Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ

ಚಾಣಕ್ಯ ನೀತಿ: ನಂಬಿಕಸ್ಥನಲ್ಲಿರುವ ಕೆಲವು ಗುಣಗಳನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಕೆಲವು ಗುಣಗಳಿರುವ ವ್ಯಕ್ತಿ ನಿಜವಾಗಿಯೂ ನಂಬಿಕಸ್ಥನಾಗಿರುತ್ತಾನೆ. ನೀವು ನಿಜವಾಗಿಯೂ ನಂಬಿಕಸ್ಥರಾಗಿದ್ದರೆ ಈ 4 ಗುಣಗಳಿದೆಯೇ ಪರೀಕ್ಷಿಸಿಕೊಳ್ಳಿ.

Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ
ಚಾಣಕ್ಯ ನೀತಿ
Follow us
TV9 Web
| Updated By: shruti hegde

Updated on: Jul 25, 2021 | 11:05 AM

ಕೆಲವರು ಹೆಚ್ಚು ಪ್ರೀತಿಯಿಂದ ಜನರೊಡನೆ ಬೆರೆಯುತ್ತಾರೆ. ಅಷ್ಟೇ ಬೇಗ ಜನರನ್ನು ಹಚ್ಚಿಕೊಳ್ಳುತ್ತಾರೆ. ಕೆಲವು ಬಾರಿ ಮಾತಿನಲ್ಲಿ ಸಿಲುಕಿಕೊಳ್ಳುತ್ತಾರೆ. ಇನ್ನು ಕೆಲವು ಜನರು ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ನಂತರ ಅವರು ಮೋಸ ಹೋದಾಗ ಪಶ್ಚಾತ್ತಾಪ ಪಡುತ್ತಾರೆ. ಹೀಗಿರುವಾಗ ಯಾವ ಜನರನ್ನು ನಂಬಬೇಕು ಎಂಬುದೇ ಕೆಲವು ಬಾರಿ ಗೊಂದಲವಾಗುತ್ತದೆ. ನಂಬಿಕಸ್ಥನಲ್ಲಿರುವ ಕೆಲವು ಗುಣಗಳನ್ನು ಆಚಾರ್ಯ ಚಾಣಕ್ಯರು(Acharya Chanakya) ಹೇಳಿದ್ದಾರೆ. ಈ ಕೆಲವು ಗುಣಗಳಿರುವ ವ್ಯಕ್ತಿ ನಿಜವಾಗಿಯೂ ನಂಬಿಕಸ್ಥನಾಗಿರುತ್ತಾನೆ.

ಯಾರೇ ಆಗಲಿ ಅವರನ್ನು ನಂಬುವ ಮೊದಲು ಪರೀಕ್ಷಿಸಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ ವಿಶ್ವಾಸಾರ್ಹ ವ್ಯಕ್ತಿಗೆ ಇರುವ ಗುಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಕೆಲವು ಮಾನದಂಡಗಳನ್ನು ಪೂರೈಸುವ ವ್ಯಕ್ತಿ ನಂಬಿಕಸ್ಥನಾಗಿರುತ್ತಾನೆ. ನಿಮ್ಮ ಸ್ನೇಹಿತ ನಿಮಗೆ ಎಷ್ಟು ಹತ್ತಿರದವನಾಗಿದ್ದರೂ ನಿಮ್ಮ ಕೆಲವು ರಹಸ್ಯ ವಿಚಾರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಕೆಲವು ಬಾರಿ ನಿಮ್ಮ ಸ್ನೇಹದ ನಡುವೆ ಬಿರುಕು ಬಿಟ್ಟಾಗ ಆತ ನಿಮ್ಮೆಲ್ಲಾ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಚಾಣಕ್ಯರು ಹೇಳುತ್ತಾರೆ.

ಒಳ್ಳೆಯ ಗುಣಮಟ್ಟದ ಚಿನ್ನವನ್ನು ಗುರುತಿಸಲು ಚಿನ್ನವನ್ನು ಉಜ್ಜುತ್ತಾರೆ, ಬೆಂಕಿಯಲ್ಲಿ ಬಿಸಿ ಮಾಡುತ್ತಾರೆ, ಇಷ್ಟೆಲ್ಲಾ ಆದ ಬಳಿಕ ಚಿನ್ನದ ಗುಣಮಟ್ಟವನ್ನು ಗುರುತಿಸಲಾಗುತ್ತದೆ. ಬಳಿಕ ಚಿನ್ನವು ನಿಜವಾದದ್ದೋ ಇಲ್ಲವೋ ಗೊತ್ತಾಗುತ್ತದೆ. ಅದೇ ರೀತಿಯಲ್ಲಿ ವ್ಯಕ್ತಿಯನ್ನು ಪರೀಕ್ಷಿಸಲು 4 ವಿಷಯಗಳನ್ನು ನೆನಪಿಟ್ಟುಕೊಳ್ಳಿ.

ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು ಆತ ಇತರರ ಬಗ್ಗೆ ಎಷ್ಟು ಯೋಚಿಸುತ್ತಾನೆ ಎಂಬುದನ್ನು ಪರಿಶೀಲಿಸಿ. ತ್ಯಾಗ ಪ್ರಜ್ಞೆ ಇದೆಯೋ ಇಲ್ಲವೋ, ಇತರರ ಜೀವನವನ್ನು ಸಂತೋಷದಿಂದ ಇಡಲು ತನ್ನ ಖುಷಿಯನ್ನು ತ್ಯಾಗ ಮಾಡಲು ಸಿದ್ಧನಿದ್ದಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಇತರರ ಬಗ್ಗೆ ಕಾಳಜಿಯೂ ಇಲ್ಲದೇ ತನ್ನ ಸ್ವಂತ ಜೀವನದ ಬಗ್ಗೆ ಮಾತ್ರ ಚಿಂತಿಸುವ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ. ಆತ ಯಾವಾಗಲೂ ಇತರರಿಗೆ ಕಷ್ಟ ಸಮಯದಲ್ಲಿ ಸಹಾಯ ಮಾಡಲು ಮುಂದಾಗುವುದಿಲ್ಲ.

ಶಾಂತಿಯಿಂದ, ಸತ್ಯವನ್ನು ಮಾತನಾಡುವ ಜನರು ಎಂದಿಗೂ ಒಳ್ಳೆಯವರಾಗಿರುತ್ತಾರೆ. ಧರ್ಮಮಾರ್ಗವನ್ನು ಅನುಸರಿಸುವ ಜನರು ಹೆಚ್ಚಾಗಿ ಒಳ್ಳೆಯವರಾಗಿರುತ್ತಾರೆ. ಅಂತಹ ಜನರನ್ನು ನೀವು ನಂಬಬಹುದು. ನಿಮ್ಮಲ್ಲಿಯೂ ಇಂತಹ ಗುಣಗಳಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು.

ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸಿ ಹಣ ಸಂಪಾದಿಸುವ ಜನರು ನಂಬಿಕ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಹಾಗಾಗಿ ನಿಮ್ಮಲ್ಲಿಯೂ ಸಹ ಇಂತಹ ಗುಣಗಳಿರಲಿ. ಜನರು ನಿಮ್ಮನ್ನು ಹೆಚ್ಚು ಪ್ರೀತಿಸುವುದರ ಜತೆಗೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅಧರ್ಮದ ಹಾದಿಯನ್ನು ಅನುಸರಿಸುವ ಜನರು, ತಪ್ಪು ದಾರಿಯಲ್ಲಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಎಂದಿಗೂ ನಂಬಿಕ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇದನ್ನೂ ಓದಿ:

Chanakya Niti: ನಿಮ್ಮ ಈ ತಪ್ಪು ಜೀವನಪೂರ್ತಿ ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಚ್ಚರ!- ಚಾಣಕ್ಯ ನೀತಿ

Chanakya Niti: ಯಾವ ವಿಷಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂಬುದು ಗೊತ್ತಾ? – ಚಾಣಕ್ಯ ನೀತಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