Prathama Ekadashi 2021: ಇಂದು ಪ್ರಥಮ ಏಕಾದಶಿ; ಏನು ಈ ದಿನ ಮಹತ್ವ, ಆಚರಣೆಯ ವಿಶೇಷ?

ಇಂದು ಪ್ರಥಮ ಏಕಾದಶಿ ಅಥವಾ ಶಯನಿ ಏಕಾದಶಿ. ಅಂದಹಾಗೆ ಪರಮಾತ್ಮನಾದ ವಿಷ್ಣುವು ಯೋಗ ನಿದ್ರೆಗೆ ತೆರಳುವ ದಿನ ಇಂದು. ಇಂದಿನಿಂದ ನಾಲ್ಕು ಮಾಸಗಳ ಕಾಲ ಆ ಭಗವಂತನು ಯೋಗ ನಿದ್ರೆಯಲ್ಲಿ ಇರುತ್ತಾನೆ. ಈ ನಾಲ್ಕು ಮಾಸಗಳಳನ್ನು ಚಾತುರ್ಮಾಸ್ಯ ವ್ರತ ಎಂದು ಆಚರಿಸಲಾಗುತ್ತದೆ.

Prathama Ekadashi 2021: ಇಂದು ಪ್ರಥಮ ಏಕಾದಶಿ; ಏನು ಈ ದಿನ ಮಹತ್ವ, ಆಚರಣೆಯ ವಿಶೇಷ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jul 20, 2021 | 6:59 AM

ಇಂದು (ಜುಲೈ 20, 2021) ಆಷಾಢ ಮಾಸದ ಶುಕ್ಲ ಪಕ್ಷದ (ಶುದ್ಧ) ಏಕಾದಶಿ. ಇದನ್ನು ಪ್ರಥಮ ಏಕಾದಶಿ ಅಥವಾ ಶಯನಿ ಏಕಾದಶಿ (Shayani Ekadashi) ಅಂತ ಕರೆಯಲಾಗುತ್ತದೆ. ಹಲವರು ಪ್ರಥಮ ಏಕಾದಶಿ ಹಾಗೂ ವೈಕುಂಠ ಏಕಾದಶಿಗೂ ಗೊಂದಲ ಮಾಡಿಕೊಳ್ಳುವುದಂಟು. ನೆನಪಿರಲಿ, ಇಂದಿನದು ಪ್ರಥಮ ಏಕಾದಶಿಯೇ ಹೊರತು ವೈಕುಂಠ ಏಕಾದಶಿಯಲ್ಲ. ಅಂದ ಹಾಗೆ ಆಯಾ ಪ್ರಾದೇಶಿಕ ಆಚರಣೆ ಹಾಗೂ ಸಂಪ್ರದಾಯ ರೀತಿಯಾಗಿ ಆಷಾಢ ಮಾಸದ ವಿಶೇಷಗಳನ್ನು ಆಚರಿಸಲಾಗುತ್ತದೆ. ಕೆಲವರು ಯಾವುದೇ ಶುಭ ಕಾರ್ಯವನ್ನು ಈ ಮಾಸದಲ್ಲಿ ಮಾಡುವುದಿಲ್ಲ. ಮತ್ತೆ ಕೆಲವು ಆಷಾಧ ಮಾಸದ ಶುಕ್ಲ ಪಕ್ಷದಲ್ಲಿ ಆಚರಣೆಗಳನ್ನು ಮಾಡುತ್ತಾರೆ. ಅದೇ ರೀತಿ ಏಕಾದಶಿ ಆಚರಣೆ ವಿಚಾರದಲ್ಲೂ ಒಂದೊಂದು ಪಂಗಡ ಒಂದೊಂದು ರೀತಿಯ ಆಚರಣೆ ಮಾಡುತ್ತದೆ. ಕೆಲವರು ನಿರ್ಜಲ ಉಪವಾಸವನ್ನು ಮಾಡುತ್ತಾರೆ. ಅದರರ್ಥ ನೀರನ್ನು ಸಹ ಕುಡಿಯುವುದಿಲ್ಲ. ಮತ್ತೆ ಕೆಲವರು ಹಾಲು- ಹಣ್ಣಿನ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಅಕ್ಕಿಯಿಂದ ಮಾಡಿದ್ದನ್ನು ಹೊರತುಪಡಿಸಿದ ತಿಂಡಿಯನ್ನು ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ. ಈ ಕಲಿಯುಗದಲ್ಲಿ ಎಂಥವರೂ ಮಾಡಬಹುದಾದ ಶ್ರೇಷ್ಠವಾದ ವ್ರತ ಇದ್ದರೆ ಅದು ಏಕಾದಶಿ ಎಂದು ಹೇಳಲಾಗಿದೆ. ಇದಕ್ಕೆ ಯಾವುದೇ ಜಾತಿಯ ಭೇದ ಇಲ್ಲ.

