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು