AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗಿತ್ತಿದ್ದೀರಾ? ಆಚಾರ್ಯ ಚಾಣಕ್ಯ ಹೇಳಿರುವ ಈ 3 ವಿಷಯಗಳನ್ನು ಎಂದಿಗೂ ಮರೆಯದಿರಿ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಿದರು. ಯಾವಾಗಲೂ ಧೈರ್ಯದ ಹಾದಿಯಲ್ಲಿಯೇ ನಡೆಯುವಂತೆ ಜನರನ್ನು ಪ್ರೇರೇಪಿಸಿದರು. ಮಾನವ ಕಲ್ಯಾಣವಾಗದ ಕೆಲಸ ಎಂದಿಗೂ ವ್ಯರ್ಥ, ಆ ಕೆಲಸಗಳು ಶಾಶ್ವತವೇ ಅಲ್ಲ ಎನ್ನುತ್ತಾರೆ ಚಾಣಕ್ಯರು.

Chanakya Niti: ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗಿತ್ತಿದ್ದೀರಾ? ಆಚಾರ್ಯ ಚಾಣಕ್ಯ ಹೇಳಿರುವ ಈ 3 ವಿಷಯಗಳನ್ನು ಎಂದಿಗೂ ಮರೆಯದಿರಿ
ಚಾಣಕ್ಯ ನೀತಿ
TV9 Web
| Edited By: |

Updated on:Jul 29, 2021 | 12:39 PM

Share

ಆಚಾರ್ಯ ಚಾಣಕ್ಯ ಜೀವನದಲ್ಲಿ ನಡೆಯುವ ಅದೆಷ್ಟೋ ವಿಷಯಗಳ ಕುರಿತಾಗಿ ನೀತಿ ಪಾಠವನ್ನು ಸಾರಿದ್ದಾರೆ. ತಮ್ಮ ಅನುಭವದ ಮೂಲಕ ಜೀವನವನ್ನು ಸಾಗಿಸುವ ರೀತಿಯನ್ನು ತಿಳಿಸಿದ್ದಾರೆ. ಚಾಣಕ್ಯರು(Acharya Chanakya) ತಮ್ಮ ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಎದುರಿಸಿದರು. ಕೆಲವು ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಎದುರಾಗಿತ್ತು. ಅಂಥಹ ಕಷ್ಟದ ಸಂದರ್ಭದಲ್ಲಿ ತಾಳ್ಮೆಯಿಂದ, ಸವಾಲುಗಳನ್ನು ಎದುರಿಸಿದರು.

ಆಚಾರ್ಯ ಚಾಣಕ್ಯ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಿದರು. ಯಾವಾಗಲೂ ಧೈರ್ಯದ ಹಾದಿಯಲ್ಲಿಯೇ ನಡೆಯುವಂತೆ ಜನರನ್ನು ಪ್ರೇರೇಪಿಸಿದರು. ಮಾನವ ಕಲ್ಯಾಣವಾಗದ ಕೆಲಸ ಎಂದಿಗೂ ವ್ಯರ್ಥ, ಆ ಕೆಲಸಗಳು ಶಾಶ್ವತವೇ ಅಲ್ಲ ಎನ್ನುತ್ತಾರೆ ಚಾಣಕ್ಯರು. ಕೆಟ್ಟ ಕಾರ್ಯಗಳಿಂದ ದೂರವಿರಿ ಎಂದು ಚಾಣಕ್ಯರು ಹೇಳಿದ್ದಾರೆ. ವೈಫಲ್ಯಗಳನ್ನು ತಪ್ಪಿಸಲು ಯಾವಾಗಲೂ ಈ 3 ವಿಷಯಗಳಿಂದ ದೂರವಿರಿ ಎಂದು ತಿಳಿಸಿದ್ದಾರೆ.