ಅದರಲ್ಲೂ ಪ್ರಥಮ ಏಕಾದಶಿಯಂತೂ ಇನ್ನೂ ಶ್ರೇಷ್ಠವಾದದ್ದು. ಈ ದಿನ ಉಪವಾಸ ಮಾಡಿದಲ್ಲಿ ಎಲ್ಲ ಪಾಪವೂ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಒಬ್ಬ ವ್ಯಕ್ತಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪನ್ನು ಆ ಭಗವಂತೆ ಕ್ಷಮಿಸುತ್ತಾನೆ. ಅಂದಹಾಗೆ ಪರಮಾತ್ಮನಾದ ವಿಷ್ಣುವು ಯೋಗ ನಿದ್ರೆಗೆ ತೆರಳುವ ದಿನ ಇಂದು. ಇಂದಿನಿಂದ ನಾಲ್ಕು ಮಾಸಗಳ ಕಾಲ ಆ ಭಗವಂತನು ಯೋಗ ನಿದ್ರೆಯಲ್ಲಿ ಇರುತ್ತಾನೆ. ಈ ನಾಲ್ಕು ಮಾಸಗಳಳನ್ನು ಚಾತುರ್ಮಾಸ್ಯ ವ್ರತ ಎಂದು ಆಚರಿಸಲಾಗುತ್ತದೆ. ಇಂದಿನಿಂದ ಶುರುವಾಗಿ ಸನ್ಯಾಸದಲ್ಲಿ ಇರುವವರು ಒಂದೆಡೆಯಿಂದ ಕದಲುವುದಿಲ್ಲ. ತಮ್ಮ ಅಧ್ಯಯನದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಕಠಿಣವಾದ ವ್ರತ ನಿಯಮಗಳನ್ನು ಪಾಲಿಸುತ್ತಾರೆ. ಆಹಾರ ಪದ್ಧತಿಯಲ್ಲೂ ಬದಲಾವಣೆ ಆಗುತ್ತದೆ. ಇಲ್ಲಿಂದ ಆಚೆಗೆ ಒಂದೊಂದು ಮಾಸದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ವರ್ಜ್ಯ ಮಾಡಬೇಕಾಗುತ್ತದೆ.

