Chanakya Niti: ಯಾವ ವಿಷಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂಬುದು ಗೊತ್ತಾ? – ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂದು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಧೈರ್ಯ, ಬುದ್ಧಿವಂತಿಕೆ, ಹಸಿವಿನಲ್ಲಿ ಮಹಿಳೆಯರು ಮುಂದಿದ್ದಾರೆ.
ಆಚಾರ್ಯ ಚಾಣುಕ್ಯರು ಮಹಾನ್ ವಿದ್ವಾಂಸರು. ಅವರನ್ನು ಅರ್ಥಶಾಸ್ತ್ರದ ಶ್ರೇಷ್ಠ ಜ್ಞಾನಿಯೆಂದು ಪರಿಗಣಿಸಲಾಗುತ್ತದೆ. ಅವರು ನಾಟ್ಯಶಾಸ್ತ್ರ ಸೇರಿದಂತೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಜೀವನದ ಅನುಭವಗಳನ್ನು ಹೇಳುವ ಮೂಲಕ ಇಂದಿನ ಯುವ ಪೀಳಿಗೆಗೂ ಸಹಾಯಕವಾಗುವ ಕೆಲವು ವಿಷಯಗಳನ್ನು ತಿಳಿ ಹೇಳಿದ್ದಾರೆ. ಚಾಣಕ್ಯರ ನೀತಿಯನ್ನು ಪಾಲಿಸುವ ಮೂಲಕ ನಿಮ್ಮ ಬದುಕಿನಲ್ಲಿ ಯಶಸ್ಸನ್ನು ಪಡೆಯಬಹುದು. ಇಂದಿಗೂ ಜನರು ತಮ್ಮ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗಲು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂದು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಧೈರ್ಯ, ಬುದ್ಧಿವಂತಿಕೆ, ಹಸಿವಿನಲ್ಲಿ ಮಹಿಳೆಯರು ಮುಂದಿದ್ದಾರೆ. ಆಚಾರ್ಯ ಚಾಣಕ್ಯ ನೀತಿಯ ಸಾರ ಈ ಕೆಳಗಿನಂತಿದೆ.
ಹಸಿವು ಆಚಾರ್ಯ ಚಾಣುಕ್ಯರ ಪ್ರಕಾರ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಹಸಿವಾಗುತ್ತದೆ. ಹೆಚ್ಚು ಆಹಾರವನ್ನು ಸೇವಿಸುತ್ತಾರೆ. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಶಕ್ತಿ ಬೇಕು. ಹಾಗಾಗಿಯೇ ಅವರು ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಮತ್ತು ಹಸಿವು ಹೆಚ್ಚು.
ನಾಲ್ಕು ಪಟ್ಟು ಹೆಚ್ಚು ಬುದ್ಧಿವಂತರು ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಮಹಿಳೆ ಮನಸ್ಸು ಮಾಡಿದರೆ ಯಾವ ಸಮಸ್ಯೆಯನ್ನೂ ಕ್ಷಣಾರ್ಧದಲ್ಲಿ ಪರಿಹರಿಸಬಲ್ಲಳು. ಅವರು ತಮ್ಮ ಬುದ್ಧಿವಂತಿಕೆಯ ಮೂಲಕ ಸಮಸ್ಯೆಯನ್ನು ನಿಭಾಯಿಸುತ್ತಾರೆ. ಹಾಗಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರು ಎಂಬುದಾಗಿ ಚಾಣಕ್ಯ ನೀತಿ ಸಾರುತ್ತದೆ.
ಆರು ಪಟ್ಟು ಧೈರ್ಯ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ದೈಹಿಕ ಶಕ್ತಿ ಇರಬಹುದು. ಆದರೆ ಮಹಿಳೆಯು ತನ್ನ ಧೈರ್ಯತನದಿಂದ ಯಾವುದೇ ಸಮಸ್ಯೆಯನ್ನೂ ಪರಿಹರಿಸುತ್ತಾಳೆ. ಆಚಾರ್ಯ ಚಾಣುಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಆರು ಪಟ್ಟು ಹೆಚ್ಚು ದೈರ್ಯವಂತರಾಗಿರುತ್ತಾರೆ.
ಇದನ್ನೂ ಓದಿ:
Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