ಈ ಕೆಲವು ವಿಷಯಗಳಿಂದ ದೂರವಿರಿ: ಸುಳ್ಳು ಹೇಳುವ ಮೂಲಕ ಲಾಭ ಪಡೆಯುವುದು ಸುಳ್ಳು ಹೇಳುತ್ತಾ ತಮ್ಮ ಶ್ರೇಯಸ್ಸನ್ನು ಬಯಸುವ ವ್ಯಕ್ತಿ ಎಂದಿಗೂ ಗೌರವವನ್ನು ಪಡೆಯುವುದಿಲ್ಲ. ಸುಳ್ಳು ಹೇಳುವ ಮೂಲಕ ನಿಮ್ಮ ಕೆಲಸಗಳನ್ನು ಕೆಲವು ದಿನಗಳು ಮಾತ್ರ ಮುಂದುವರೆಸಬಹುದು. ಆದರೆ ಆದರೆ ಸತ್ಯ ತಿಳಿಯುವ ದಿನ ಬಂದೇ ಬರುತ್ತದೆ. ಆಗ ಎಲ್ಲರ ಮುಂದೆ ಅವಮಾನಕ್ಕೀಡಾಗುತ್ತೀರಿ ಎಂದು ಆಚಾರ್ಯ ಚಾಣಕ್ಯ ನೀತಿ ತಿಳಿಸುತ್ತದೆ.

ಇತರರಿಗೆ ಕೆಡುಕು ಮಾಡುವುದು ಇತರರರಿಗೆ ಕೆಟ್ಟದ್ದು ಮಾಡುತ್ತಲೇ ನಗುವವರು ತುಂಬಾ ಜನರಿದ್ದಾರೆ. ಆದರೆ ಬೇರೆಯರಿಗೆ ಕೆಟ್ಟದ್ದನ್ನು ಮಾಡುತ್ತಾ ಜೀವಿಸುವ ವ್ಯಕ್ತಿ ಎಂದಿಗೂ ಬದುಕಿನಲ್ಲಿ ಗೌರವ ಪಡೆಯಲು ಸಾಧ್ಯವಿಲ್ಲ. ಇತರರಿಗೆ ಕೆಟ್ಟದ್ದನ್ನು ಮಾಡುತ್ತಲೇ ಇರುವುದರಿಂದ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ. ಜತೆಗೆ ಟೀಕೆಗೆ ಒಳಗಾಗುತ್ತೀರಿ ಎಂದು ಚಾಣಕ್ಯರು ತಿಳಿಸಿದ್ದಾರೆ.

ಇನ್ನೊಬ್ಬರಿಗೆ ಕೆಡುಕುಂಟಾಗಲು ಹಣ ವ್ಯರ್ಥ ಮಾಡುವುದು ಹಣವು ನಿಮ್ಮ ಜೀವನಕ್ಕಾಗಿ, ನಿಮ್ಮ ಕಷ್ಟದ ಸಂದರ್ಭದಲ್ಲಿ ನೆರವಾಗಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಕೆಡುಕು ಬಯಸಲು ನಿಮ್ಮ ಹಣವನ್ನು ವ್ಯರ್ಥ ಮಾಡಿದರೆ ಜೀವನ ಪೂರ್ತಿ ನೀವು ಕಷ್ಟದಲ್ಲಿ ಕೊರಗಬೇಕಾಗುತ್ತದೆ. ಹಣವನ್ನು ಸಂಗ್ರಹಿಸಬೇಕು, ಅದನ್ನು ಧಾರ್ಮಿಕ ಕಾರ್ಯಗಳಲ್ಲಿ ಬಳಸಬೇಕು. ಆದರೆ ಬೇರೆಯವರಿಗೆ ಹಾನಿ ಮಾಡಲು ಬಳಸುತ್ತಾರೆ. ಅಂಥವರು ಎಂದಿಗೂ ಸಮಾಜದಲ್ಲಿ ಗೌರವವನ್ನು ಕಾಣುವುದಿಲ್ಲ. ಅಂಥವರೊಡನೆ ಸ್ನೇಹ ಬೆಳೆಸಲು ಜನರು ಹಿಂದೇಟು ಹಾಕುತ್ತಾರೆ.

ಇದನ್ನೂ ಓದಿ:

Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ

Chanakya Niti: ನಿಮ್ಮ ಈ ತಪ್ಪು ಜೀವನಪೂರ್ತಿ ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಚ್ಚರ!- ಚಾಣಕ್ಯ ನೀತಿ

Published On - 12:32 pm, Thu, 29 July 21