ಇನ್ನು ಪ್ರಥಮ ಏಕಾದಶಿಯಂದು ಬ್ರಾಹ್ಮಣ ಸಮುದಾಯದ ಉಪ ಪಂಗಡದವರಾದ ಮಾಧ್ವರು ತಪ್ತ ಮುದ್ರಾಧಾರಣೆ ಎಂದು ಮಾಡಿಸುತ್ತಾರೆ. ಶಂಖ- ಚಕ್ರದ ಚಿಹ್ನೆಯನ್ನು ಬೆಂಕಿಯಲ್ಲಿ ಕಾಯಿಸಿ, ದೇಹದ ಮೇಲೆ ಹಾಕಲಾಗುತ್ತದೆ. ಕೆಲವು ಮಠದವರು ಐದು ಕಡೆ, ಕೆಲವರು ಎರಡು ಕಡೆ ಈ ಮುದ್ರೆಯನ್ನು ಹಾಕುತ್ತಾರೆ. ಏಕಾದಶಿಯ ಹಿಂದಿನ ರಾತ್ರಿಯಿಂದಲೇ, ಅಂದರೆ ದಶಮಿ ತಿಥಿಯ ರಾತ್ರಿಯಿಂದಲೇ ಉಪವಾಸ ಆರಂಭವಾಗುತ್ತದೆ. ಮಾರನೇ ದಿನ ಏಕಾದಶಿ ಸಂಪೂರ್ಣ ಉಪವಾಸ ಇದ್ದು, ಅದರ ಮರುದಿನ, ದ್ವಾದಶಿಯಂದು ಬೆಳಗ್ಗೆ ಪಾರಣೆ (ಭೋಜನ) ಮಾಡುತ್ತಾರೆ. ಅದಕ್ಕೆ ಮುಂಚಿತವಾಗಿ, ಪಂಚಗವ್ಯ (ಹಸುವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದಿಂದ ತಯಾರಾದದ್ದು) ಸ್ವೀಕರಿಸಿ, ದೇಹವನ್ನು ಶುದ್ಧಿ ಮಾಡಿಕೊಳ್ಳಲಾಗುತ್ತದೆ.

ವರ್ಷದಲ್ಲಿ ಬೇರೆಲ್ಲ ಏಕಾದಶಿಗಳಂದು ಉಪವಾಸ ಮಾಡಲು ಸಾಧ್ಯವಿಲ್ಲದವರು ಸಹ ಪ್ರಥಮ ಏಕಾದಶಿ ಹಾಗೂ ವೈಕುಂಠ ಏಕಾದಶಿಗಳಂದು ಕಡ್ಡಾಯವಾಗಿ ವ್ರತಾಚರಣೆ ಮಾಡುವುದುಂಟು. ಆದರೆ ವ್ರತ ಆಚರಣೆಗೆ ಮುಂಚೆ ಅದರ ಹಿನ್ನೆಲೆ ತಿಳಿದು ಮಾಡಿದರೆ ಹೆಚ್ಚು ಫಲವಾದ್ದರಿಂದ ಇಲ್ಲಿ ತಿಳಿಸಲಾಗಿದೆ. ಆದರೆ ಯಾವುದೇ ವ್ರತಾಚರಣೆಗಳಿಂದ ಅಬಲರು, ವಯಸ್ಸಿನಲ್ಲಿ ಹಿರಿಯರು, ಅನಾರೋಗ್ಯ ಸಮಸ್ಯೆ ಇರುವವರು ಹಾಗೂ ಮಕ್ಕಳಿಗೆ ವಿನಾಯಿತಿ ನೀಡಲಾಗಿದೆ. ಏಕಾದಶಿಯನ್ನು ಆಚರಿಸಲು ಸಾಧ್ಯವಾಗುವುದೇ ಇಲ್ಲ ಎಂದ ಪಕ್ಷದಲ್ಲಿ ಆ ಭಗವಂತನ ಸ್ಮರಣೆ ಮಾಡಿದರೂ ಆಯಿತು. ಆದರೆ ಸಾಧ್ಯವಾದಷ್ಟೂ ಪ್ರಯತ್ನಿಸಿ; ಏಕೆಂದರೆ ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬಂದಿರುವ ಏಕಾದಶಿಯ ಹಿನ್ನೆಲೆಯಲ್ಲಿ ಆರೋಗ್ಯದ ಕಾಳಜಿಯೂ ಇದೆ.

ಇದನ್ನೂ ಓದಿ: ಏಕಾದಶಿ ಉಪವಾಸ; ನಮ್ಮೊಳಗಿನ ಬೆಳಕು ಕಾಣಿಸುವ ಆಚರಣೆ

(Today, July 20, 2021 Prathama Ekadashi. Know the importance, significance and ritual of the day)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್